ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ, ಯುವಕ ದುರ್ಮರಣ
ಹೈದರಾಬಾದ್: ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಯುವಕ ಮೃತಪಟ್ಟಿರುವ ಭೀಕರ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತುಂಗಭದ್ರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಖಾನಾಪುರ ಗ್ರಾಮದ ನಿವಾಸಿಯಾದ 25 ವರ್ಷದ ಶರಣ ಬಸವ ಮೃತ ದುರ್ದೈವಿ. ತಂದೆ ಪ್ರಣಾಪಾಯದಿಂದ ಪಾರಾಗಿದ್ದು, ಮಂತ್ರಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಿಂದ ಬಂದ ತಂದೆ ಮಗ ಇಬ್ಬರು ತುಂಗಭದ್ರ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾರೆ. ನಂತರ ಮಗ ಕಿವಿಯಲ್ಲಿ ಏರಫೋನ್ ಹಾಕೊಂಡು ಹಾಡು ಕೇಳುತ್ತಾ ಹಳಿ ದಾಟಲು ಮುಂದಾಗಿದ್ದು, ತಂದೆ ಮಗ ಇಬ್ಬರು […]
ಹೈದರಾಬಾದ್: ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಯುವಕ ಮೃತಪಟ್ಟಿರುವ ಭೀಕರ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತುಂಗಭದ್ರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಖಾನಾಪುರ ಗ್ರಾಮದ ನಿವಾಸಿಯಾದ 25 ವರ್ಷದ ಶರಣ ಬಸವ ಮೃತ ದುರ್ದೈವಿ. ತಂದೆ ಪ್ರಣಾಪಾಯದಿಂದ ಪಾರಾಗಿದ್ದು, ಮಂತ್ರಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಿಂದ ಬಂದ ತಂದೆ ಮಗ ಇಬ್ಬರು ತುಂಗಭದ್ರ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾರೆ. ನಂತರ ಮಗ ಕಿವಿಯಲ್ಲಿ ಏರಫೋನ್ ಹಾಕೊಂಡು ಹಾಡು ಕೇಳುತ್ತಾ ಹಳಿ ದಾಟಲು ಮುಂದಾಗಿದ್ದು, ತಂದೆ ಮಗ ಇಬ್ಬರು ಹಳಿ ದಾಟಲು ಇಳಿದಿದ್ದಾರೆ. ಈ ವೇಳೆ ಬಂದ ರಾಜಧಾನಿ ಎಕ್ಸಪ್ರೆಸ್ ಟ್ರೇನ್ ಡಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ರೈಲ್ವೆ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.