Omicron Variant: ದೇಶದಲ್ಲಿ ಇನ್ನೆರಡು ಒಮಿಕ್ರಾನ್​ ಕೇಸ್​ಗಳು ಪತ್ತೆ; ಒಟ್ಟೂ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆ

| Updated By: Lakshmi Hegde

Updated on: Dec 07, 2021 | 7:52 AM

ದೇಶದಲ್ಲಿ ಮೊದಲ 2 ಒಮಿಕ್ರಾನ್​ ಕೇಸ್​ಗಳು ಪತ್ತೆಯಾಗಿದ್ದು ಕರ್ನಾಟಕದಲ್ಲಿ. ಅದಾದ ಬಳಿ ಗುಜರಾತ್​​ನ ಜಾಮ್​ನಗರದಲ್ಲಿ ಒಬ್ಬರಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಒಬ್ಬರಿಗೆ ಈ ಸೋಂಕು ತಗುಲಿದ್ದು ದೃಢಪಟ್ಟಿತ್ತು.

Omicron Variant: ದೇಶದಲ್ಲಿ ಇನ್ನೆರಡು ಒಮಿಕ್ರಾನ್​ ಕೇಸ್​ಗಳು ಪತ್ತೆ; ಒಟ್ಟೂ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆ
ಕೊರೊನಾ ಟೆಸ್ಟ್​ ಪ್ರಾತಿನಿಧಿಕ ಚಿತ್ರ
Follow us on

ಮುಂಬೈನಲ್ಲಿ ಸೋಮವಾರ ಇನ್ನೆರಡು ಒಮಿಕ್ರಾನ್​ ಪ್ರಕರಣ (Omicron Cases)ಗಳು ಪತ್ತೆಯಾಗಿದ್ದು, ಭಾರತದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 10 ಆಗಿದೆ ಎಂದು ನ್ಯಾಶನಲ್​ ಇನ್​ಸ್ಟಿಟ್ಯೂಟ್​ ಆಫ್​ ವೈರಲಾಜಿ ತಿಳಿಸಿದೆ. ಇದೀಗ ಒಮಿಕ್ರಾನ್​​ ಪತ್ತೆಯಾದ ಇಬ್ಬರೂ ಕೂಡ ಫೈಜರ್ ಕೊವಿಡ್​ 19 ಲಸಿಕೆ ಪಡೆದವರಾಗಿದ್ದು, ಸದ್ಯಕ್ಕೆ ಯಾವುದೇ ಲಕ್ಷಣಗಳೂ ಇಲ್ಲ. ಇಬ್ಬರನ್ನೂ ಮುಂಬೈನ ಸೆವೆನ್​ ಹಿಲ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಇದರಲ್ಲಿ ಒಬ್ಬಾತನಿಗೆ 37ವರ್ಷವಾಗಿದೆ. ನವೆಂಬರ್​ 25ರಂದು ದಕ್ಷಿಣ ಆಫ್ರಿಕಾದ ಜೊಹಾನ್ಸ್​ಬರ್ಗ್​​ನಿಂದ ಮುಂಬೈಗೆ ಆಗಮಿಸಿದ್ದರು. ಹಾಗೇ, ಇನ್ನೊಬ್ಬಾತ 36ವರ್ಷದ ಯುವಕನಾಗಿದ್ದು, ಅದೇ ದಿನ ಯುಎಸ್​​ನಿಂದ ಆಗಮಿಸಿದ್ದರು.  ಇವರಿಬ್ಬರ 5 ಮಂದಿ ಪ್ರಾಥಮಿಕ ಸಂಪರ್ಕಿತರು ಮತ್ತು 315 ದ್ವಿತೀಯ ಹಂತದ ಸಂಪರ್ಕಿತರನ್ನು ಟ್ರೇಸ್​ ಮಾಡಿ, ತಪಾಸಣೆಗೆ ಒಳಪಡಿಸಲಾಗಿದೆ. ಹಾಗೇ, ಇನ್ನೂ ಒಂದಷ್ಟು ಮಂದಿಯನ್ನು ಟ್ರೇಸ್​ ಮಾಡುವ ಕಾರ್ಯ ನಡೆಯುತ್ತಿದೆ.

ದೇಶದಲ್ಲಿ ಮೊದಲ 2 ಒಮಿಕ್ರಾನ್​ ಕೇಸ್​ಗಳು ಪತ್ತೆಯಾಗಿದ್ದು ಕರ್ನಾಟಕದಲ್ಲಿ. ಅದಾದ ಬಳಿ ಗುಜರಾತ್​​ನ ಜಾಮ್​ನಗರದಲ್ಲಿ ಒಬ್ಬರಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಒಬ್ಬರಿಗೆ ಈ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಆದರೆ ಭಾನುವಾರ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಏಳು ಮಂದಿಯಲ್ಲಿ ಈ ಸೋಂಕು ದೃಢಪಟ್ಟಿತ್ತು. ಅದಾದ ರಾಜಸ್ಥಾನದ ಜೈಪುರದ ಒಂದೇ ಕುಟುಂಬದ 9 ಮಂದಿಗೂ ಒಮಿಕ್ರಾನ್​ ತಗುಲಿದ್ದು ಗೊತ್ತಾಯ್ತು. ಈ ಮಧ್ಯೆ ದೆಹಲಿಯಲ್ಲಿಯೂ ಒಬ್ಬರಿಗೆ ಸೋಂಕು ದೃಢವಾಗಿತ್ತು. ಅವರು ಲೋಕ ನಾಯಕ ಜೈ ಪ್ರಕಾಶ್​ ನಾರಾಯಣ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.   ಈ ಒಮಿಕ್ರಾನ್​ ಹರಡುವಿಕೆ ಪ್ರಮಾಣ ಜಾಸ್ತಿಯಿರುವ ಹಿನ್ನೆಲೆಯಲ್ಲಿ ರಾಜ್ಯಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಸಿಕೆ ಅಭಿಯಾನದ ವೇಗವನ್ನೂ ಚುರುಕುಗೊಳಿಸಲಾಗಿದೆ.

ಇದನ್ನೂ ಓದಿ: David Warner: ಪುನೀತ್ ರಾಜ್​ಕುಮಾರ್ ಅಭಿಮಾನಿಗಳಿಂದ ಡೇವಿಡ್ ವಾರ್ನರ್​ಗೆ ವಿಶೇಷ ಬೇಡಿಕೆ: ಈಡೇರಿಸ್ತಾರ ಆಸೀಸ್ ಕ್ರಿಕೆಟಿಗ?