AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಾರ್ಟ್‌ಫೋನ್‌ಗಳ ದೀರ್ಘಾವಧಿಯ ಬಳಕೆಯಿಂದಾಗಿ ದೃಷ್ಟಿ ಹೀನತೆ; ಎಚ್ಚರ ವಹಿಸಿ, ವೈದ್ಯರ ಸಲಹೆ ಪಾಲಿಸಿ

ಮಂಜು ಎಂಬ ಹೆಸರಿನ ರೋಗಿಯು ತನ್ನ ಮಗುವನ್ನು ನೋಡಿಕೊಳ್ಳಲು ಬ್ಯೂಟಿಷಿಯನ್ ಕೆಲಸವನ್ನು ತೊರೆದ ನಂತರ ಆಕೆಯಲ್ಲಿ ದೃಷ್ಟಿಹೀನತೆಯ ಲಕ್ಷಣ ಕಾಣಿಸಿಕೊಂಡಿತು. ರಾತ್ರಿಯಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ತನ್ನ ಕೋಣೆಯ ದೀಪಗಳನ್ನು ಸ್ವಿಚ್ ಆಫ್ ಮಾಡಿ ಆಕೆ ಹಲವಾರು ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಳು ಎಂದು ಹೇಳಲಾಗಿದೆ.

ಸ್ಮಾರ್ಟ್‌ಫೋನ್‌ಗಳ ದೀರ್ಘಾವಧಿಯ ಬಳಕೆಯಿಂದಾಗಿ ದೃಷ್ಟಿ ಹೀನತೆ; ಎಚ್ಚರ ವಹಿಸಿ, ವೈದ್ಯರ ಸಲಹೆ ಪಾಲಿಸಿ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:Feb 09, 2023 | 8:58 PM

Share

ಸ್ಮಾರ್ಟ್‌ಫೋನ್‌ಗಳ (Smartphone) ದೀರ್ಘಾವಧಿಯ ಬಳಕೆಯಿಂದಾಗಿ ದೃಷ್ಟಿ ದೋಷವುಂಟಾಗುತ್ತದೆ ಎಂಬುದರ ಬಗ್ಗೆ ವೈದ್ಯರೊಬ್ಬರು ಸರಣಿ ಟ್ವೀಟ್ ಮಾಡಿದ್ದು 30ರ ಹರೆಯದ ಮಹಿಳೆಯೊಬ್ಬರಿಗೆ ಯಾವ ರೀತಿ ದೃಷ್ಟಿ ದೋಷವುಂಟಾಗಿದೆ ಎಂದು ಅವರು ವಿವರಿಸಿದ್ದಾರೆ. ಹೈದರಾಬಾದ್ ಮೂಲದ ವೈದ್ಯರು ತಮ್ಮ ರೋಗಿಯ ಕೇಸ್ ಸ್ಟಡಿಯನ್ನು ಹಂಚಿಕೊಂಡಿದ್ದು ‘ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್’ (SVS) ಹೇಗೆ ಉಂಟಾಗುತ್ತದೆ ಮತ್ತು ಅವಳು ತನ್ನ ದೃಷ್ಟಿಯನ್ನು ಹೇಗೆ ಸರಿಪಡಿಸಿದಳು ಎಂಬುದನ್ನು ವಿವರಿಸಿದ್ದಾರೆ. “ಅವಳು ಹಲವಾರು ಸೆಕೆಂಡುಗಳ ಕಾಲ ಏನನ್ನೂ ನೋಡದ ಕ್ಷಣಗಳು ಇದ್ದವು. ಇದು ಹೆಚ್ಚಾಗಿ ರಾತ್ರಿ ಅವಳು ವಾಶ್‌ರೂಮ್ ಬಳಸಲು ಎದ್ದಾಗ ಸಂಭವಿಸಿತು. ಆಕೆಯನ್ನು ಕಣ್ಣಿನ ತಜ್ಞರು ಪರೀಕ್ಷಿಸಿದರು.ವಿವರವಾದ ಮೌಲ್ಯಮಾಪನದಿಂದ ಎಲ್ಲವೂ ಸರಿಯಾಗಿದೆ ಎಂದು ತಿಳಿದುಬಂದಿತ್ತು ಎಂದು ಡಾ ಸುಧೀರ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಮಂಜು ಎಂಬ ಹೆಸರಿನ ರೋಗಿಯು ತನ್ನ ಮಗುವನ್ನು ನೋಡಿಕೊಳ್ಳಲು ಬ್ಯೂಟಿಷಿಯನ್ ಕೆಲಸವನ್ನು ತೊರೆದ ನಂತರ ಆಕೆಯಲ್ಲಿ ದೃಷ್ಟಿಹೀನತೆಯ ಲಕ್ಷಣ ಕಾಣಿಸಿಕೊಂಡಿತು. ರಾತ್ರಿಯಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ತನ್ನ ಕೋಣೆಯ ದೀಪಗಳನ್ನು ಸ್ವಿಚ್ ಆಫ್ ಮಾಡಿ ಆಕೆ ಹಲವಾರು ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಳು ಎಂದು ಹೇಳಲಾಗಿದೆ.

ಔಷಧಿಯನ್ನು ಬರೆಯುವ ಬದಲು, ವೈದ್ಯರು ಸ್ಮಾರ್ಟ್ ಫೋನ್ ಬಳಕೆಯನ್ನು ಕಡಿಮೆ ಮಾಡಲು ಆಕೆಗೆ ಸಲಹೆ ನೀಡಿದರು. “ಮಂಜು ತನ್ನ ಮೆದುಳಿನ ನರಗಳಿಗೆ ಏನಾದರೂ  ಸಂಭವಿಸಿರಬಹುದೇ ಎಂದು ಆತಂಕದಿಂದ ಇದ್ದಳು. ಆಕೆ ಸ್ಮಾರ್ಟ್ ಫೋನ್​​ನಿಂದ ದೂರವಿರುವುದಕ್ಕೆ ಸಿದ್ಧವಾದಳು. ಬಳಕೆ ಕಡಿಮೆಗೊಳಿಸುವ ಬದಲು, ಅಗತ್ಯವಿದ್ದರೆ ಮಾತ್ರ ನಾನು ಸ್ಮಾರ್ಟ್‌ಫೋನ್ ನೋಡುತ್ತವೆ. ಅದು ಮನರಂಜನೆಯ ವಸ್ತು ಅಷ್ಟೇ ಎಂದು ಆಕೆ ಹೇಳಿದ್ದಾಳೆ.

ಇದನ್ನೂ ಓದಿ: ನೆಹರು ಬಗ್ಗೆ ಸಾಕಷ್ಟು ಹೇಳ್ತೀರಿ, ಅವರ ಸರ್​​ನೇಮ್ ಯಾಕೆ ಬಳಸುತ್ತಿಲ್ಲ?: ಗಾಂಧಿ ಕುಟುಂಬಕ್ಕೆ ಪ್ರಧಾನಿ ಮೋದಿ ಪ್ರಶ್ನೆ

ರಾತ್ರಿಯಲ್ಲಿ ಕ್ಷಣಾರ್ಧದಲ್ಲಿ ದೃಷ್ಟಿ ಕಳೆದುಕೊಳ್ಳುವುದು ಸೇರಿದಂತೆ ಒಂದು ತಿಂಗಳ ಕಾಲ ಸರಿಪಡಿಸುವ ಕ್ರಮದ ನಂತರ ಮಂಜು ಅವರ ದೃಷ್ಟಿಯನ್ನು ವಾಪಸ್ ಬಂತು. ಡಿಜಿಟಲ್ ಸಾಧನಗಳ ಪ್ರತಿ 20 ನಿಮಿಷಗಳ ಬಳಕೆಯ ನಂತರ 20 ಸೆಕೆಂಡುಗಳ ವಿರಾಮವನ್ನು ತೆಗೆದುಕೊಳ್ಳಲು ಕುಮಾರ್ ಸಲಹೆ ನೀಡಿದ್ದಾರೆ. “ಡಿಜಿಟಲ್ ಪರದೆಯನ್ನು (20-20-20 ನಿಯಮ) ಬಳಸುವಾಗ, 20 ಅಡಿ ದೂರದಲ್ಲಿರುವ ಯಾವುದನ್ನಾದರೂ ನೋಡಲು ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ವಿರಾಮ ತೆಗೆದುಕೊಳ್ಳಿ” ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:56 pm, Thu, 9 February 23