Mizoram Earthquake: ಮಿಜೋರಾಂನಲ್ಲಿ 3.5 ತೀವ್ರತೆಯ ಲಘು ಭೂಕಂಪ
ಮಿಜೋರಾಂನಲ್ಲಿ 3.5 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ.
ಮಿಜೋರಾಂನಲ್ಲಿ 3.5 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ. ಮಿಜೋರಾಂನ ಲುಂಗ್ಲೈನಲ್ಲಿ ಬೆಳಗ್ಗೆ 7.18ರ ಸುಮಾರಿಗೆ ಕಂಪನದ ವರದಿಯಾಗಿದೆ. ಜಪಾನ್ನಲ್ಲಿ ಒಂದು ವಾರದ ಹಿಂದೆ 155 ಕಂಪನಗಳು ಒಂದೇ ದಿನದಲ್ಲಿ ಸಂಭವಿಸಿದ್ದವು. 62ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಹೊನ್ಶುವಿನ ಮುಖ್ಯ ದ್ವೀಪದಲ್ಲಿರುವ ಇಶಿಕಾವಾ ಪ್ರಾಂತ್ಯದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಕಟ್ಟಡಗಳು ಉರುಳಿದ್ದವು, ರಸ್ತೆಗಳು ಬಿರುಕುಬಿಟ್ಟವು. ಮೀನುಗಾರಿಕಾ ದೋಣಿಗಳು ಕೂಡ ಮುಳುಗಿಹೋಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:51 am, Fri, 5 January 24