ಗಿನ್ನೆಸ್ ಬುಕ್ ಸೇರಿದ 6000 ನರ್ತಕಿಯರ ಮೆಗಾ ಮೋಹಿನಿಯಟ್ಟಂ ಪ್ರದರ್ಶನ
ಕೇರಳದಲ್ಲಿ 6000 ನರ್ತಕಿಯರ ಮೆಗಾ ಮೋಹಿನಿಯಟ್ಟಂ ಪ್ರದರ್ಶನವು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದೆ. ಏಕಮಾಕಂ ಮೆಗಾ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ‘ಕುಂಡಲಿ ನಿಪ್ಪಟ್ಟು’ ಆಧಾರಿತ ನೃತ್ಯ ಪ್ರದರ್ಶನಗೊಂಡಿತು. ನರ್ತಕರಿಗೆ ಖ್ಯಾತ ನರ್ತಕಿ ಕಲಾಮಂಡಲಂ ಡಾ.ಧನುಷಾ ಸನ್ಯಾಲ್ ತರಬೇತಿ ನೀಡಿದ್ದರು. ಇಂದು ಪವನ್ ಗುಪ್ತಾ ಅರ್ಜಿ ವಿಚಾರಣೆ: ಸುಪ್ರೀಂಕೋರ್ಟ್ನಲ್ಲಿಂದು ‘ನಿರ್ಭಯಾ’ ಅಪರಾಧಿ ಪವನ್ಕುಮಾರ್ ಸಲ್ಲಿಸಿರೋ ಅರ್ಜಿ ವಿಚಾರಣೆ ನಡೆಯಲಿದೆ. ನನ್ನನ್ನ ಬಾಲಾಪರಾಧಿ ಅಂತ ಪರಿಗಣಿಸಿ ಎಂದು ಸಲ್ಲಿಸಿದ್ದ ಅರ್ಜಿಯನ್ನ ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಹೀಗಾಗಿ, […]
ಕೇರಳದಲ್ಲಿ 6000 ನರ್ತಕಿಯರ ಮೆಗಾ ಮೋಹಿನಿಯಟ್ಟಂ ಪ್ರದರ್ಶನವು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದೆ. ಏಕಮಾಕಂ ಮೆಗಾ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ‘ಕುಂಡಲಿ ನಿಪ್ಪಟ್ಟು’ ಆಧಾರಿತ ನೃತ್ಯ ಪ್ರದರ್ಶನಗೊಂಡಿತು. ನರ್ತಕರಿಗೆ ಖ್ಯಾತ ನರ್ತಕಿ ಕಲಾಮಂಡಲಂ ಡಾ.ಧನುಷಾ ಸನ್ಯಾಲ್ ತರಬೇತಿ ನೀಡಿದ್ದರು.
ಇಂದು ಪವನ್ ಗುಪ್ತಾ ಅರ್ಜಿ ವಿಚಾರಣೆ: ಸುಪ್ರೀಂಕೋರ್ಟ್ನಲ್ಲಿಂದು ‘ನಿರ್ಭಯಾ’ ಅಪರಾಧಿ ಪವನ್ಕುಮಾರ್ ಸಲ್ಲಿಸಿರೋ ಅರ್ಜಿ ವಿಚಾರಣೆ ನಡೆಯಲಿದೆ. ನನ್ನನ್ನ ಬಾಲಾಪರಾಧಿ ಅಂತ ಪರಿಗಣಿಸಿ ಎಂದು ಸಲ್ಲಿಸಿದ್ದ ಅರ್ಜಿಯನ್ನ ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಹೀಗಾಗಿ, ಆ ಆದೇಶ ತಿರಸ್ಕರಿಸಿ ನನ್ನನ್ನ ಬಾಲಾಪರಾಧಿ ಎಂದು ಪರಿಗಣಿಸಿ ಅಂತ ಪವನ್ಕುಮಾರ್ ಅರ್ಜಿ ಸಲ್ಲಿಸಿದ್ದ.
3ದಿನ‘ಆಂಧ್ರ’ ಅಧಿವೇಶನ: ಇಂದಿನಿಂದ ಮೂರು ದಿನಗಳ ಕಾಲ ಆಂಧ್ರ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಅಮರಾವತಿಯಲ್ಲಿ ನಡೆಯೋ ಈ ಅಧಿವೇಶನಕ್ಕೆ ವಿಪಕ್ಷ ಟಿಡಿಪಿ ಹಾಗೂ ಜಂಟಿ ಕ್ರಿಯಾ ಸಮಿತಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆಗೆ ಸಜ್ಜಾಗಿವೆ.. ಹೀಗಾಗಿ, ಅಮರಾವತಿಯಲ್ಲಿ ಖಾಕಿ ಕಟ್ಟೆಚ್ಚರ ವಹಿಸಿದೆ.
ಅಸಭ್ಯವಾಗಿ ವರ್ತಿಸಿದ ಇಬ್ಬರ ಬಂಧನ: ಉತ್ತರಪ್ರದೇಶದ ಅಲಿಗಢದಲ್ಲಿ ಸಿಎಎ ವಿರುದ್ಧ ನಡೀತಿದ್ದ ಪ್ರತಿಭಟನೆ ವೇಳೆ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿದ್ದಾರೆ.. ಕೂಡಲೇ ಆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದು, ತನಿಖೆ ಮುಂದುವರಿಸಿದ್ದಾರೆ.. ಇನ್ನು, ಘಟನೆ ವೇಳೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು..
ಕ್ರಿಕೆಟ್ ಆಡಿ ಸಿಜೆಐ ಮಸ್ತಿ: ಮಹಾರಾಷ್ಟ್ರದ ನಾಗ್ಪುರದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಕ್ರಿಕೆಟ್ ಆಟವಾಡಿ ಎಲ್ಲರ ಗಮನ ಸೆಳೆದರು. ಸಿಜೆಐ ಎಸ್.ಎ. ಬೊಬ್ಡೆಗೆ ಇತರ ನ್ಯಾಯಮೂರ್ತಿಗಳು ಹಾಗೂ ವಕೀಲರು ಸಾಥ್ ನೀಡಿದ್ರು.
‘ಸಿಎಎ ಭಾರತದ ಆಂತರಿಕ ವಿಚಾರ’ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಭಾರತದ ಆಂತರಿಕ ವಿಚಾರ ಅಂತ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಭಾರೀ ಸಂಖ್ಯೆಯ ಬಾಂಗ್ಲಾ ವಲಸಿಗರು ಭಾರತದಲ್ಲಿದ್ದಾರೆ ಎಂಬ ಆರೋಪಗಳ ನಡುವೆಯೇ ಶೇಖ್ ಹಸೀನಾ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಚೀನಾ ವಿರುದ್ಧ ಒಂದಾದ ಭಾರತ-ಲಂಕಾ: ಶ್ರೀಲಂಕಾ ಭಾಗದಲ್ಲಿ ಚೀನಾ ಪ್ರಭಾವ ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತ-ಶ್ರೀಲಂಕಾ ಮಿಲಿಟರಿ ಸಂಬಂಧ ಬಲಪಡಿಸಲು ಉಭಯ ದೇಶಗಳು ಪ್ರತಿಜ್ಞೆ ಮಾಡಿವೆ ಅಂತ ಲಂಕಾ ಅಧ್ಯಕ್ಷರ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇತ್ತೀಚೆಗೆ ಶ್ರೀಲಂಕಾ ಅಧ್ಯಕ್ಷರನ್ನ ಭೇಟಿಯಾಗಿದ್ದ ಅಜಿತ್ ದೋವಲ್ ಈ ಬಗ್ಗೆ ಚರ್ಚಿಸಿದ್ದಾರೆ.