ಕೆನಡಾದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಗುಂಡೇಟಿನಿಂದ ಸಾವು; ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬದ ಆಗ್ರಹ

ಕೆನಡಾದ ಒಂಟಾರಿಯೊದ ಹ್ಯಾಮಿಲ್ಟನ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ಕೌರ್ ರಾಂಧವಾ ಎಂಬಾಕೆ ದುರಂತವಾಗಿ ಸಾವನ್ನಪ್ಪಿದ್ದಾಳೆ. ಆಕೆ ಬಸ್​ಗಾಗಿ ಕಾಯುತ್ತಿದ್ದಾಗ 2 ವಾಹನಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಸಿಲುಕಿ ಗುಂಡೇಟಿಗೆ ಬಲಿಯಾಗಿದ್ದಾರೆ. ಎರಡು ಬಣಗಳ ನಡುವಿನ ಗುಂಡಿನ ಕಾಳಗದಲ್ಲಿ ಅಮಾಯಕಳಾಗಿ ದೂರದಲ್ಲಿ ನಿಂತಿದ್ದ ಆಕೆಗೆ ಗುಂಡು ತಗುಲಿದೆ. ಈ ಬಗ್ಗೆ ಹ್ಯಾಮಿಲ್ಟನ್ ಪೊಲೀಸರು ಕೊಲೆಯ ತನಿಖೆ ನಡೆಸುತ್ತಿದ್ದಾರೆ.

ಕೆನಡಾದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಗುಂಡೇಟಿನಿಂದ ಸಾವು; ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬದ ಆಗ್ರಹ
Indian Girl Died In Canada

Updated on: Apr 19, 2025 | 7:59 PM

ನವದೆಹಲಿ, ಏಪ್ರಿಲ್ 19: ಕೆನಡಾದ ಒಂಟಾರಿಯೊದ ಹ್ಯಾಮಿಲ್ಟನ್‌ನಲ್ಲಿ ಬುಧವಾರ ಸಂಜೆ ನಡೆದ ಹಿಂಸಾಚಾರದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ಕೌರ್ ರಾಂಧವಾ (Harsimrat Kaur Randhawa) ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಹ್ಯಾಮಿಲ್ಟನ್‌ನಲ್ಲಿ 2 ಗುಂಪುಗಳ ಘರ್ಷಣೆಯ ನಡುವೆ ಆಕೆಗೆ ಗುಂಡು ತಗುಲಿದೆ ಎಂದು ಆಕೆಯ ಕುಟುಂಬ ಹೇಳಿಕೊಂಡಿದೆ.

ಏಪ್ರಿಲ್ 17ರ ಸಂಜೆ ಹರ್ಸಿಮ್ರತ್ ರಾಂಧವಾ ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಘಟನೆಯನ್ನು ಹ್ಯಾಮಿಲ್ಟನ್ ಪೊಲೀಸರು ದೃಢಪಡಿಸಿದ್ದಾರೆ. ಅಪ್ಪರ್ ಜೇಮ್ಸ್ ಸ್ಟ್ರೀಟ್ ಮತ್ತು ಸೌತ್ ಬೆಂಡ್ ರೋಡ್ ಈಸ್ಟ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದ ವರದಿಗೆ ಪೊಲೀಸರು ಸಂಜೆ 7.30ಕ್ಕೆ ಪ್ರತಿಕ್ರಿಯಿಸಿದ್ದಾರೆ. ಕಪ್ಪು ಸೆಡಾನ್ ಮತ್ತು ಬಿಳಿ ಸೆಡಾನ್‌ನಲ್ಲಿ ಪ್ರಯಾಣಿಸುತ್ತಿದ್ದವರ ನಡುವಿನ ಸರಣಿ ಗುಂಡಿನ ದಾಳಿಯಲ್ಲಿ ಆಕೆಗೆ ಗುಂಡು ತಗುಲಿ ಆಕೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ವಿಮಾನ ಹೈಜಾಕ್ ಮಾಡಲು ಹೋಗಿ ಪ್ರಯಾಣಿಕನ ಗುಂಡೇಟಿಗೆ ಬಲಿಯಾದ ದಾಳಿಕೋರ

ಇದನ್ನೂ ಓದಿ
ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ವೈದ್ಯರು ಹರ್ಸಿಮ್ರತ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಎದೆಗೆ ಗುಂಡೇಟು ಬಿದ್ದಿದ್ದರಿಂದಾಗಿ ಅವರು ಸಾವನ್ನಪ್ಪಿದರು. ಹರ್ಸಿಮ್ರತ್ 2 ವರ್ಷಗಳ ಹಿಂದೆ ಕೆನಡಾಕ್ಕೆ ಹೋಗಿದ್ದರು. ಅವರು ಹ್ಯಾಮಿಲ್ಟನ್‌ನ ಮೊಹಾಕ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಪೊಲೀಸರ ಪ್ರಕಾರ, ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದಾಗ ಅವರು ಬಸ್​ಗಾಗಿ ಪಕ್ಕದಲ್ಲಿ ಕಾಯುತ್ತಾ ನಿಂತಿದ್ದರು.

ಪಂಜಾಬ್‌ನ ಟಾರ್ನ್ ತರನ್ ಜಿಲ್ಲೆಯ ಧುಂಡಾ ಗ್ರಾಮದ ರಾಂಧವಾ ಅವರ ಕುಟುಂಬವು ತಮ್ಮ ಮಗಳ ಶವವನ್ನು ಭಾರತಕ್ಕೆ ಮರಳಿ ತರುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದೆ. ಟೊರೊಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಯುವ ಭಾರತೀಯ ಹುಡುಗಿಯ ನಿಧನಕ್ಕೆ ಸಂತಾಪ ಸೂಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ