ದೆಹಲಿ ದಳ್ಳುರಿ: ಮೃತರ ಸಂಖ್ಯೆ 34ಕ್ಕೆ ಏರಿಕೆ, ಪರೀಕ್ಷೆಗಳು ಮುಂದೂಡಿಕೆ
ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ಸ್ಥಳೀಯರನ್ನ ಕಂಗಾಲಾಗುವಂತೆ ಮಾಡಿದೆ. ಸದ್ಯದ ಮಟ್ಟಿಗೆ ದೆಹಲಿಯಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನ ಮುಂದೂಡಲಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಮೇಲೂ ತೂಗುಗತ್ತಿ ನೆತಾಡುತ್ತಿದೆ. ಈ ಮಧ್ಯೆ ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೂಡ ಹರಸಾಹಸಪಡ್ತಿದೆ. ದೆಹಲಿ ಗಲಭೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ. ಬಾಡಿಗೆ ತಾಯ್ತನ ಮಸೂದೆಗೆ ಒಪ್ಪಿಗೆ: ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆಗೆ ಕೇಂದ್ರ ಸಚಿವ ಸಂಪುಟ ನಿನ್ನೆ ಅನುಮೋದನೆ ನೀಡಿದೆ. ರಾಜ್ಯಸಭೆ ಆಯ್ಕೆ ಸಮಿತಿ ಮಾಡಿದ್ದ ಪ್ರಮುಖ ಶಿಫಾರಸುಗಳನ್ನ ಅಳವಡಿಸಿಕೊಂಡ ನಂತರ ಅನುಮೋದನೆ […]
ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ಸ್ಥಳೀಯರನ್ನ ಕಂಗಾಲಾಗುವಂತೆ ಮಾಡಿದೆ. ಸದ್ಯದ ಮಟ್ಟಿಗೆ ದೆಹಲಿಯಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನ ಮುಂದೂಡಲಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಮೇಲೂ ತೂಗುಗತ್ತಿ ನೆತಾಡುತ್ತಿದೆ. ಈ ಮಧ್ಯೆ ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೂಡ ಹರಸಾಹಸಪಡ್ತಿದೆ. ದೆಹಲಿ ಗಲಭೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ.
ಬಾಡಿಗೆ ತಾಯ್ತನ ಮಸೂದೆಗೆ ಒಪ್ಪಿಗೆ: ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆಗೆ ಕೇಂದ್ರ ಸಚಿವ ಸಂಪುಟ ನಿನ್ನೆ ಅನುಮೋದನೆ ನೀಡಿದೆ. ರಾಜ್ಯಸಭೆ ಆಯ್ಕೆ ಸಮಿತಿ ಮಾಡಿದ್ದ ಪ್ರಮುಖ ಶಿಫಾರಸುಗಳನ್ನ ಅಳವಡಿಸಿಕೊಂಡ ನಂತರ ಅನುಮೋದನೆ ನೀಡಲಾಗಿದೆ. ಮಸೂದೆಗೆ ಅನುಮೋದನೆ ನೀಡಿರುವ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದ್ದಾರೆ.
ಎಟಿಎಂಗಳಲ್ಲಿ ಸಿಗಲ್ಲ ₹2000..! ಎಟಿಎಂಗಳಲ್ಲಿ 2000 ಮುಖ ಬೆಲೆಯ ನೋಟುಗಳು ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪಿಂಕ್ ನೋಟ್ ಸಹ ಬ್ಯಾನ್ ಆಗಲಿದೆಯಾ ಎಂಬ ಅನುಮಾನ ಎದುರಾಗಿದೆ. ಚಿಲ್ಲರೆ ಪಡೆಯಲು ಗ್ರಾಹಕರು ಸಂಕಷ್ಟ ಎದುರುಸ್ತಿರುವ ಹಿನ್ನೆಲೆಯಲ್ಲಿ 2 ಸಾವಿರ ನೋಟುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಬ್ಯಾಂಕ್ಗಳು ತಿಳಿಸಿವೆ.
Published On - 10:24 am, Thu, 27 February 20