ದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವೈದ್ಯಕೀಯ ಆಕ್ಸಿಜನ್ ಅಭಾವದ ಭೀಕರತೆ ದಿನದಿನಕ್ಕೂ ಹೆಚ್ಚುತ್ತಿದೆ. ದೆಹಲಿಯ ಜೈಪುರ ಗೋಲ್ಡನ್ ಆಸ್ಪತ್ರೆಯ ಐಸಿಯುನಲ್ಲಿದ್ದ ಸುಮಾರು 20 ರೋಗಿಗಳು ಆಮ್ಲಜನಕ ಕೊರತೆಯಿಂದ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಇಂದು ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜೈಪುರ ಗೋಲ್ಡನ್ ಆಸ್ಪತ್ರೆ ನಿರ್ದೇಶಕರಾದ ಡಾ. ಡಿ.ಕೆ.ಬಾಲುಜಾ, ನಮಗೆ ನಿನ್ನೆ 3600 ಮೆಟ್ರಿಕ್ ಟನ್ಗಳಷ್ಟು ಆಕ್ಸಿಜನ್ ಬರಬೇಕಿತ್ತು. ಆದರೆ ಕೇವಲ 1500 ಲೀಟರ್ಗಳನ್ನಷ್ಟೇ ನೀಡಲಾಗಿತ್ತು. ನಿನ್ನೆ ರಾತ್ರಿ ಸುಮಾರು 20 ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಹಾಗೇ, ವೈದ್ಯಕೀಯ ಆಮ್ಲಜನಕವನ್ನು ಶೀಘ್ರವೇ ಪೂರೈಸಿ ಎಂದು ಶನಿವಾರ ಮುಂಜಾನೆ ದೆಹಲಿ ಸರ್ಕಾರಕ್ಕೆ ಒಂದು ಎಸ್ಒಎಸ್ ಕೂಡ ಕಳಿಸಿದ್ದಾಗಿ ತಿಳಿಸಿದ್ದಾರೆ.
ದೆಹಲಿಯಾದ್ಯಂತ ಹಲವು ಸಣ್ಣಸಣ್ಣ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಎದುರಾಗಿದೆ. ಜೈಪುರ ಗೋಲ್ಡನ್ ಆಸ್ಪತ್ರೆಗೂ ಮೊದಲು ದೆಹಲಿಯ ಗಂಗಾರಾಮ ಆಸ್ಪತ್ರೆಯಲ್ಲಿ 25 ರೋಗಿಗಳು ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿದ್ದಾರೆ. ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯೂ ಕೂಡ ತಮ್ಮಲ್ಲಿ ಆಕ್ಸಿಜನ್ಅಭಾವ ಇದೆ ಎಂದು ಸರ್ಕಾರಕ್ಕೆ ತಿಳಿಸಿದೆ. ಒಂದೊಮ್ಮೆ ವೈದ್ಯಕೀಯ ಆಕ್ಸಿಜನ್ ಪೂರ್ತಿಯಾಗಿ ಖಾಲಿ ಆದರೆ 700 ರೋಗಿಗಳ ಜೀವ ಅಪಾಯದಲ್ಲಿರುತ್ತದೆ ಎಂದೂ ತಿಳಿಸಿದೆ.
ಇದನ್ನೂ ಓದಿ: ಕೊರೊನಾ ಎಫೆಕ್ಟ್: 15 ಕೆಜಿ ಟೊಮ್ಯಾಟೋಗೆ ಕೇವಲ 15 ರೂಪಾಯಿ; ಮನನೊಂದ ರೈತನಿಂದ ಫಸಲು ತುಂಬಿದ ಹೊಲ ನಾಶ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ಪ್ರಮಾಣವಚನ ಸ್ವೀಕಾರ
Published On - 12:19 pm, Sat, 24 April 21