ಶೋಪಿಯಾನ್​ನಲ್ಲಿ ಎನ್​ಕೌಂಟರ್ ಕಾರ್ಯಾಚರಣೆಗೆ ತೆರಳುತ್ತಿದ್ದ ವಾಹನ ಪಲ್ಟಿ; ಇಬ್ಬರು ಯೋಧರು ಸಾವು, ಇಬ್ಬರಿಗೆ ಗಾಯ

ವಾಹನದ ಮೇಲೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಸ್ಕಿಡ್ ಆಗಿ ಕೆಳಗೆ ಬಿದ್ದಿದೆ ಎಂದು ವರದಿಯಾಗಿದೆ. ಅಪಘಾತದ ವೇಳೆ ವಾಹನದಲ್ಲಿ ನಾಲ್ವರು ಯೋಧರಿದ್ದರು. ಅವರಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ.

ಶೋಪಿಯಾನ್​ನಲ್ಲಿ ಎನ್​ಕೌಂಟರ್ ಕಾರ್ಯಾಚರಣೆಗೆ ತೆರಳುತ್ತಿದ್ದ ವಾಹನ ಪಲ್ಟಿ; ಇಬ್ಬರು ಯೋಧರು ಸಾವು, ಇಬ್ಬರಿಗೆ ಗಾಯ
ಭಾರತೀಯ ಯೋಧರು
Edited By:

Updated on: Apr 14, 2022 | 8:18 PM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ (Shopian) ಜಿಲ್ಲೆಯ ಬುಡಿಗಾಮ್‌ನಲ್ಲಿ ಎನ್‌ಕೌಂಟರ್ ಸ್ಥಳಕ್ಕೆ ತೆರಳುವ ಮಾರ್ಗದಲ್ಲಿ ಕನಿಪೋರಾ ಗ್ರಾಮದ ಬಳಿ ವಾಹನ ಪಲ್ಟಿಯಾಗಿ ಇಬ್ಬರು ಭಾರತೀಯ ಯೋಧರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಸ್ತೆ ಅಪಘಾತದಲ್ಲಿ ಇಬ್ಬರು ಸೈನಿಕರು (Indian Soldiers) ಸಾವನ್ನಪ್ಪಿದ್ದಾರೆ. ವಾಹನದ ಮೇಲೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಸ್ಕಿಡ್ ಆಗಿ ಕೆಳಗೆ ಬಿದ್ದಿದೆ ಎಂದು ವರದಿಯಾಗಿದೆ. ಅಪಘಾತದ ವೇಳೆ ವಾಹನದಲ್ಲಿ ನಾಲ್ವರು ಯೋಧರಿದ್ದರು. ಅವರಲ್ಲಿ ಇಬ್ಬರಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ಶೋಪಿಯಾನ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರು ಗಾಯಗೊಂಡ ಯೋಧರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಕನಿಷ್ಠ ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ.

ಶೋಪಿಯಾನ್‌ನ ಬಡಿಗಮ್ ಪ್ರದೇಶದಲ್ಲಿ ಗುರುವಾರ ಎನ್‌ಕೌಂಟರ್ ನಡೆದಿದೆ. ಈ ಎನ್​ಕೌಂಟರ್​ ಕಾರ್ಯಾಚರಣೆಗೆ ಹೋಗುತ್ತಿದ್ದಾಗ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Srinagar Encounter: ಶ್ರೀನಗರದಲ್ಲಿ ಸಿಆರ್​​ಪಿಎಫ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದ ಇಬ್ಬರು ಪಾಕಿಸ್ತಾನಿ ಉಗ್ರರ ಎನ್​ಕೌಂಟರ್​

Terrorists Encounter: ಜಮ್ಮು ಕಾಶ್ಮೀರದಲ್ಲಿ ಮಾಜಿ ಪತ್ರಕರ್ತ ಸೇರಿ ಇಬ್ಬರು ಉಗ್ರರ ಎನ್​ಕೌಂಟರ್