ಮೊಮ್ಮಕ್ಕಳಿಗಾಗಿ ವಡಾ ಪಾವ್ ತರಲು ಹೋದಾಗ ಬೈಕ್ನಲ್ಲಿದ್ದ 4.95 ಲಕ್ಷ ರೂ. ಮೌಲ್ಯದ ಚಿನ್ನದ ಬ್ಯಾಗ್ ಎಗರಿಸಿದ ಕಳ್ಳ
ವೃದ್ಧ ದಂಪತಿಗಳು ಬ್ಯಾಂಕ್‌ನಿಂದ ಮನೆಗೆ ಹೋಗುತ್ತಿದ್ದಾಗ ಮೊಮ್ಮಕ್ಕಳಿಗಾಗಿ ಶೆವಲೆವಾಡಿಯ ಅಂಗಡಿಯಿಂದ ವಡಾ ಪಾವ್ ತೆಗೆದುಕೊಂಡು ಹೋಗಲು ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಕಳ್ಳನೊಬ್ಬ ಬಂದ ಬೈಕ್ನಲ್ಲಿದ್ದ ₹4.95 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾನೆ. ಈ ಬಗ್ಗೆ ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ
ಪುಣೆ, ಆ.31: ಪುಣೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವೃದ್ಧ ದಂಪತಿಗಳು ಬ್ಯಾಂಕ್‌ನಿಂದ ಮನೆಗೆ ಹೋಗುತ್ತಿದ್ದಾಗ ಮೊಮ್ಮಕ್ಕಳಿಗಾಗಿ ಶೆವಲೆವಾಡಿಯ ಅಂಗಡಿಯಿಂದ ವಡಾ ಪಾವ್ ತೆಗೆದುಕೊಂಡು ಹೋಗಲು ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಕಳ್ಳನೊಬ್ಬ ಬಂದ ಬೈಕ್ನಲ್ಲಿದ್ದ ₹4.95 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾನೆ. ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಇದೀಗ ಈ ಬಗ್ಗೆ ಸಿಸಿಟಿವಿಯಲ್ಲಿ ವಿಡಿಯೋವೊಂದು ಸೆರೆಯಾಗಿದೆ.
ಇನ್ನು ಮಾಹಿತಿಗಳ ಪ್ರಕಾರ, ದಷ್ಟ್ರಥ್ ಬಾಬೌಲಾಲ್ ಧಾಮ್ನೆ ಮತ್ತು ಅವರ ಪತ್ನಿ ಜಯಶ್ರೀ ಅವರು ಉರುಳಿ ಕಾಂಚನ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಬ್ಯಾಂಕ್ನಲ್ಲಿ ಚಿನ್ನವನ್ನು ಅಡವಿಟ್ಟು ₹ 8 ಸಾಲ ಪಡೆದಿದ್ದರು. ಅಡವಿಟ್ಟ ಚಿನ್ನವನ್ನು ಬಿಡಿಸಲು ಬ್ಯಾಂಕ್‌ಗೆ ದ್ವಿಚಕ್ರ ವಾಹನದಲ್ಲಿ ತೆರಳಿದ್ದಾರೆ. ಬ್ಯಾಂಕ್ನ ಕೆಲಸ ಮುಗಿಸಿ ಬರಬೇಕಾದರೆ ಮಧ್ಯಾಹ್ನ 3:45ಕ್ಕೆ ಪುಣೆ-ಸೋಲಾಪುರ ರಸ್ತೆಯ ಶೆವಲೆವಾಡಿಯ ವಡಾ ಪಾವ್ ಅಂಗಡಿಯಲ್ಲಿ ನಿಲ್ಲಿಸಿದರು. ದಷ್ಟ್ರಥ್ ಬಾಬೌಲಾಲ್ ಧಾಮ್ನೆ ಅವರು ವಡಾ ಪಾವ್ ತೆಗೆದುಕೊಳ್ಳಲು ಹೋದಾಗ ಜಯಶ್ರೀ ವಾಹನದ ಬಳಿಯೇ ನಿಂತಿದ್ದರು.
ಇದನ್ನೂ ಓದಿ: ಐಷಾರಾಮಿ ಕಾರಿಗೆ ಡಿಕ್ಕಿ ಹೊಡೆದ ಕ್ಯಾಬ್ ಡ್ರೈವರ್ನನ್ನು ಎತ್ತಿ ನೆಲಕ್ಕೆ ಎಸೆದ ಮಾಲೀಕ
ವಿಡಿಯೋ ಇಲ್ಲಿದೆ ನೋಡಿ:
#WATCH | #Pune: Thief Steals ₹4.95 Lakh Worth Of Gold Jewellery As Elderly Couple Stops For Vada Pav; Incident Caught On CCTV
Read: https://t.co/ja1k2BSKLH#PuneNews #Maharashtra pic.twitter.com/k0zvVBQyid
— Free Press Journal (@fpjindia) August 30, 2024
ಆಭರಣಗಳು, ಬ್ಯಾಂಕ್ ದಾಖಲೆಗಳು ಮತ್ತು ಮೊಬೈಲ್ ಫೋನ್ ಒಳಗೊಂಡ ಬಟ್ಟೆ ಚೀಲವನ್ನು ಬೈಕ್ನ ಹ್ಯಾಂಡಲ್ ಬಳಿ ಇಟ್ಟಿದ್ದರು. ಜಯಶ್ರೀ ಅವರ ಗಮನ ಬೇರೆರ ಕಡೆ ಹೋಗುತ್ತಿದ್ದಂತೆ, ಕಳ್ಳ ವಾಹನದ ಬಳಿ ಬಂದು ಬ್ಯಾಗ್ ಹಿಡಿದುಕೊಂಡು ಓಡಿ ಹೋಗಿದ್ದಾನೆ. ಜಯಶ್ರೀ ಅವರು ಬೊಬ್ಬೆ ಹೊಡೆಯುತ್ತ ಕಳ್ಳನ ಹಿಂದೆ ಓಡಿದ್ದಾರೆ. ಆ ಬ್ಯಾಗ್ನಲ್ಲಿ ಚಿನ್ನದ ಬಳೆಗಳು, ಚಿನ್ನದ ಉಂಗುರ, ಮಂಗಳಸೂತ್ರ ಇತ್ಯಾದಿಗಳು ಇತ್ತು ಎಂದು ಹೇಳಲಾಗಿದೆ. ಇನ್ನು ಹಡಪ್ಸರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 173 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ