AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಹರು ಬಗ್ಗೆ ಸಾಕಷ್ಟು ಹೇಳ್ತೀರಿ, ಅವರ ಸರ್​​ನೇಮ್ ಯಾಕೆ ಬಳಸುತ್ತಿಲ್ಲ?: ಗಾಂಧಿ ಕುಟುಂಬಕ್ಕೆ ಪ್ರಧಾನಿ ಮೋದಿ ಪ್ರಶ್ನೆ

PM Narendra Modi: ಕೆಲವು ಸದಸ್ಯರ ನಡವಳಿಕೆ ಮತ್ತು ಸ್ವರ ಇಡೀ ದೇಶಕ್ಕೆ ನಿರಾಶಾದಾಯಕವಾಗಿದೆ, ಅಂತಹವರಿಗೆ ನಾನು ಹೇಳಬಯಸುವುದೇನೆಂದರೆ ಜಿತ್ನಾ ಕೀಚಡ್ ಉಚ್ಛಾಲೋಗೆ, ಕಮಲ ಉತ್ನಾ ಹೀ ಖಿಲೇಗಾ (ನೀವು ನಮ್ಮ ಮೇಲೆ ಎಷ್ಟು ಕೆಸರು ಎಸೆದರೂ, ಕಮಲ ಹೆಚ್ಚು ಅರಳುತ್ತದೆ) ಕಮಲ ಅರಳಿಸಿದ್ದಕ್ಕಾಗಿ ನಾವು ಪ್ರತಿಪಕ್ಷಗಳಿಗೆ ಧನ್ಯವಾದ ಹೇಳುತ್ತೇವೆ ಎಂದ ಪ್ರಧಾನಿ

ನೆಹರು ಬಗ್ಗೆ ಸಾಕಷ್ಟು ಹೇಳ್ತೀರಿ, ಅವರ ಸರ್​​ನೇಮ್ ಯಾಕೆ ಬಳಸುತ್ತಿಲ್ಲ?: ಗಾಂಧಿ ಕುಟುಂಬಕ್ಕೆ ಪ್ರಧಾನಿ ಮೋದಿ ಪ್ರಶ್ನೆ
ರಾಜ್ಯಸಭೆಯಲ್ಲಿ ಮೋದಿ ಭಾಷಣ
ರಶ್ಮಿ ಕಲ್ಲಕಟ್ಟ
|

Updated on:Feb 09, 2023 | 7:06 PM

Share

ದೆಹಲಿ: ರಾಹುಲ್ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ(Narendra Modi), ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರನ್ನು ಗೌರವಿಸಲು ಅವರಲ್ಲಿ ಯಾರೂ ನೆಹರು ಹೆಸರನ್ನು ಏಕೆ ಬಳಸಲಿಲ್ಲ ಎಂದು ಕೇಳಿದ್ದಾರೆ. “ನಾವು ಎಲ್ಲಿಯಾದರೂ ನೆಹರು ಅವರನ್ನು ಉಲ್ಲೇಖಿಸುವುದನ್ನು ಬಿಟ್ಟಿದ್ದರೆ ಅವರು (ಕಾಂಗ್ರೆಸ್) ಅಸಮಾಧಾನಗೊಳ್ಳುತ್ತಾರೆ, ನೆಹರು ಅವರು ಅಂತಹ ಮಹಾನ್ ವ್ಯಕ್ತಿಯಾಗಿದ್ದರು. ಆದರೆ ಅವರ್ಯಾರೂ ನೆಹರು ಸರ್​​ನೇಮ್ ಏಕೆ ಬಳಸುವುದಿಲ್ಲ, ನೆಹರು ಹೆಸರನ್ನು ಬಳಸುವುದರಲ್ಲಿ ನಾಚಿಕೆ ಏನಿದೆ ಎಂದು  ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಮೋದಿ ಈ ಮಾತನ್ನು ಹೇಳಿದ್ದಾರೆ.ಬಿಲಿಯನೇರ್ ಗೌತಮ್ ಅದಾನಿ ಅವರೊಂದಿಗಿನ ನಂಟಿನ ಬಗ್ಗೆ ಮೋದಿ ಹೇಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದ್ದು, ಸದನದಲ್ಲಿ ಗದ್ದಲದ ನಡುವೆಯೇ ಮೋದಿ ಮಾತನಾಡಿದ್ದಾರೆ.

ಕಾಂಗ್ರೆಸ್ ಮತ್ತು ಅದರ ಪ್ರಧಾನ ಮಂತ್ರಿಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಮೋದಿ, ಪಕ್ಷವು ತನ್ನ ಸರ್ಕಾರವನ್ನು ಟೀಕಿಸುವಾಗ ತನ್ನದೇ ಆದ ವಿವಾದಗಳನ್ನು ಮುಚ್ಚಿಹಾಕುತ್ತಿದೆ ಎಂದು ಆರೋಪಿಸಿದರು.”ನಾವು ರಾಜ್ಯಗಳಿಗೆ ತೊಂದರೆ ನೀಡುತ್ತೇವೆ ಎಂದು ಅವರು ಹೇಳುತ್ತಾರೆ, ಆದರೆ ಅವರು ಚುನಾಯಿತ ರಾಜ್ಯ ಸರ್ಕಾರಗಳನ್ನು 90 ಬಾರಿ ಉರುಳಿಸಿದ್ದಾರೆ. ಒಬ್ಬ ಕಾಂಗ್ರೆಸ್ ಪ್ರಧಾನಿ ಚುನಾಯಿತ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಲು 356 ನೇ ವಿಧಿಯನ್ನು ಐವತ್ತು ಬಾರಿ ಬಳಸಿದರು. ಅದು ಇಂದಿರಾ ಗಾಂಧಿ. ಅದೇ ವೇಳೆ  ಈ ದೇಶ ಯಾವುದೇ ಕುಟುಂಬದ ಆಸ್ತಿಯಲ್ಲ ಎಂದು ಮೋದಿ ಹೇಳಿದ್ದಾರೆ.

ವಿಪಕ್ಷಗಳು ನಿರಂತರ ಘೋಷಣೆ ಕೂಗುತ್ತಿದ್ದಾಗ ಪ್ರಧಾನಿ ಮೋದಿ, “ನೀವು ನಮ್ಮ ಮೇಲೆ ಎಷ್ಟೇ ಕೆಸರು ಎರಚಿದರೂ ಕಮಲ (ಬಿಜೆಪಿ ಚಿಹ್ನೆ) ಅರಳುತ್ತದೆ” ಎಂದು ಹೇಳಿದರು. ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಸಾಂವಿಧಾನಿಕ ನಿಬಂಧನೆಗಳನ್ನು ಹೆಚ್ಚು ದುರುಪಯೋಗಪಡಿಸಿಕೊಂಡ ಪಕ್ಷ ಕಾಂಗ್ರೆಸ್: ಮೋದಿ ವಾಗ್ದಾಳಿ

“ಕೆಲವು ಸದಸ್ಯರ ನಡವಳಿಕೆ ಮತ್ತು ಸ್ವರ ಇಡೀ ದೇಶಕ್ಕೆ ನಿರಾಶಾದಾಯಕವಾಗಿದೆ, ಅಂತಹವರಿಗೆ ನಾನು ಹೇಳಬಯಸುವುದೇನೆಂದರೆ ಜಿತ್ನಾ ಕೀಚಡ್ ಉಚ್ಛಾಲೋಗೆ, ಕಮಲ ಉತ್ನಾ ಹೀ ಖಿಲೇಗಾ (ನೀವು ನಮ್ಮ ಮೇಲೆ ಎಷ್ಟು ಕೆಸರು ಎಸೆದರೂ, ಕಮಲ ಹೆಚ್ಚು ಅರಳುತ್ತದೆ) ಕಮಲ ಅರಳಿಸಿದ್ದಕ್ಕಾಗಿ ನಾವು ಪ್ರತಿಪಕ್ಷಗಳಿಗೆ ಧನ್ಯವಾದ ಹೇಳುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಮೋದಿ ಭಾಷಣದ ಮುಖ್ಯಾಂಶಗಳು

  • ಕಳೆದ 3-4 ವರ್ಷಗಳಲ್ಲಿ ಸುಮಾರು 11 ಕೋಟಿ ಮನೆಗಳು ನಲ್ಲಿ ನೀರಿನ ಸಂಪರ್ಕ ಪಡೆದಿವೆ. ನಾವು ಜನ್ ಧನ್ ಖಾತೆ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ಕಳೆದ 9 ವರ್ಷಗಳಲ್ಲಿ ದೇಶಾದ್ಯಂತ 48 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ.
  • ಕಾಂಗ್ರೆಸ್ ‘ಗರೀಬಿ ಹಠಾವೋ’ ಎಂದು ಹೇಳುತ್ತಿದ್ದರು. ಆದರೆ ನಾಲ್ಕು ದಶಕಗಳಿಂದ ಏನನ್ನೂ ಮಾಡಲಿಲ್ಲ. ಆದರೆ ನಾವು ದೇಶದ ಜನರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಶ್ರಮಿಸಿದೆವು.
  •  ನಾನು ಈ ಸಂಸದರಿಗೆ (ಪ್ರತಿಪಕ್ಷದ ಸಂಸದರಿಗೆ) ಹೇಳಬಯಸುವುದೇನೆಂದರೆನೀವು ಎಷ್ಟೇ  ಕೆಸರು ಎಸೆದರೂ ಅಷ್ಟೇ ಚೆನ್ನಾಗಿ ಕಮಲ ಅರಳುತ್ತದೆ.
  •  ನಾವು ದೇಶದಲ್ಲಿ 110 ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಗುರುತಿಸಿದ್ದೇವೆ. ನಿರಂತರ ಗಮನ ಮತ್ತು ಕಾರ್ಯಕ್ಷಮತೆಯ ಪರಿಶೀಲನೆಯಿಂದಾಗಿ ಈ ಜಿಲ್ಲೆಗಳಲ್ಲಿ ಶಿಕ್ಷಣ, ಮೂಲಸೌಕರ್ಯ ಮತ್ತು ಆರೋಗ್ಯ ಸುಧಾರಿಸಿದೆ. ಇದರಿಂದ ಮೂರು ಕೋಟಿಗೂ ಹೆಚ್ಚು ಬುಡಕಟ್ಟು ಜನಾಂಗದವರಿಗೆ ಅನುಕೂಲವಾಗಿದೆ.
  •  ನಾವು ತಂತ್ರಜ್ಞಾನದ ಶಕ್ತಿಯೊಂದಿಗೆ ಕಾರ್ಮಿಕ ಸಂಸ್ಕೃತಿಯನ್ನು ಪರಿವರ್ತಿಸಿದ್ದೇವೆ. ನಮ್ಮ ಗಮನವು ವೇಗವನ್ನು ಹೆಚ್ಚಿಸುವುದು ಮತ್ತು ಪ್ರಮಾಣವನ್ನು ಹೆಚ್ಚಿಸುವುದು.
  • ಕೆಲವರಿಗೆ ಸರ್ಕಾರದ ಯೋಜನೆಗಳ ಹೆಸರುಗಳು ಮತ್ತು ಸಂಸ್ಕೃತ ಪದಗಳ ಹೆಸರುಗಳಲ್ಲಿ ಸಮಸ್ಯೆಗಳಿದ್ದವು. 600 ಸರ್ಕಾರಿ ಯೋಜನೆಗಳು ಗಾಂಧಿ-ನೆಹರು ಕುಟುಂಬದ ಹೆಸರಿನಲ್ಲಿವೆ ಎಂದು ನಾನು ವರದಿಯಲ್ಲಿ ಓದಿದ್ದೇನೆ. ಅವರ ತಲೆಮಾರಿನ ಜನರು ನೆಹರು ಸರ್​​ನೇಮ್ ಯಾಕೆ ಇಟ್ಟುಕೊಳ್ಳುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ.
  • ಲಸಿಕೆಯನ್ನು ನಮ್ಮ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತೆ ಜಗತ್ತಿನ ಜನರಿಂದ ಒತ್ತಡವಿತ್ತು, ಲೇಖನಗಳನ್ನು ಬರೆಯಲಾಗಿದೆ, ಟಿವಿ ಸಂದರ್ಶನಗಳನ್ನು ನೀಡಲಾಯಿತು. ನಿನ್ನೆಯವರೆಗೂ ನಮ್ಮ ವಿಜ್ಞಾನಿಗಳನ್ನು ಅವಮಾನಿಸುವ ಪ್ರಯತ್ನಗಳು ನಡೆದಿವೆ. ಆದರೆ ನನ್ನ ದೇಶದ ವಿಜ್ಞಾನಿಗಳು ಲಸಿಕೆಗಳನ್ನು ತಯಾರಿಸಿದ್ದಾರೆ ಮತ್ತು ಅದನ್ನು ಅಂಗೀಕರಿಸಲಾಗಿದೆ. ಇದರಿಂದ 150 ದೇಶಗಳಿಗೆ ಪ್ರಯೋಜನವಾಗಿದೆ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:58 pm, Thu, 9 February 23

ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ