ಇನ್ನು ಈ 16 ಔಷಧಿ ಖರೀದಿಸಲು ಪ್ರಿಸ್ಕ್ರಿಪ್ಷನ್ ಬೇಕಾಗಿಲ್ಲ; ಶೀಘ್ರದಲ್ಲೇ ಪರಿಷ್ಕೃತ ನಿಯಮ ಜಾರಿ

| Updated By: ಸುಷ್ಮಾ ಚಕ್ರೆ

Updated on: May 28, 2022 | 8:51 AM

ಆರೋಗ್ಯ ಸಚಿವಾಲಯ ಪ್ರಸ್ತಾವನೆ ಮಾಡಿರುವ 16 ಔಷಧಿಗಳಲ್ಲಿ ಪ್ಯಾರೆಸಿಟಮಾಲ್ 500, ಕೆಲವು ಫಂಗಲ್ ಕ್ರೀಮ್‌ಗಳು ಸೇರಿವೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ 16 ಔಷಧಿ ಖರೀದಿಸಲು ಪ್ರಿಸ್ಕ್ರಿಪ್ಷನ್ ಬೇಕಾಗಿಲ್ಲ; ಶೀಘ್ರದಲ್ಲೇ ಪರಿಷ್ಕೃತ ನಿಯಮ ಜಾರಿ
ಮಾತ್ರೆ
Image Credit source: DNA
Follow us on

ನವದೆಹಲಿ: ಜನರ ಅನುಕೂಲಕ್ಕಾಗಿ ಸರ್ಕಾರವು ಕೌಂಟರ್‌ನಲ್ಲಿ ಔಷಧಗಳನ್ನು ಖರೀದಿಸುವ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದೆ. ಈ ನಿಯಮ ಜಾರಿಗೆ ಬಂದ ನಂತರ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆಯೇ ಜನರು 16 ಬಗೆಯ ಔಷಧಗಳನ್ನು ನೇರವಾಗಿ ಮೆಡಿಕಲ್ ಶಾಪ್​ನಲ್ಲಿ (Medical Shop) ಖರೀದಿಸಲು ಸಾಧ್ಯವಾಗಲಿದೆ. ಆದರೂ ಯಾವುದೇ ಔಷಧಿಯನ್ನು ಖರೀದಿಸುವ ಮೊದಲು ವೈದ್ಯರ ಸಲಹೆ ಮತ್ತು ಸೂಚನೆಗಳನ್ನು ಹೊಂದಿರುವುದು ಅವಶ್ಯಕ. ನಮಗೆ ನಾವೇ ಮಾತ್ರೆ, ಟಾನಿಕ್ ಖರೀದಿಸಿ, ಸೇವಿಸುವುದು ಒಳ್ಳೆಯದಲ್ಲ.

ಕೌಂಟರ್ ಕೆಟಗರಿಯನ್ನು ಪರಿಚಯಿಸಲು ಸರ್ಕಾರ ಮುಂದಾಗಿದೆ. ಇದಾದ ನಂತರ ಔಷಧ ಮತ್ತು ಸೌಂದರ್ಯವರ್ಧಕದ ನಿಯಮವನ್ನು ಬದಲಾಯಿಸಬೇಕಾಗುತ್ತದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಕರಡು ಅಧಿಸೂಚನೆಯನ್ನೂ ಹೊರಡಿಸಿದ್ದು, ಇದರಲ್ಲಿ 16 ಬಗೆಯ ಔಷಧಗಳನ್ನು ಸೇರಿಸಲು ಉದ್ದೇಶಿಸಲಾಗಿದೆ. ಈ ನಿಯಮವನ್ನು ಜಾರಿಗೆ ತಂದ ನಂತರ, ಈ ಔಷಧಿಗಳನ್ನು ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಇಲ್ಲದೆ ಖರೀದಿಸಬಹುದು ಎಂದು ಮನಿಕಂಟ್ರೋಲ್‌ನಲ್ಲಿ ವರದಿ ಮಾಡಿದೆ.

ಇದನ್ನೂ ಓದಿ: ಸರ್ಕಾರಿ ವೈದ್ಯರು ಖಾಸಗಿ ಕಂಪನಿ ಔಷಧಿ ಬರೆದರೆ ಕ್ರಮ; ಆರೋಗ್ಯ ಸಚಿವ ಡಾ ಸುಧಾಕರ್

ಇದನ್ನೂ ಓದಿ
Sri Lanka Crisis: ಆರ್ಥಿಕ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಭಾರತಕ್ಕೆ ಧನ್ಯವಾದ ತಿಳಿಸಿದ ಶ್ರೀಲಂಕಾ ಪ್ರಧಾನಿ
ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಿಡಿದೆದ್ದ ನರ್ಸ್​ಗಳು, ಹೊರಗುತ್ತಿಗೆ ನೀಡುವ ನಿರ್ಧಾರ ಹಿಂಪಡೆತಕ್ಕೆ ಒತ್ತಾಯಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ
Vinayak Damodar Savarkar: ವಿನಾಯಕ ದಾಮೋದರ ಸಾವರ್ಕರ್ ಚಿತ್ಪಾವನ ಬ್ರಾಹ್ಮಣ ಕುಲದ ಅಪ್ಪಟ ಸ್ವಾತಂತ್ರ್ಯ ಯೋಧ, ರಾಜಕಾರಣಿ, ಲೇಖಕ, ಸಮಾಜ ಸೇವಕ!

ಆರೋಗ್ಯ ಸಚಿವಾಲಯ ಪ್ರಸ್ತಾವನೆ ಮಾಡಿರುವ 16 ಔಷಧಿಗಳಲ್ಲಿ ಪ್ಯಾರೆಸಿಟಮಾಲ್ 500, ಕೆಲವು ಫಂಗಲ್ ಕ್ರೀಮ್‌ಗಳು ಸೇರಿವೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸಚಿವಾಲಯವು ತನ್ನ ಈ ಪ್ರಸ್ತಾವನೆಗೆ ಜನರಿಂದ ಸಲಹೆ ಕೇಳಿದ್ದು, ಒಂದು ತಿಂಗಳೊಳಗೆ ಸಾರ್ವಜನಿಕರು ಸಲಹೆಗಳನ್ನು ನೀಡಬಹುದು. ಪ್ರಸ್ತುತ, ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಅನೇಕ ಔಷಧಿಗಳು ಮೆಡಿಕಲ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಆದರೆ, ಇದಕ್ಕೆ ಸರಿಯಾದ ಕಾನೂನು ಅಥವಾ ನಿಯಮಗಳಿಲ್ಲ.

ಷರತ್ತುಗಳು ಅನ್ವಯ:
ಈ ವರ್ಷದ ಆರಂಭದಲ್ಲಿ, ಔಷಧಗಳ ತಾಂತ್ರಿಕ ಸಲಹಾ ಮಂಡಳಿಯು OTC ಔಷಧಿಗಳ ಕುರಿತು ಸರ್ಕಾರದ ಪ್ರಸ್ತಾವನೆಯನ್ನು ಅನುಮೋದಿಸಿತು. ಈ ಕುರಿತಾದ ಚರ್ಚೆಯ ನಂತರ 16 ಔಷಧಗಳನ್ನು ಅನುಮೋದಿಸಲಾಗಿದೆ. ಇದು ಜಾರಿಗೆ ಬಂದ ಬಳಿಕ ಹೆಚ್ಚಿನ ಔಷಧಗಳನ್ನೂ ಇದರಲ್ಲಿ ಸೇರಿಸಲಾಗುವುದು. ಒಟಿಸಿ ವರ್ಗವನ್ನು ಜಾರಿಗೆ ತರಲು ಸರ್ಕಾರ ಕೆಲವು ಷರತ್ತುಗಳನ್ನು ಹಾಕಿದೆ. ಇದರ ಅಡಿಯಲ್ಲಿ OTC ವರ್ಗದ ಔಷಧಿಗಳನ್ನು ಅದರ ಅವಧಿಯು 5 ದಿನಗಳನ್ನು ಮೀರದಿದ್ದಾಗ ಮಾತ್ರ ಔಷಧಿ ಅಂಗಡಿಗಳಲ್ಲಿ ಮಾರಾಟ ಮಾಡಬಹುದು. ಅಲ್ಲದೆ, 5 ದಿನಗಳ ಕಾಲ ಔಷಧಿ ಸೇವಿಸಿದ ನಂತರವೂ ರೋಗಿಗೆ ಪರಿಹಾರ ಸಿಗದಿದ್ದರೆ ರೋಗಿಯು ವೈದ್ಯರನ್ನು ಸಂಪರ್ಕಿಸುವುದು ಅನಿವಾರ್ಯವಾಗುತ್ತದೆ. ಪ್ರತಿ ಪ್ಯಾಕ್ ರೋಗಿಗೆ ಅಗತ್ಯವಾದ ಮಾಹಿತಿಯನ್ನು ಒಳಗೊಂಡಿರಬೇಕು. ಈ ಪ್ಯಾಕ್​ನ ಗಾತ್ರವು 5 ದಿನಗಳ ಡೋಸೇಜ್ ಅನ್ನು ಮೀರಬಾರದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:46 am, Sat, 28 May 22