ಜನಸಂಖ್ಯೆ ನಿಯಂತ್ರಣಕ್ಕೆ ಇಬ್ಬರು ಮಕ್ಕಳ ನೀತಿ ಅಗತ್ಯವಿದೆ -ಮೋಹನ್ ಭಾಗವತ್

ಲಕ್ನೋ: ದೇಶದಲ್ಲಿ ಜನಸಂಖ್ಯೆ ಏರುತ್ತಲೇ ಇದೆ. ದೇಶದ ಜನಸಂಖ್ಯೆ ಈಗಾಗಲೇ 130 ಕೋಟಿಗೆ ತಲುಪಿದೆ. ಇನ್ನೂ ಕೆಲವೇ ವರ್ಷಗಳಲ್ಲಿ ಭಾರತವು ಜನಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕಲಿದೆ. ದೇಶದ ಕೆಲ ಸಮಸ್ಯೆಗಳಿಗೆ ಏರುತ್ತಿರುವ ಜನಸಂಖ್ಯೆ ಕೂಡ ಕಾರಣ ಅನ್ನೋ ಅಭಿಪ್ರಾಯವೂ ಇದೆ. ಇಂಥಾ ಹೊತ್ತಿನಲ್ಲೇ ಆರ್‌ಎಸ್ಎಸ್ ಮುಖ್ಯಸ್ಥರು ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ನಮ್ಮ ಭಾರತ ದೇಶ ಯಾವುದರಲ್ಲಿ ಮುಂದಿದೆಯೋ ಗೊತ್ತಿಲ್ಲ, ಆದ್ರೆ ಜನಸಂಖ್ಯೆಯಲ್ಲಿ ಭಾರಿ ಮುಂದಿದೆ. ಜನ ಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನ ಪಡೆದಿರುವ ನಮ್ಮ ಇಂಡಿಯಾ, ಕೆಲವೇ […]

ಜನಸಂಖ್ಯೆ ನಿಯಂತ್ರಣಕ್ಕೆ ಇಬ್ಬರು ಮಕ್ಕಳ ನೀತಿ ಅಗತ್ಯವಿದೆ -ಮೋಹನ್ ಭಾಗವತ್
Follow us
ಸಾಧು ಶ್ರೀನಾಥ್​
|

Updated on: Jan 19, 2020 | 11:51 AM

ಲಕ್ನೋ: ದೇಶದಲ್ಲಿ ಜನಸಂಖ್ಯೆ ಏರುತ್ತಲೇ ಇದೆ. ದೇಶದ ಜನಸಂಖ್ಯೆ ಈಗಾಗಲೇ 130 ಕೋಟಿಗೆ ತಲುಪಿದೆ. ಇನ್ನೂ ಕೆಲವೇ ವರ್ಷಗಳಲ್ಲಿ ಭಾರತವು ಜನಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕಲಿದೆ. ದೇಶದ ಕೆಲ ಸಮಸ್ಯೆಗಳಿಗೆ ಏರುತ್ತಿರುವ ಜನಸಂಖ್ಯೆ ಕೂಡ ಕಾರಣ ಅನ್ನೋ ಅಭಿಪ್ರಾಯವೂ ಇದೆ. ಇಂಥಾ ಹೊತ್ತಿನಲ್ಲೇ ಆರ್‌ಎಸ್ಎಸ್ ಮುಖ್ಯಸ್ಥರು ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ.

ನಮ್ಮ ಭಾರತ ದೇಶ ಯಾವುದರಲ್ಲಿ ಮುಂದಿದೆಯೋ ಗೊತ್ತಿಲ್ಲ, ಆದ್ರೆ ಜನಸಂಖ್ಯೆಯಲ್ಲಿ ಭಾರಿ ಮುಂದಿದೆ. ಜನ ಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನ ಪಡೆದಿರುವ ನಮ್ಮ ಇಂಡಿಯಾ, ಕೆಲವೇ ಕೆಲವು ದಿನಗಳಲ್ಲಿ ಚೀನಾವನ್ನ ಹಿಂದಿಕ್ಕಿ ನಂಬರ್‌ ಒನ್ ಪಟ್ಟ ಅಲಂಕಾರ ಮಾಡೋದ್ರಲ್ಲಿ ಡೌಟೇ ಇಲ್ಲ. ಜನಸಂಖ್ಯೆ ಸ್ಫೋಟದಿಂದ ಭಾರತ ಸಮಸ್ಯೆಗಳ ಆಗರವಾಗುತ್ತಿದೆ. ಈಗ ಇದೇ ವಿಚಾರಕ್ಕೆ ಹಿಂದೂಪರ ಸಂಘಟನೆ ಆರ್‌ಎಸ್ಎಸ್ ಸುದ್ದಿಯಾಗಿದೆ.

ಇಬ್ಬರು ಮಕ್ಕಳ ನೀತಿ ಅಗತ್ಯವಿದೆ ಎಂದ ಆರ್‌ಎಸ್ಎಸ್: ಯೆಸ್‌, ನಾನಾ ಹೋರಾಟಗಳನ್ನ ಮಾಡಿರುವ ಆರ್‌ಎಸ್ಎಸ್ ಈಗ ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಹೋರಾಟ ನಡೆಸಲಿದೆ. ಹೀಗಾಂತ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ನಡೆದ ಆರ್‌ಎಸ್ಎಸ್ ಸ್ವಯಂಸೇವಕರ ಸಭೆಯಲ್ಲಿ ಹೇಳಿದ್ದಾರೆ. ಇಬ್ಬರು ಮಕ್ಕಳನ್ನು ಮಾತ್ರ ಹೊಂದುವ ಕಾನೂನು ಜಾರಿಗೆ ಪೋಕಸ್ ಮಾಡಿ ಆರ್‌ಎಸ್ಎಸ್ ಹೋರಾಟ ನಡೆಸಲಿದೆ ಅಂತ ಮೋಹನ್ ಭಾಗವತ್ ಹೇಳಿದ್ದಾರೆ.

ಇನ್ನು ದೇಶದ ಜನಸಂಖ್ಯೆಯನ್ನು ನಿಯಂತ್ರಿಸುವುದು ಅಗತ್ಯವಾಗಿದೆ ಎಂದ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಯಾಕಂದ್ರೆ ಆರ್‌ಎಸ್ಎಸ್ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಮಾತೃಸಂಸ್ಥೆ. ಹೀಗಾಗಿ ಆರ್‌ಎಸ್ಎಸ್ ನಿಲುವನ್ನ ಕೇಂದ್ರ ಸರ್ಕಾರ ಒಪ್ಪಿಕೊಂಡು ಜಾರಿಗೊಳಿಸುತ್ತೆ. ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದನ್ನು ಪ್ರಧಾನಿ ಮೋದಿ ಕೇಳುವ ಸಾಧ್ಯತೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ದೇಶದ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡಬಹುದು. ಈಗಾಗಲೇ ಮೋದಿ ಸರ್ಕಾರವು ಅಸಾಧ್ಯ ಎಂದೇ ಭಾವಿಸಿದ್ದ ಮುಸ್ಲಿಂ ಸಮುದಾಯದಲ್ಲಿದ್ದ ತ್ರಿವಳಿ ತಲಾಖ್ ನಿಷೇಧಿಸಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದೆ. ಹೀಗಾಗಿ ದೇಶದಲ್ಲಿ ಪ್ರತಿಯೊಬ್ಬರು ಎರಡು ಮಕ್ಕಳನ್ನು ಮಾತ್ರ ಹೊಂದಬೇಕೆಂಬ ಕಾನೂನು ಜಾರಿಗೆ ತಂದರೂ ಯಾವುದೇ ಅಚ್ಚರಿ ಇರಲ್ಲ. ಹೀಗಾಗಿ ಮೋಹನ್ ಭಾಗವತ್ ಹೇಳಿಕೆ ದೇಶದೆಲ್ಲೆಡೆ ಸಂಚನ ಮೂಡಿಸಿದೆ.

ಒಟ್ಟಿನಲ್ಲಿ ಆರ್‌ಎಸ್ಎಸ್ ಈಗ ತನ್ನ ಹೋರಾಟಕ್ಕೆ ಹೊಸ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಆ ಹೊಸ ವಿಷಯ ಪ್ರತಿ ಕುಟುಂಬ ಅಥವಾ ದಂಪತಿ ಇಬ್ಬರು ಮಕ್ಕಳನ್ನು ಮಾತ್ರ ಹೊಂದಬೇಕು ಅನ್ನೋದು. ಆದರೆ, ಇದಕ್ಕೆ ಹಿಂದೂ ಧರ್ಮ ಹೊರತುಪಡಿಸಿ ಉಳಿದ ಧರ್ಮದ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ..? ರಾಜಕೀಯ ಪಕ್ಷಗಳು ಯಾವ ಬಣ್ಣ ಹಚ್ಚುತ್ತಾವೇ ಅನ್ನೋದನ್ನ ಕಾದು ನೋಡ್ಬೇಕಿದೆ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ