ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಿಡಿದೆದ್ದ ನರ್ಸ್‌ಗಳು, ಹೊರಗುತ್ತಿಗೆ ನೀಡುವ ನಿರ್ಧಾರ ಹಿಂಪಡೆತಕ್ಕೆ ಒತ್ತಾಯಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ
ನರ್ಸ್ ನೇಮಕಾತಿಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಇಂದಿನಿಂದ ಮಹಾರಾಷ್ಟ್ರ ನರ್ಸ್‌ಗಳು ಅನಿರ್ದಿಷ್ಟಾವಧಿ ಮುಷ್ಕರ ಹೂಡಲಿದ್ದಾರೆ. ಪ್ರತಿಭಟನೆಯಲ್ಲಿ 15000 ನರ್ಸ್‌ಗಳು ಭಾಗಿಯಾಗಲಿದ್ದಾರೆ.
ಮಹಾರಾಷ್ಟ್ರ: ನರ್ಸ್ ನೇಮಕಾತಿಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡುವ ಮಹಾರಾಷ್ಟ್ರ (Maharashtra) ಸರ್ಕಾರದ ನಿರ್ಧಾರವನ್ನು ಖಂಡಿಸಿ ಇಂದಿನಿಂದ ಮಹಾರಾಷ್ಟ್ರ ನರ್ಸ್ (Nurse)ಗಳು ಅನಿರ್ದಿಷ್ಟಾವಧಿ ಮುಷ್ಕರ ಹೂಡಲಿದ್ದಾರೆ. ನರ್ಸ್‌ಗಳ ನೇಮಕಾತಿಯನ್ನು ಖಾಸಗಿ ಏಜೆನ್ಸಿಗಳಿಗೆ ಹೊರಗುತ್ತಿಗೆ ನೀಡುವ ಬಗ್ಗೆ ಸರ್ಕಾರ ನಿರ್ಧರಿಸಿದೆ. ಇದನ್ನು ಹಿಂಪಡೆಯುವಂತೆ ಒತ್ತಾಯಗಳು, ಆಗ್ರಹಗಳು ಕೇಳಿಬಂದವು. ಇದೀಗ ನರ್ಸ್‌ಗಳು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಇಂದಿನಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ (Protest) ನಡೆಸಿ ನಿರ್ಧಾರವನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲಿದ್ದಾರೆ.
ಸರ್ಕಾರ ಹೊರಗುತ್ತಿಗೆ ನೀಡುವ ನಿರ್ಧಾರವನ್ನ ಬದಲಿಸಬೇಕು. ಏಕೆಂದರೆ, ಹೊರಗುತ್ತಿಗೆಯಿಂದ ನರ್ಸ್‌ಗಳು ಶೋಷಣೆಗೆ ಗುರಿಯಾಗುತ್ತಾರೆ, ಹೊರಗುತ್ತಿಗೆಯಿಂದ ನರ್ಸ್ಗಳಿಗೆ ಸಂಬಳ ಕಡಿಮೆ ಬರುತ್ತದೆ. ಹೀಗಾಗಿ ಹೊರಗುತ್ತಿಗೆ ನಿರ್ಧಾರ ಕೈಬಿಡುವಂತೆ ನರ್ಸ್‌ಗಳು ಸರ್ಕಾರವನ್ನು ಒತ್ತಾಯಿಸಲಿದ್ದಾರೆ. ಇಂದಿನಿಂದ ಆರಂಭಗೊಳ್ಳುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಮುಂಬೈನಲ್ಲಿರುವ 1500 ನರ್ಸ್‌ಗಳು ಸೇರಿದಂತೆ ಸುಮಾರು 15ಸಾವಿರ ನರ್ಸ್‌ಗಳು ಭಾಗಿಯಾಗಲಿದ್ದಾರೆ.
ಸರ್ಕಾರದ ನಿರ್ಧಾರವನ್ನು ಖಂಡಿಸಿ ಮಹಾರಾಷ್ಟ್ರ ರಾಜ್ಯ ದಾದಿಯರ ಸಂಘ (MSNA) ಮೇ 27-28 ರಂದು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿತ್ತು. ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಎಂಎಸ್‌ಎನ್‌ಎ ಪ್ರಧಾನ ಕಾರ್ಯದರ್ಶಿ ಸುಮಿತ್ರಾ ತೋಟೆ, “ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸಲಾಗಿಲ್ಲ. ಆದ್ದರಿಂದ ನಾವು ಮೇ 28 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ” ಎಂದರು.
”ನರ್ಸ್‌ಗಳ ನೇಮಕಾತಿಯನ್ನು ಹೊರಗುತ್ತಿಗೆ ನೀಡಿದರೆ ಅವರು ಶೋಷಣೆಗೆ ಗುರಿಯಾಗುತ್ತಾರೆ ಮತ್ತು ಕಡಿಮೆ ಸಂಭಾವನೆ ಪಡೆಯುತ್ತಾರೆ. ಮುಂಬೈನಲ್ಲಿ ಸುಮಾರು 1,500 ಸೇರಿದಂತೆ ಸರ್ಕಾರಿ ಆಸ್ಪತ್ರೆಗಳ 15,000 ಕ್ಕೂ ಹೆಚ್ಚು ದಾದಿಯರು ಮುಷ್ಕರ ನಡೆಸಲಿದ್ದಾರೆ. ಮಹಾರಾಷ್ಟ್ರ ರಾಜ್ಯ ದಾದಿಯರ ಸಂಘ ತನ್ನ ಸದಸ್ಯರಿಗೆ ನರ್ಸಿಂಗ್ ಮತ್ತು ಶಿಕ್ಷಣ ಭತ್ಯೆಗಳನ್ನು ಪಾವತಿಸಲು ಕೇಳಿದೆ. ಕೇಂದ್ರ ಮತ್ತು ಕೆಲವು ರಾಜ್ಯಗಳು 7,200 ರೂ. ಶುಶ್ರೂಷಾ ಭತ್ಯೆಯನ್ನು ಪಾವತಿಸುತ್ತವೆ. ಇದರ ಪ್ರಯೋಜನವನ್ನು ಮಹಾರಾಷ್ಟ್ರದ ದಾದಿಯರಿಗೂ ವಿಸ್ತರಿಸಬೇಕು ಎಂದು ಟೋಟೆ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ವೇಣುಗೋಪಾಲ್ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
ನಿನ್ನೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮಹಾರಾಷ್ಟ್ರ ಶುಶ್ರೂಷಕರ ಸಂಘದ ಕಾರ್ಯದರ್ಶಿ, ”ನೇಮಕಾತಿ ಪ್ರಕ್ರಿಯೆ ಹೊರಗುತ್ತಿಗೆ ನೀಡಿದರೆ ಸಿಬ್ಬಂದಿ ಶೋಷಣೆ ಹೆಚ್ಚಾಗಲಿದೆ” ಎಂದರು. ನರ್ಸ್‌ಗಳು ಕೂಡ ತಮ್ಮ ವೇತನ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ. ಶುಕ್ರವಾರ ರಾಜ್ಯದಲ್ಲಿ ನರ್ಸ್‌ಗಳ ಮುಷ್ಕರ ಐದನೇ ದಿನವಾಗಿತ್ತು. ಮುಷ್ಕರ ನಿರತ ಸಿಬ್ಬಂದಿ ಪ್ರಕಾರ, ನಿರ್ಧಾರವನ್ನು ಜಾರಿಗೊಳಿಸಿದರೆ ಭತ್ಯೆಯಲ್ಲಿ ಇಳಿಕೆಗೆ ಕಾರಣವಾಗುತ್ತದೆ. ತುರ್ತು ಸೇವೆ ಹೊರತುಪಡಿಸಿ ಬೇರೆ ಯಾವುದೇ ಸೇವೆ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ವೇಣುಗೋಪಾಲ್ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:54 am, Sat, 28 May 22