ಚಿತ್ರದುರ್ಗ: ಅಪ್ರಾಪ್ತೆ ಅತ್ಯಾಚಾರ-ಕೊಲೆ ಪ್ರಕರಣ ಸಂಬಂಧ ಆರೋಪಿ ಬಿಡುಗಡೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಯುವಕ ಅರೆಸ್ಟ್

ಚಿತ್ರದುರ್ಗ: ಅಪ್ರಾಪ್ತೆ ಅತ್ಯಾಚಾರ-ಕೊಲೆ ಪ್ರಕರಣ ಸಂಬಂಧ ಆರೋಪಿ ಬಿಡುಗಡೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಯುವಕ ಅರೆಸ್ಟ್
ಎಸ್.ದರ್ಶನ್

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ₹10 ಸಾವಿರ‌ ದಂಡ, 2 ತಿಂಗಳು ಶಿಕ್ಷೆ ವಿಧಿಸಿ ರಿಲೀಸ್ ಮಾಡಲಾಗಿದೆ ಎಂದು ದರ್ಶನ್, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ ಹಬ್ಬಿಸಿದ್ದ.

TV9kannada Web Team

| Edited By: Ayesha Banu

Aug 03, 2021 | 9:07 AM

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಗ್ಗೆ ಸುಳ್ಳು ವದಂತಿ ಹಬ್ಬಿಸಿದ್ದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಿತ್ರದುರ್ಗ ತಾಲೂಕಿನ ಭರಮಸಾಗರ ಠಾಣೆ ಪೊಲೀಸರು ರಾಜೇಂದ್ರ ಬಡಾವಣೆಯ ಎಸ್.ದರ್ಶನ್(21) ಎಂಬ ಯುವಕನನ್ನು ಬಂಧಿಸಿದ್ದಾರೆ.

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ₹10 ಸಾವಿರ‌ ದಂಡ, 2 ತಿಂಗಳು ಶಿಕ್ಷೆ ವಿಧಿಸಿ ರಿಲೀಸ್ ಮಾಡಲಾಗಿದೆ ಎಂದು ದರ್ಶನ್, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ ಹಬ್ಬಿಸಿದ್ದ. ಸದ್ಯ ಈ ಬಗ್ಗೆ ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ ಜನರಿಗೆ ಅಪಪ್ರಚಾರ ಮಾಡುತ್ತಿದ್ದಾನೆಂದು ಅರೆಸ್ಟ್ ಮಾಡಲಾಗಿದೆ.

ಘಟನೆ ಹಿನ್ನೆಲೆ: ಕೋಟೆನಾಡು ಚಿತ್ರದುರ್ಗದಲ್ಲಿ ಜುಲೈ 23 ರ ಮಧ್ಯಾಹ್ನ 12:30ರ ಸಮಯ. ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಠಾಣೆ ವ್ಯಾಪ್ತಿಯಲ್ಲಿ ಬಹಿರ್ದೆಸೆಗೆ ತೆರಳಿದ್ದ(ಇಸಾಮುದ್ರ ಗ್ರಾಮದ ಬಳಿ ಜಮೀನು) 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಪ್ರಕರಣದ ಬೆನ್ನು ಬಿದ್ದಿದ್ದರು. ಒಂದುಕಡೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದವು. ಮತ್ತೊಂದು ಕಡೆ ಪ್ರಕರಣ ನಡೆದ ಮೂರ್ನಾಲ್ಕು ದಿನ ಕಳೆದರೂ ಆರೋಪಿ ಬಂಧನ ಆಗಿಲ್ಲ. ನಾಲ್ಕು ದಿನದಲ್ಲಿ ಬಂಧಿಸದಿದ್ದರೆ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಮಠಾಧೀಶರು ಎಚ್ಚರಿಸಿದ್ದರು. ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಶ್ರೀ, ಕುಂಚಿಟಿಗ ಮಠದ ಶಾಂತವೀರ ಶ್ರೀ, ಮಾಚಿದೇವ ಮಠದ ಬಸವ ಮಾಚಿದೇವ ಶ್ರೀ, ಬೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಜಂಟಿ ಸುದ್ದಿಗೋಷ್ಠಿ ನಡೆಸಿ ಗಡುವು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಎಸ್ಪಿ ಜಿ.ರಾಧಿಕಾ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಭರಮಸಾಗರ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡಿದ್ದರು. ಹತ್ತು ತಂಡಗಳನ್ನು ರಚಿಸಿ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಘಟನಾ ಸ್ಥಳದಲ್ಲಿ ಆರೋಪಿ ಚಪ್ಪಲಿ ಪತ್ತೆ ಆಗಿದ್ದವು. ಅಂತೆಯೇ ಘಟನಾ ಸಮಯದಲ್ಲಿ ಎಮ್ಮೆಯೊಂದು ಅದೇ ದಾರಿಯಲ್ಲಿ ಚಲಿಸಿದ್ದರ ಸುಳಿವು ಸಿಕ್ಕಿತ್ತು. ಆದ್ರೆ, ಆರೋಪಿ ಮೊಬೈಲ್ ಬಳಸದ ಕಾರಣ ಸಾಕ್ಷಾಧಾರ ಕಲೆ ಹಾಕುವುದು ಕಷ್ಟ ಸಾಧ್ಯವಾಗಿತ್ತು. ಕೊನೆಗೂ ಪಕ್ಕಾ ಸಾಕ್ಷಾಧಾರಗಳು ಸಿಕ್ಕಿದ್ದು ಆರೋಪಿ ನಾಗರಾಜ(24)ನನ್ನು ಬಂಧಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಮೃತ ಬಾಲಕಿಯ ಪಕ್ಕದ ಮನೆಯಲ್ಲೇ ವಾಸವಾಗಿರುವ ಆರೋಪಿ ನಾಗರಾಜ್ ಸುಮಾರು ದಿನಗಳಿಂದ ಮೃತ ಬಾಲಕಿಯ ಬೆನ್ನು ಬಿದ್ದಿದ್ದನು. ಬಹಿರ್ದೆಸೆಗೆ ಹೋದಾಗ ಒಂಟಿಯಾಗಿ ಸಿಕ್ಕವಳ ಮೇಲೆ ಅತ್ಯಾಚಾರ ಎಸಗಿ ಬಳಿಕ‌ ತನ್ನ ಹೆಸರು ಬಾಯಿಬಿಟ್ಟರೇನು ಗತಿ ಎಂದು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂಬುದು ಬಯಲಾಗಿತ್ತು.

ಇದನ್ನೂ ಓದಿ: 2 ಸಾವಿರ ರೂಪಾಯಿ ಸಾಲ ಮರು ಪಾವತಿಸಿಲ್ಲ ಎಂದು ಹಾಡಹಗಲೇ ವೃದ್ಧನ ಕತ್ತು ಸೀಳಿ ಬರ್ಬರ ಹತ್ಯೆ

(Youth arrested for spreading fake news on chitradurga rape and murder case)

Follow us on

Related Stories

Most Read Stories

Click on your DTH Provider to Add TV9 Kannada