ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಬೆಳಗ್ಗೆ ಎರಡು ಬಾರಿ ಭೂಕಂಪ..
Andaman and Nicobar: ಇತ್ತೀಚೆಗೆ ಹಲವು ಕಡೆಗಳಲ್ಲಿ ಭೂಕಂಪ ಉಂಟಾಗುತ್ತಿದೆ. ರಾಜಸ್ಥಾನದ ಬಿಕಾನೇರ್ನಲ್ಲಿ ಈಗಾಗಲೇ ಎರಡು ಬಾರಿ ಭೂಕಂಪವಾಗಿದೆ. ಈ ಎರಡೂ ಬಾರಿಯೂ ತೀವ್ರತೆ 5ಕ್ಕಿಂತ ಜಾಸ್ತಿಯಿತ್ತು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ (Andaman and Nicobar)ದಲ್ಲಿ ಇಂದು ಬೆಳಗ್ಗೆ ಎರಡು ಕಡೆಗಳಲ್ಲಿ ಭೂಕಂಪ(Earthquake) ಉಂಟಾಗಿದೆ. ಮೊದಲ ಭೂಕಂಪ ಅಂಡಮಾನ್ ಮತ್ತು ನಿಕೋಬಾರ್ನ ಪೋರ್ಟ್ಬ್ಲೇರ್ ಬಳಿ ಉಂಟಾಗಿದ್ದು, ರಿಕ್ಟರ್ ಮಾಪಕ (Rictor Scale)ದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಇಲ್ಲಿ ಮುಂಜಾನೆ 6.27ರಹೊತ್ತಿಗೆ ಭೂಮಿ ನಡುಗಿದೆ.
ಒಮ್ಮೆ ಭೂಕಂಪ ನಿಂತರೂ ಮತ್ತೆ ಬೆಳಗ್ಗೆ 7.21ರ ಹೊತ್ತಿಗೆ ಮತ್ತೊಮ್ಮೆ ಭೂಮಿ ನಡುಗಿದೆ. ಆಗ ಅದರ ತೀವ್ರತೆ ಮತ್ತಷ್ಟು ಹೆಚ್ಚಾಗಿತ್ತು. ಅಂದರೆ ರಿಕ್ಟರ್ ಮಾಪಕದಲ್ಲಿ 4.6ರಷ್ಟು ದಾಖಲಾಗಿದೆ ಎಂದು ಎನ್ಸಿಎಸ್ ತಿಳಿಸಿದೆ.
ಇತ್ತೀಚೆಗೆ ಹಲವು ಕಡೆಗಳಲ್ಲಿ ಭೂಕಂಪ ಉಂಟಾಗುತ್ತಿದೆ. ರಾಜಸ್ಥಾನದ ಬಿಕಾನೇರ್ನಲ್ಲಿ ಈಗಾಗಲೇ ಎರಡು ಬಾರಿ ಭೂಕಂಪವಾಗಿದೆ. ಈ ಎರಡೂ ಬಾರಿಯೂ ತೀವ್ರತೆ 5ಕ್ಕಿಂತ ಜಾಸ್ತಿಯಿತ್ತು. ಹಾಗೇ ಮೇಘಾಲಯ, ಹೈದರಾಬಾದ್ಗಳಲ್ಲೂ ಭೂಮಿ ನಡುಗಿತ್ತು. ಈ ಮಧ್ಯೆ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಒಂದು ಆತಂಕಕಾರಿ ವರದಿಯನ್ನೂ ನೀಡಿದೆ. ದೇಶದ ಶೇ59ರಷ್ಟು ಭಾಗಗಳಲ್ಲಿ ವಿವಿಧ ರೀತಿಯ ಭೂಕಂಪನಗಳು ಸಂಭವಿಸುವ ಸಾಧ್ಯತೆ ಇರುವುದಾಗಿ ಎನ್ಸಿಎಸ್ ಮಾಹಿತಿ ನೀಡಿದೆ. ಸದ್ಯದವರೆಗೆ ಯಾವುದೇ ಪ್ರದೇಶದಲ್ಲಿ ಭೀಕರವಾಗಿ ಭೂಕಂಪನವಾಗಿಲ್ಲ ಎಂದೂ ತಿಳಿಸಿದೆ.