ಅಪಾಯದಲ್ಲಿರುವ ದೇಶಗಳಿಂದ ಒಡಿಶಾಗೆ ಆಗಮಿಸಿದ ಇಬ್ಬರು ವ್ಯಕ್ತಿಗಳಿಗೆ ಒಮ್ರಿಕಾನ್ ದೃಢ

| Updated By: ರಶ್ಮಿ ಕಲ್ಲಕಟ್ಟ

Updated on: Dec 06, 2021 | 6:23 PM

Omicron ನವೆಂಬರ್ 26 ರಿಂದ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸ್ವಾನಾ, ಚೀನಾ, ಜಿಂಬಾಬ್ವೆ, ಮಾರಿಷಸ್, ನ್ಯೂಜಿಲೆಂಡ್, ಹಾಂಗ್ ಕಾಂಗ್, ಸಿಂಗಾಪುರ್ ಮತ್ತು ಇಸ್ರೇಲ್ 11 ದೇಶಗಳಿಂದ 800 ಜನರು ಒಡಿಶಾಗೆ ಮರಳಿದ್ದಾರೆ ಎಂದು ಹಿರಿಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಅಪಾಯದಲ್ಲಿರುವ ದೇಶಗಳಿಂದ ಒಡಿಶಾಗೆ ಆಗಮಿಸಿದ ಇಬ್ಬರು ವ್ಯಕ್ತಿಗಳಿಗೆ ಒಮ್ರಿಕಾನ್ ದೃಢ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ನವೆಂಬರ್ 26 ರಿಂದ ವಿಶ್ವ ಆರೋಗ್ಯ ಸಂಸ್ಥೆ (WHO) ಕೊವಿಡ್ -19 ನ B.1.1.529 ರೂಪಾಂತರಿ ಕಾಳಜಿಯ ರೂಪಾಂತರವೆಂದು ಹೇಳಿ ಅದಕ್ಕೆ ಒಮಿಕ್ರಾನ್ (Omicron) ಎಂದು ಹೆಸರಿಟ್ಟಿದೆ. ಆದಾಗ್ಯೂ ಒಮ್ರಿಕಾನ್ ಸೋಂಕು ಇರುವ ದೇಶಗಳಿಂದ ಒಡಿಶಾಕ್ಕೆ(Odisha) ಬಂದಿರುವ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಅದೇ ವೇಳೆ ಎಷ್ಟು ಮಂದಿ ಹೊಸ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.  ನವೆಂಬರ್ 26 ರಿಂದ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸ್ವಾನಾ, ಚೀನಾ, ಜಿಂಬಾಬ್ವೆ, ಮಾರಿಷಸ್, ನ್ಯೂಜಿಲೆಂಡ್, ಹಾಂಗ್ ಕಾಂಗ್, ಸಿಂಗಾಪುರ್ ಮತ್ತು ಇಸ್ರೇಲ್ 11 ದೇಶಗಳಿಂದ 800 ಜನರು ಒಡಿಶಾಗೆ ಮರಳಿದ್ದಾರೆ ಎಂದು ಹಿರಿಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.  ಇವರಲ್ಲಿ ಇಬ್ಬರು ಒಮಿಕ್ರಾನ್ ಪಾಸಿಟಿವ್ ಆಗಿದ್ದು ಅವರ ಜೀನೋಮ್ ಅನುಕ್ರಮವನ್ನು ಭುವನೇಶ್ವರದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್ ನಲ್ಲಿ ನಡೆಸಲಾಗುತ್ತಿದೆ. ಶುಕ್ರವಾರದ ವೇಳೆಗೆ ವರದಿ ಬರಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಐಎಲ್‌ಎಸ್ ನಿರ್ದೇಶಕ ಅಜಯ್ ಪರಿದಾ ಹೇಳಿದ್ದಾರೆ.

ಒಡಿಶಾ ಸರ್ಕಾರವು ಪರೀಕ್ಷೆ ಮತ್ತು ಟ್ರ್ಯಾಕಿಂಗ್‌ಗಾಗಿ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು. ನವೆಂಬರ್‌ನಲ್ಲಿ ಒಡಿಶಾಕ್ಕೆ ಬಂದಿರುವ ವಿದೇಶಿಗಳ ಪೈಕಿ ಒಟ್ಟು 141 ಮಂದಿಗೆ ಕೊವಿಡ್ -19 ದೃಢಪಟ್ಟಿದ್ದು ಅವರ ಜೀನೋಮ್ ಅನುಕ್ರಮಗೊಳಿಸಲಾಗಿದೆ, ಆದರೆ ಅವುಗಳಲ್ಲಿ ಯಾವುದೂ ವೈರಸ್‌ನ ಒಮಿಕ್ರಾನ್ ರೂಪಾಂತರದ ಉಪಸ್ಥಿತಿಯನ್ನು ಹೊಂದಿರಲಿಲ್ಲ.   “28 ಕ್ಕಿಂತ ಕಡಿಮೆ ಸಿಟಿ ಮೌಲ್ಯವನ್ನು ಹೊಂದಿರುವ ಯಾವುದೇ ಕೊವಿಡ್-19 ಧನಾತ್ಮಕ ಮಾದರಿಯು ಜೀನೋಮ್ ಅನುಕ್ರಮಕ್ಕೆ ಒಳಗಾಗುತ್ತಿದೆ” ಎಂದು ಅವರು ಹೇಳಿದರು.

ಒಡಿಶಾಗೆ ಆಗಮಿಸಿದ 800 ಪ್ರಯಾಣಿಕರಲ್ಲಿ ಶೇಕಡಾ 40 ರಷ್ಟು ಮಂದಿ ಏರ್ ಸುವಿಧಾ ಪೋರ್ಟಲ್‌ನಲ್ಲಿ ತಪ್ಪು ವಿಳಾಸಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ನಮೂದಿಸಿದ್ದಾರೆ ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕ ನಿರಂಜನ್ ಮಿಶ್ರಾ ಹೇಳಿದ್ದಾರೆ.

ಡೆಲ್ಟಾ ಸೇರಿದಂತೆ ಇತರ ರೂಪಾಂತರಗಳ ಸೋಂಕಿಗೆ ಹೋಲಿಸಿದರೆ ಒಮಿಕ್ರಾನ್‌ನ ಸೋಂಕು ಹೆಚ್ಚು ತೀವ್ರವಾದ ಕಾಯಿಲೆಯನ್ನು ಉಂಟುಮಾಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದ್ದರಿಂದ ಒಮಿಕ್ರಾನ್ ರೂಪಾಂತರದ ಬಗ್ಗೆ ಭಯಪಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಒಡಿಶಾ ಆರೋಗ್ಯ ಸಚಿವ ನಬಾ ದಾಸ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚುತ್ತಿದೆ ಎಂದು ಪ್ರಾಥಮಿಕ ಮಾಹಿತಿಯು ಸೂಚಿಸಿದರೂ ಒಮಿಕ್ರಾನ್‌ನೊಂದಿಗಿನ ನಿರ್ದಿಷ್ಟ ಸೋಂಕಿನ ಪರಿಣಾಮವಾಗಿ ಸೋಂಕಿಗೆ ಒಳಗಾಗುವ ಜನರ ಸಂಖ್ಯೆ ಹೆಚ್ಚಾಗುವುದರಿಂದ ಇದು ಸಂಭವಿಸಬಹುದು.

ಒಡಿಶಾದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಸುಮಾರು 86 ಪ್ರತಿಶತದಷ್ಟು ಜನರು ಮೊದಲ ಡೋಸ್ ತೆಗೆದುಕೊಂಡಿದ್ದಾರೆ ಮತ್ತು ಶೇ 50 ಜನರು ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆ. 14 ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳ ವಯಸ್ಕ ಜನಸಂಖ್ಯೆಯ ಸುಮಾರು ಶೇ 74 ಜನರು ಕೊವಿಡ್-19 ಲಸಿಕೆಯ ಕನಿಷ್ಠ ಒಂದು ಡೋಸ್ ಅನ್ನು ಪಡೆದಿದ್ದಾರೆ.

ಇದನ್ನೂ ಓದಿ: ಒಮಿಕ್ರಾನ್ ವೈರಾಣು ಸೋಂಕು ಹರಡುವಿಕೆ ತಡೆಗಟ್ಟಲು IAS ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿ ನೀಡಿ ಸರ್ಕಾರ ಆದೇಶ