32 ವರ್ಷಗಳ ನಂತರ ಅಯೋಧ್ಯೆಯ ಅದೇ ಜಾಗದಲ್ಲಿ ಪೋಸ್ ಕೊಟ್ಟ ಬಿಜೆಪಿ ನಾಯಕಿ ಉಮಾಭಾರತಿ

|

Updated on: Jan 22, 2024 | 3:10 PM

ಉಮಾಭಾರತಿ ಅವರು ದೇವಾಲಯದ ಆಂದೋಲನದ ಇನ್ನೊಬ್ಬ ಪ್ರಮುಖ ನಾಯಕಿ ಸಾಧ್ವಿ ಋತಂಭರಾ ಅವರನ್ನು ಅಪ್ಪಿಕೊಳ್ಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ. ಅವರ ರಾಜಕೀಯ ಹೋರಾಟ ಫಲಕೊಟ್ಟಿದ್ದು, ಈ ಖುಷಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.

32 ವರ್ಷಗಳ ನಂತರ ಅಯೋಧ್ಯೆಯ ಅದೇ ಜಾಗದಲ್ಲಿ ಪೋಸ್ ಕೊಟ್ಟ ಬಿಜೆಪಿ ನಾಯಕಿ ಉಮಾಭಾರತಿ
ಉಮಾ ಭಾರತಿ
Follow us on

ಅಯೋಧ್ಯೆ  ಜನವರಿ 22 : ಬಿಜೆಪಿಯ (BJP) ಹಿರಿಯ ನಾಯಕಿ  ಉಮಾಭಾರತಿ (Uma Bharti) ಇಂದು ಅಯೋಧ್ಯೆಯಲ್ಲಿದ್ದಾರೆ. ಅವರು 32 ವರ್ಷ 46 ದಿನಗಳ ಹಿಂದೆ ಇದೇ ಜಾಗದಲ್ಲಿದ್ದರು. ಅಂದು ಬಾಬರಿ ಮಸೀದಿಯನ್ನು(Babri Masjid) ಹಿಂದೂ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಇಂದು, ಅದೇ ಸ್ಥಳದಲ್ಲಿ ಭವ್ಯವಾದ ರಾಮಮಂದಿರ (Ram Mandir) ನಿರ್ಮಾಣವಾಗಿದ್ದು, ಲಕ್ಷಾಂತರ ಹಿಂದೂಗಳು ಭಗವಾನ್ ರಾಮನ ಜನ್ಮಸ್ಥಳವೆಂದು ನಂಬುತ್ತಾರೆ. ದೇವಸ್ಥಾನದ ಆಂದೋಲನದ ಮುಂಚೂಣಿಯಲ್ಲಿದ್ದ ಬಿಜೆಪಿ ನಾಯಕಿ ಉಮಾಭಾರತಿ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮಮಂದಿರದಲ್ಲಿ ರಾಮಲಲ್ಲಾ ‘ಪ್ರಾಣ ಪ್ರತಿಷ್ಠಾ’ದ ಕಾರ್ಯ ನಡೆಸುವ ಕೊನೆಯ ಕ್ಷಣದ ಸಿದ್ಧತೆಗಳ ನಡುವೆ, ಉಮಾಭಾರತಿ ಅವರು ದೇವಾಲಯದ ಆಂದೋಲನದ ಇನ್ನೊಬ್ಬ ಪ್ರಮುಖ ನಾಯಕಿ ಸಾಧ್ವಿ ಋತಂಭರಾ ಅವರನ್ನು ಅಪ್ಪಿಕೊಳ್ಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ. ಅವರ ರಾಜಕೀಯ ಹೋರಾಟ ಫಲಕೊಟ್ಟಿದ್ದು, ಈ ಖುಷಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.

ನಾನು ಅಯೋಧ್ಯೆಯ ರಾಮ ಮಂದಿರದ ಮುಂದೆ ಇದ್ದೇನೆ, ನಾವು ರಾಮ ಲಲ್ಲಾಗಾಗಿ ಕಾಯುತ್ತಿದ್ದೇವೆ ಎಂದು ಉಮಾಭಾರತಿ ಫೋಟೊವೊಂದನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.


ಡಿಸೆಂಬರ್ 6, 1992 ರಂದು ಕ್ಲಿಕ್ ಮಾಡಿದ ಚಿತ್ರದಲ್ಲಿ ಉಮಾ ಭಾರತಿ ಬಿಜೆಪಿಯ ಹಿರಿಯ ಮುರಳಿ ಮನೋಹರ್ ಜೋಶಿ ಅವರನ್ನು  ತೋರಿಸಿದೆ. ಉಮಾ ಭಾರತಿ ಮತ್ತು ಜೋಶಿ ಇಬ್ಬರೂ ನಗುತ್ತಿರುವ ಚಿತ್ರವಾಗಿದೆ ಇದು.

ಅಂದಹಾಗೆ 90ರ ಹರೆಯದ ಜೋಶಿ ಅವರು ಈ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ . ರಾಮಜನ್ಮಭೂಮಿ ಆಂದೋಲನದ ಮುಖ್ಯ ವಾಸ್ತುಶಿಲ್ಪಿ ಎಲ್‌ಕೆ ಅಡ್ವಾಣಿ ಕೂಡ ಪ್ರತಿಕೂಲ ಹವಾಮಾನದಿಂದಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ.

ವೃದ್ಧಾಪ್ಯದ ಕಾರಣದಿಂದ ದೂರವಿರಲು ಹಿರಿಯ ನಾಯಕರಲ್ಲಿ ಕೇಳಿದ್ದೇವೆ ಎಂದು ದೇವಸ್ಥಾನದ ಟ್ರಸ್ಟ್ ಹೇಳಿದ ನಂತರ ರಾಜಕೀಯ ವಿವಾದ ಭುಗಿಲೆದ್ದಿತ್ತು.ನಂತರ, ಎರಡೂ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಕಳೆದ ವಾರ, ಅಡ್ವಾಣಿ ತಮ್ಮ ಶುಭ ಹಾರೈಕೆಗಳನ್ನು ನೀಡಿದರು ಮತ್ತು ಮಂದಿರವನ್ನು ನಿರ್ಮಿಸಲು ಭಗವಾನ್ ರಾಮನು ಪ್ರಧಾನಿ ಮೋದಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿಮುಖ್ಯ ಯಜಮಾನನಾಗಿ ರಾಮಮಂದಿರ ಪ್ರಾಣ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ

1990 ರ ದಶಕದ ರಾಮಮಂದಿರ ಚಳವಳಿಯ ಕೆಲವು ನಾಯಕರಲ್ಲಿ ಉಮಾ ಭಾರತಿ ಅವರು ಇಂದು ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐನಿಂದ ಆರೋಪ ಹೊರಿಸಲಾದ ಬಿಜೆಪಿ ಮತ್ತು ಸಂಘಪರಿವಾರದ ನಾಯಕರಲ್ಲಿ ಉಮಾ ಭಾರತಿ ಮತ್ತು ಋತಂಭರಾ ಸೇರಿದ್ದಾರೆ. ಅಡ್ವಾಣಿ, ಜೋಶಿ ಮತ್ತು ಇತರರೊಂದಿಗೆ ವಿಶೇಷ ನ್ಯಾಯಾಲಯವು ಇವರನ್ನು 2020 ರಲ್ಲಿ ಖುಲಾಸೆಗೊಳಿಸಿತು.

ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ  ಋತಂಭರಾ, ರಾಮದೇವರು ದೇವಾಲಯಕ್ಕಾಗಿ ಹೋರಾಟವನ್ನು ಮುಂದುವರಿಸಲು ಅವರಿಗೆ ಧೈರ್ಯವನ್ನು ನೀಡಿದ್ದಾರೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ