ಉತ್ತರ ಪ್ರದೇಶದಲ್ಲಿ ದುರ್ಗಾ ಪೂಜೆ ಪೆಂಡಾಲ್ನಲ್ಲಿ ಬೆಂಕಿ ದುರಂತ; ಮೂವರು ಸಾವು, 60 ಜನರಿಗೆ ಗಾಯ
ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಔರೈ ಪಟ್ಟಣದ ದುರ್ಗಾಪೂಜಾ ಪೆಂಡಾಲ್ನಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಸಾವನ್ನಪ್ಪಿದ್ದಾರೆ. ಹಾಗೇ 60 ಜನರು ಗಾಯಗೊಂಡಿದ್ದಾರೆ.
ವಾರಾಣಸಿ: ಉತ್ತರ ಪ್ರದೇಶದ ಭದೋಹಿಯಲ್ಲಿ ನಿನ್ನೆ (ಭಾನುವಾರ) ರಾತ್ರಿ ದುರ್ಗಾ ಪೂಜೆಯ (Durga Puja) ಪೆಂಡಾಲ್ನಲ್ಲಿ ಭಾರೀ ಬೆಂಕಿ ದುರಂತ (Fire Accident) ಸಂಭವಿಸಿದೆ. ಈ ಬೆಂಕಿ ಅವಘಡದಲ್ಲಿ 10, 12 ವರ್ಷದ ಬಾಲಕರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಹಾಗೇ 60 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ದುರ್ಗಾ ಪೂಜೆಯ ಪೆಂಡಾಲ್ನಲ್ಲಿ ಆರತಿ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎನ್ನಲಾಗಿದೆ.
ಗಾಯಗೊಂಡ ಭಕ್ತರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಯ ಸಮಯದಲ್ಲಿ ಸುಮಾರು 150 ಜನರು ಪೆಂಡಾಲ್ನೊಳಗೆ ಇದ್ದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೌರಂಗ್ ರಾಠಿ ಹೇಳಿದ್ದಾರೆ.
UP | Around 150 people were present during #DurgaPuja aarti when a fire broke out. 52 people admitted to diff hospitals; a 10-12y/o child died. 30-40% burns on people in trauma centers, every patient stable…Prime facie, it was a short-circuit; probe on: Bhadohi DM Gaurang Rathi pic.twitter.com/9AMsMP4OCk
— ANI UP/Uttarakhand (@ANINewsUP) October 2, 2022
ಇದನ್ನೂ ಓದಿ: Breaking News ಚೀನಾದ ರೆಸ್ಟೋರೆಂಟ್ನಲ್ಲಿ ಬೆಂಕಿ ಅವಘಡ: 17 ಮಂದಿ ಸುಟ್ಟು ಭಸ್ಮ, ಹಲವರಿಗೆ ಗಾಯ
ಈ ಘಟನೆಯಲ್ಲಿ ಮೃತಪಟ್ಟವರ ಪೈಕಿ 12 ವರ್ಷದ ಬಾಲಕ ಕೂಡ ಸೇರಿದ್ದಾನೆ. ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಔರೈ ಪಟ್ಟಣದ ದುರ್ಗಾಪೂಜಾ ಪೆಂಡಾಲ್ನಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಬಾಲಕರು ಸಾವನ್ನಪ್ಪಿದ್ದು, ಗಾಯಗೊಂಡವರನ್ನು ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.