ಭಾರತೀಯ ಸೇನೆಯಿಂದ ಭರ್ಜರಿ ಕಾರ್ಯಚರಣೆ: LET ಕಮಾಂಡರ್ ಸೇರಿ ಮೂವರು ಉಗ್ರರು ಉಡೀಸ್

ಭಾರತೀಯ ಭದ್ರತಾ ಪಡೆ ನಡೆಸಿದ ಭರ್ಜರಿ ಕಾರ್ಯಚರಣೆಯಲ್ಲಿ LET ಕಮಾಂಡರ್ ಸೇರಿದಂತೆ ಮೂವರು ಉಗ್ರರು ಉಡೀಸ್ ಆಗಿದ್ದಾರೆ.

ಭಾರತೀಯ ಸೇನೆಯಿಂದ ಭರ್ಜರಿ ಕಾರ್ಯಚರಣೆ: LET ಕಮಾಂಡರ್ ಸೇರಿ ಮೂವರು ಉಗ್ರರು ಉಡೀಸ್
Encounter In Jammu
Edited By:

Updated on: Nov 01, 2022 | 11:24 PM

ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಭದ್ರತಾಪಡೆಗಳು ನಡೆಸಿದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು  (terrorists) ಹೊಡೆದುರುಳಿಸಿದ್ದಾರೆ. ಅವಂತಿಪೋರಾ ಪ್ರದೇಶದಲ್ಲಿ ನಡೆದ ಎನ್ಕೌಂಟರ್​ನಲ್ಲಿ LET ಕಮಾಂಡರ್ ಮುಕ್ತಾರ್‌ ಭಟ್‌ ಸೇರಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಹತ್ಯೆಯಾದ ಉಗ್ರರಿಂದ ಎಕೆ 74, ಎಕೆ 56, ಪಿಸ್ತೂಲ್ ಜಪ್ತಿ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪುಲ್ವಾಮಾ ಜಿಲ್ಲೆಯ ಖಂಡಿಪೋರಾ ಹಾಗೂ ಅವಂತಿಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆದಿದ್ದು, ಇದರಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ. 1 ಎಫ್‌ಟಿ ಮತ್ತು ಓರ್ವ ಎಲ್‌ಇಟಿಯ ಸ್ಥಳೀಯ ಭಯೋತ್ಪಾದಕ ಮುಕ್ತಾರ್‌ ಭಟ್ ನನ್ನು ಎನ್ಕೌಂಟ್​ರ್​ನಲ್ಲಿ ಹತ್ಯೆಯಾಗಿದ್ದಾನೆ. ಸಿಆರ್‌ಪಿಎಫ್‌ನ ಎಎಸ್‌ಐ ಮತ್ತು 2 ಆರ್‌ಪಿಎಫ್ ಸಿಬ್ಬಂದಿಯ ಹತ್ಯೆ ಸೇರಿದಂತೆ ಹಲವಾರು ಭಯೋತ್ಪಾದಕ ಅಪರಾಧಗಳಲ್ಲಿ ಭಾಗಿಯಾಗಿದ್ದ ಎಂದು ಕಾಶ್ಮೀರ ಎಡಿಜಿಪಿ ಖಚಿತಪಡಿಸಿದ್ದಾರೆ.