ಚಿಕಿತ್ಸೆಗೆ ಹಣವಿಲ್ಲ: ಪತ್ನಿಗೆ ಗುಂಡು ಹಾರಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಕ್ಯಾನ್ಸರ್ ಪೀಡಿತ ವ್ಯಕ್ತಿ
ವ್ಯಕ್ತಿಯೊಬ್ಬರು ಪತ್ನಿಯನ್ನು ಹತ್ಯೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ. ಕುಲದೀಪ್ ಎಂಬುವವರಿಗೆ ಹಲವು ದಿನಗಳಿಂದ ಕ್ಯಾನ್ಸರ್ ಬಾಧಿಸುತ್ತಿತ್ತು. ಆತ್ಮಹತ್ಯೆ ಪತ್ರದ ಆಧಾರದ ಮೇಲೆ, ಇದು ಕೊಲೆ ಮತ್ತು ನಂತರ ಆತ್ಮಹತ್ಯೆ ಪ್ರಕರಣದಂತೆ ಕಂಡುಬಂದಿದೆ ಎಂದು ಎಸಿಪಿ ಮಿಶ್ರಾ ಹೇಳಿದ್ದಾರೆ. ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಅವರು ಹೇಳಿದರು.ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ ಕುಲದೀಪ್ ಅರ್ಧ ಪುಟದ ಆತ್ಮಹತ್ಯೆ ಪತ್ರದಲ್ಲಿ ತನಗೆ ಕ್ಯಾನ್ಸರ್ ಇದೆ ಎಂದು ಬರೆದಿದ್ದಾರೆ.

ಗಾಜಿಯಾಬಾದ್, ಏಪ್ರಿಲ್ 18: ಕ್ಯಾನ್ಸರ್(Cancer) ಪೀಡಿತ ವ್ಯಕ್ತಿಯೊಬ್ಬ ಪತ್ನಿಗೆ ಗುಂಡು ಹಾರಿಸಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕುಲದೀಪ್ ತ್ಯಾಗಿ ಎಂದು ಗುರುತಿಸಲಾಗಿದೆ. ತನಗೆ ಕ್ಯಾನ್ಸರ್ ಇದೆ, ಚಿಕಿತ್ಸೆಗೆ ಅಷ್ಟೊಂದು ಹಣ ನನ್ನ ಬಳಿ ಇಲ್ಲ, ತನ್ನ ಕುಟುಂಬಕ್ಕೆ ತನ್ನ ಸ್ಥಿತಿಯ ಬಗ್ಗೆ ತಿಳಿದಿಲ್ಲ ಮತ್ತು ಚಿಕಿತ್ಸಾ ವೆಚ್ಚದಲ್ಲಿ ಅವರಿಗೆ ಹೊರೆಯಾಗಲು ಬಯಸುವುದಿಲ್ಲ ಎಂದು ಬರೆದು ಆತ್ಮಹತ್ಯೆ ಪತ್ರ ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮೀರತ್ ನಿವಾಸಿ ತ್ಯಾಗಿ ಮೊದಲು ತನ್ನ ಪತ್ನಿ ನಿಶು ತ್ಯಾಗಿಗೆ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ನಂತರ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸ್ಥಳದಿಂದ ಆತ್ಮಹತ್ಯೆ ಪತ್ರವೊಂದು ಪತ್ತೆಯಾಗಿದೆ.
ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ ಕುಲದೀಪ್ ಅರ್ಧ ಪುಟದ ಆತ್ಮಹತ್ಯೆ ಪತ್ರದಲ್ಲಿ ತನಗೆ ಕ್ಯಾನ್ಸರ್ ಇದೆ ಎಂದು ಬರೆದಿದ್ದಾರೆ. ಕುಲದೀಪ್ ಅವರ ಆತ್ಮಹತ್ಯೆ ಪತ್ರದ ಪ್ರಕಾರ, ಅವರ ಕುಟುಂಬಕ್ಕೆ ಅವರ ವೈದ್ಯಕೀಯ ಸ್ಥಿತಿಯ ಬಗ್ಗೆ ತಿಳಿದಿಲ್ಲ ಎಂದು ನಂದಗ್ರಾಮ್‌ನ ಎಸಿಪಿ ಪೂನಂ ಮಿಶ್ರಾ ಹೇಳಿದ್ದಾರೆ.
ಚಿಕಿತ್ಸಾ ವೆಚ್ಚವನ್ನು ತಮ್ಮ ಕುಟುಂಬದ ಮೇಲೆ ಹೊರೆಯಾಗಿಸಲು ಅವರು ಬಯಸುವುದಿಲ್ಲ ಎಂದು ಅವರು ಹೇಳಿದರು ಮತ್ತು ಆ ಒತ್ತಡವು ಅವರನ್ನು ಈ ಹೆಜ್ಜೆ ಇಡುವಂತೆ ಮಾಡಿತ್ತು. ಕುಲದೀಪ್ ಆತ್ಮಹತ್ಯೆ ಪತ್ರದಲ್ಲಿ ತಾನು ಮತ್ತು ತನ್ನ ಪತ್ನಿ ಜೀವನಪರ್ಯಂತ ಒಟ್ಟಿಗೆ ಇರುವುದಾಗಿ ಪ್ರತಿಜ್ಞೆ ಮಾಡಿದ್ದೇವೆ, ಅದಕ್ಕಾಗಿಯೇ ಅವರು ಮೊದಲು ಆಕೆಯನ್ನು ಕೊಂದು ನಂತರ ತನ್ನ ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವೇನು? ಅದರ ಚಿಕಿತ್ಸೆಯ ವಿಧಾನ ತಿಳಿಯಿರಿ
ಕುಲದೀಪ್ ಅವರ ವೃದ್ಧ ತಂದೆ ಮತ್ತು ಇಬ್ಬರು ಮಕ್ಕಳು ಮನೆಯಲ್ಲಿದ್ದರು. ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿ, ಶವಗಳನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಆತ್ಮಹತ್ಯೆ ಪತ್ರದ ಆಧಾರದ ಮೇಲೆ, ಇದು ಕೊಲೆ ಮತ್ತು ನಂತರ ಆತ್ಮಹತ್ಯೆ ಪ್ರಕರಣದಂತೆ ಕಂಡುಬಂದಿದೆ ಎಂದು ಎಸಿಪಿ ಮಿಶ್ರಾ ಹೇಳಿದ್ದಾರೆ. ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ