AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್ ಮಂಡನೆಗೆ ಕೌಂಟ್​ಡೌನ್, ಮಾಹಿತಿ ಸೋರಿಕೆಯಾಗದಂತೆ ಕಟ್ಟೆಚ್ಚರ

ದೆಹಲಿ: ಕೇಂದ್ರದ ಸಾಮಾನ್ಯ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 1 ರಂದು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಬಜೆಟ್‌ ಸಿದ್ದತೆಯ ಪ್ರಕ್ರಿಯೆಗಳು ಈಗಾಗಲೇ ಶುರುವಾಗಿವೆ. ಅದೊಂದು ಕಾರ್ಯಕ್ರಮದೊಂದಿಗೆ ಬಜೆಟ್ ಸಿದ್ದತೆ ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಗಿದೆ. 2020-21ರ ಸಾಲಿನ ಬಜೆಟ್ ಮಂಡನೆಗೆ ಕೌಂಟ್​ಡೌನ್: 2020-21ರ ಕೇಂದ್ರದ ಸಾಮಾನ್ಯ ಬಜೆಟ್ ಮಂಡನೆಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಫೆಬ್ರವರಿ 1 ರಂದು ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ […]

ಬಜೆಟ್ ಮಂಡನೆಗೆ ಕೌಂಟ್​ಡೌನ್, ಮಾಹಿತಿ ಸೋರಿಕೆಯಾಗದಂತೆ ಕಟ್ಟೆಚ್ಚರ
ಸಾಧು ಶ್ರೀನಾಥ್​
|

Updated on:Jan 21, 2020 | 11:29 AM

Share

ದೆಹಲಿ: ಕೇಂದ್ರದ ಸಾಮಾನ್ಯ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 1 ರಂದು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಬಜೆಟ್‌ ಸಿದ್ದತೆಯ ಪ್ರಕ್ರಿಯೆಗಳು ಈಗಾಗಲೇ ಶುರುವಾಗಿವೆ. ಅದೊಂದು ಕಾರ್ಯಕ್ರಮದೊಂದಿಗೆ ಬಜೆಟ್ ಸಿದ್ದತೆ ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಗಿದೆ.

2020-21ರ ಸಾಲಿನ ಬಜೆಟ್ ಮಂಡನೆಗೆ ಕೌಂಟ್​ಡೌನ್: 2020-21ರ ಕೇಂದ್ರದ ಸಾಮಾನ್ಯ ಬಜೆಟ್ ಮಂಡನೆಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಫೆಬ್ರವರಿ 1 ರಂದು ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈಗಾಗ್ಲೇ ಬಜೆಟ್ ಸಿದ್ಧತೆಯ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದ್ದು, ಹಲ್ವಾ ಸಿದ್ಧತೆ ಕಾರ್ಯಕ್ರಮದೊಂದಿಗೆ ಶುರುವಾಗಿದೆ. ಹೌದು. ನಿನ್ನೆ ದೆಹಲಿಯ ನಾರ್ತ್ ಬ್ಲಾಕ್ ನಲ್ಲಿರುವ ಹಣಕಾಸು ಸಚಿವಾಲಯದ ನೆಲಮಹಡಿಯಲ್ಲಿ ಹಲ್ವಾ ಕಾರ್ಯಕ್ರಮ ನಡೆದಿದೆ. ನಿರ್ಮಲಾ ಸೀತಾರಾಮನ್, ತಮ್ಮ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಈ ಸಂದರ್ಬದಲ್ಲಿ ಹಲ್ವಾ ಹಂಚಿ ಶುಭಕೋರಿದ್ದಾರೆ. ಈ ಮೂಲಕ ಕೇಂದ್ರ ಬಜೆಟ್ ಸಿದ್ಧತೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಬಜೆಟ್ ತಯಾರಿಸೋ ಅಧಿಕಾರಿಗಳಿಗೆ ‘ರೂಲ್ಸ್’..! ಇನ್ನು, ಬಜೆಟ್ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಯಮದಡಿ ಇರಬೇಕಾಗುತ್ತೆ.. ಅವುಗಳನ್ನು ಅಧಿಕಾರಿಗಳು ಚಾಚೂತಪ್ಪದೆ ಪಾಲಿಸಬೇಕಿದೆ.

ಅಧಿಕಾರಿಗಳಿಗೆ ‘ಬಂಧನ’: ಬಜೆಟ್ ಮಂಡನೆ ಆಗುವವರೆಗೂ ಅಧಿಕಾರಿಗಳು ಮನೆಗೆ ಹೋಗುವಂತಿಲ್ಲ. ಹಗಲು-ರಾತ್ರಿ ಕಚೇರಿಯಲ್ಲೇ ಇರಬೇಕು.. ತಮ್ಮ ಮನೆಯವರನ್ನು, ಸಂಬಂಧಿಗಳನ್ನು, ಸ್ನೇಹಿತರನ್ನ ಸಂಪರ್ಕಿಸುವಂತಿಲ್ಲ. ಫೋನ್​ನಲ್ಲಾಗಲೀ, ಇ-ಮೇಲ್ ಮೂಲಕವಾಗಲೀ ಸಂಪರ್ಕ ಮಾಡುವಂತಿಲ್ಲ. ಬಜೆಟ್ ಸಿದ್ಧತೆಯಲ್ಲಿ ತೊಡುಗುವವರೆಲ್ಲಾ ಈ ನಿಯಮವನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು. ಬಜೆಟ್​ನಲ್ಲಿರುವ ಅಂಶಗಳು ಸೋರಿಕೆಯಾಗಬಾರದು. ಬಜೆಟ್ ಮಂಡನೆಯಾಗುವವರೆಗೂ ಬಜೆಟ್ ಅಂಶಗಳ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಬೇಕು. ಈ ಕಾರಣದಿಂದ ಅಧಿಕಾರಿಗಳೆಲ್ಲಾ ಬಜೆಟ್ ಸಿದ್ಧತೆ ಕೊಠಡಿಯಲ್ಲೇ ಇರಬೇಕು. ಅವರಿಗೆ ಸ್ನಾನ, ಊಟ, ತಿಂಡಿ ವ್ಯವಸ್ಥೆಯನ್ನ ಕಚೇರಿಯಲ್ಲೇ ಮಾಡಲಾಗಿರುತ್ತೆ. ಆದ್ರೆ, ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಿಗೆ ಮಾತ್ರ ಮನೆಗೆ ಹೋಗಲು ಅವಕಾಶ ಇರುತ್ತೆ.

ಬಜೆಟ್ ಮಾಹಿತಿ ಸೋರಿಕೆಯಾಗದಂತೆ ಕಟ್ಟೆಚ್ಚರ! ಇನ್ನು, ಬಜೆಟ್ ಮಾಹಿತಿ ಸೋರಿಕೆ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಬಜೆಟ್ ಸಿದ್ಧತೆಯ ಕೊಠಡಿಯ ಮೇಲೆ ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಗಳು ಕಣ್ಣಿಟ್ಟಿರುತ್ತಾರೆ. ಐ.ಬಿ. ನಿರ್ದೇಶಕರು ಆಗಾಗ ಹಣಕಾಸು ಸಚಿವಾಲಯಕ್ಕೆ ಭೇಟಿ ನೀಡಿ, ಬಜೆಟ್ ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸುತ್ತಾರೆ. ಒಂದು ವೇಳೆ ಆಯವ್ಯಯ ಮಂಡನೆಗೂ ಮುನ್ನವೇ ಬಜೆಟ್ ಅಂಶಗಳು ಸೋರಿಕೆಯಾದ್ರೆ, ತೊಂದ್ರೆ ಆಗುತ್ತೆ.

ಸಂಸತ್ತಿನಲ್ಲಿ ಬಜೆಟ್ ಮಂಡನೆಗೂ ಮುನ್ನ ಮಾಧ್ಯಮಗಳಲ್ಲಿ ವರದಿಯಾಗಿದೆ ಅಂತಾ ಕೇಂದ್ರ ಹಣಕಾಸು ಸಚಿವರ ರಾಜೀನಾಮೆಗೆ ಆಗ್ರಹಿಸಬಹುದು. ಹೀಗಾಗಿ ಬಜೆಟ್ ಸಿದ್ಧತೆಯ ಪ್ರಕ್ರಿಯೆಯಲ್ಲೇ ಗೌಪ್ಯತೆ ಕಾಪಾಡಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ಮಾಡ್ಲಾಗಿದೆ. ಒಟ್ನಲ್ಲಿ, 2ನೇ ಬಾರಿಗೆ ನಿರ್ಮಲಾ ಸೀತಾರಾಮನ್ ಕೇಂದ್ರದ ಬಜೆಟ್ ಮಂಡಿಸುತ್ತಿದ್ದು, ಕುತೂಹಲ ಕೆರಳಿಸಿದೆ.

Published On - 7:29 am, Tue, 21 January 20

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್