ಅಕ್ಕ ಇದ್ದಾಳೆಂದು ತರಗತಿಗೆ ಬಂದು ಮಲಗಿದ್ದ ಮಗು, ಬಾಗಿಲು ಮುಚ್ಚಿಕೊಂಡು ಹೋದ ಶಿಕ್ಷಕರು

|

Updated on: Jul 16, 2024 | 12:28 PM

ಅಂಗನವಾಡಿ ಮುಗಿಸಿ ತನ್ನ ಅಕ್ಕ ಇದ್ದಾಳೆಂದು ತರಗತಿಗೆ ಬಂದು ಮೂಲೆಯಲ್ಲಿ ಮಲಗಿದ್ದ ಮಗುವನ್ನು ಅಲ್ಲಿಯೇ ಬಿಟ್ಟು ಶಿಕ್ಷಕರು ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದ ಘಟನೆ ಪ್ರಯಾಗ್​ರಾಜ್​ನಲ್ಲಿ ನಡೆದಿದೆ.

ಅಕ್ಕ ಇದ್ದಾಳೆಂದು ತರಗತಿಗೆ ಬಂದು ಮಲಗಿದ್ದ ಮಗು, ಬಾಗಿಲು ಮುಚ್ಚಿಕೊಂಡು ಹೋದ ಶಿಕ್ಷಕರು
ಮಗು
Follow us on

ಮಗು ತರಗತಿಯಲ್ಲಿದ್ದಂತೆ ಶಿಕ್ಷಕರು ಬಾಗಿಲು ಹಾಕಿಕೊಂಡು ಹೋಗಿರುವ ಘಟನೆ ಪ್ರಯಾಗ್​ರಾಜ್​ನಲ್ಲಿ ನಡೆದಿದೆ. ಆದರೆ ಆ ಮಗು ಶಾಲೆಯ ವಿದ್ಯಾರ್ಥಿಯಲ್ಲ. ಮೆಜಾದ ಲೋಹರ್ ಗ್ರಾಮದ ವಿದ್ಯಾರ್ಥಿ ಶಿವಾನಿ ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು, ಆಕೆಯ ಕಿರಿಯ ಸಹೋದರ 3 ವರ್ಷದ ಪುಟ್ಟ ಮಗು ಅದೇ ಕ್ಯಾಂಪಸ್​ನಲ್ಲಿರುವ ಅಂಗನವಾಡಿಗೆ ಹೋಗುತ್ತಿತ್ತು.

ತನ್ನ ತರಗತಿ ಮುಗಿಯುತ್ತಿದ್ದಂತೆ ಮಗು ತನ್ನ ಅಕ್ಕನ ಕೊಠಡಿಗೆ ಬಂದು ಹಿಂದೆ ಒಂದು ಮೂಲೆಯಲ್ಲಿ ಮಲಗಿಕೊಂಡಿತ್ತು. ಶಿಕ್ಷಕರು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಬೇಕಿದ್ದ ಹಿನ್ನೆಲೆಯಲ್ಲಿ ಅರ್ಧಗಂಟೆ ಮುಂಚಿತವಾಗಿಯೇ ಶಾಲೆಗೆ ಬೀಗ ಹಾಕಿ ಹೋಗಿದ್ದರು. ಮಗುವಿನ ಅಕ್ಕನಿಗೂ ತಮ್ಮನ ನೆನಪಾಗಿರಲಿಲ್ಲ, ಮನೆಗೆ ಹೋದ ಬಳಿಕ ನೆನಪಾಗಿ ವಾಪಸಾಗಿದ್ದಾಳೆ.

ಸ್ವಲ್ಪ ಸಮಯದ ಬಳಿಕ ಶಾಲೆಯ ಕೊಠಡಿ ಕಡೆಯಿಂದ ಮಗು ಅಳುವುದು ಕೇಳಿತ್ತ್ತು, ಗ್ರಾಮಸ್ಥರು ಈ ಧ್ವನಿ ಎಲ್ಲಿಂದ ಬರುತ್ತಿದೆ ಎಂದು ತಲೆ ಕಡೆಸಿಕೊಂಡಿದ್ದರು. ಪರಿಶೀಲಿಸಿದಾಗ ಅದು ಶಾಲೆಯಿಂದ ಬರುತ್ತಿದೆ ಎಂಬುದು ತಿಳಿಯಿತು. ಬಳಿಕ ಮಗುವನ್ನು ರಕ್ಷಿಸಲಾಗಿದೆ.

ಮತ್ತಷ್ಟು ಓದಿ: ವಯಸ್ಸು ಕೇವಲ ಸಂಖ್ಯೆ ಅಷ್ಟೇ, ಆರೂವರೆ ಅಡಿ ಎತ್ತರದ ಗೇಟ್ ಹಾರಿ ವೃದ್ಧಾಶ್ರಮದಿಂದ ಪರಾರಿಯಾದ 92ರ ಅಜ್ಜಿ

ಘಟನೆ ವರದಿಯಾದ ನಂತರ ಪ್ರಾಥಮಿಕ ಶಿಕ್ಷಣಾಧಿಕಾರಿ ಪ್ರವೀಣ್ ಕುಮಾರ್ ತಿವಾರಿ ಇಬ್ಬರೂ ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಶಾಲೆಯ ಮುಚ್ಚುವ ಸಮಯ ಮಧ್ಯಾಹ್ನ 2.00 ಆಗಿದ್ದರೆ, ಶಿಕ್ಷಕರು ಮಧ್ಯಾಹ್ನ 2.30 ಕ್ಕೆ ಹೊರಡಬೇಕು. ಆದರೆ, ಶಿಕ್ಷಕರು ಮಧ್ಯಾಹ್ನ 2 ಗಂಟೆಗೂ ಮುನ್ನವೇ ಶಾಲೆ ಮುಚ್ಚಿದ್ದರು.

ಸಹಾಯಕ ಶಿಕ್ಷಕಿ ಜೂಲಿ ಕುಮಾರಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ನಿರ್ಲಕ್ಷ್ಯದ ಕಾರಣಕ್ಕಾಗಿ ಜೂಲಿ ಕುಮಾರಿ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಲಲಿತ್ ಸಿಂಗ್ ಅವರ ಸಂಬಳವನ್ನು ಒಂದು ದಿನದ ಮಟ್ಟಿಗೆ ತಡೆಹಿಡಿಯಲಾಗಿದೆ. ಬ್ಲಾಕ್ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಅವಸ್ತಿ ತನಿಖಾಧಿಕಾರಿಯಾಗಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ