ಲಖಿಂಪುರ ಖೇರಿ ಹಿಂಸಾಚಾರ: ಮತ್ತೆ 4 ಮಂದಿ ಬಂಧನ; ಅದರಲ್ಲೊಬ್ಬ ಬಿಜೆಪಿ ಕಾರ್ಯಕರ್ತ

ಲಖಿಂಪುರ ಖೇರಿ ಪೊಲೀಸ್​ ಕ್ರೈಂಬ್ರ್ಯಾಂಚ್​ ಇದೀಗ ನಾಲ್ವರನ್ನು ಬಂಧಿಸಿದೆ. ಇದೀಗ ಬಂಧಿತರಾಗಿರುವ ನಾಲ್ವರನ್ನು ಎಸ್​ಐಟಿ ಅಧಿಕಾರಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಲಖಿಂಪುರ ಖೇರಿ ಹಿಂಸಾಚಾರ: ಮತ್ತೆ 4 ಮಂದಿ ಬಂಧನ; ಅದರಲ್ಲೊಬ್ಬ ಬಿಜೆಪಿ ಕಾರ್ಯಕರ್ತ
ಲಖಿಂಪುರ ಖೇರಿ ಹಿಂಸಾಚಾರ ಚಿತ್ರಣ
Follow us
TV9 Web
| Updated By: Lakshmi Hegde

Updated on:Oct 19, 2021 | 10:04 AM

ದೆಹಲಿ: ಲಖಿಂಪುರ ಖೇರಿ (Lakhimpur Kheri)ಯಲ್ಲಿ ಅಕ್ಟೋಬರ್​ 3ರಂದು ರೈತರ ಮೇಲೆ ಕಾರು ಹರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲ ಆಶೀಶ್​ ಮಿಶ್ರಾ ಆಪ್ತರು ಎಂದು ಹೇಳಲಾಗಿದ್ದು, ಒಬ್ಬ ಬಿಜೆಪಿ ಕಾರ್ಯಕರ್ತ ಇದ್ದಾರೆ. ಘಟನೆ ನಡೆದಾಗ ಈ ನಾಲ್ವರೂ ಎಸ್​ಯುವಿ ವಾಹನದ ಮೇಲೆ ಇದ್ದರು . ಅಲ್ಲಿಗೆ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 10ಕ್ಕೇರಿಕೆಯಾಗಿದೆ.  

ಲಖಿಂಪುರ ಖೇರಿ ಪೊಲೀಸ್​ ಕ್ರೈಂಬ್ರ್ಯಾಂಚ್​ ಇದೀಗ ನಾಲ್ವರನ್ನು ಬಂಧಿಸಿದೆ. ಇದೀಗ ಬಂಧಿತರಾಗಿರುವ ನಾಲ್ವರನ್ನು ಎಸ್​ಐಟಿ ಅಧಿಕಾರಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ವಿಚಾರಣೆ ನಡೆಯುತ್ತಿದೆ. ಬಂಧಿತರ ಹೇಳಿಕೆ ಆಧಾರದ ಮೇಲೆ ತನಿಖೆಯೂ ನಡೆಯುತ್ತಿದೆ ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.  ನಿನ್ನೆ ಬಂಧನಕ್ಕೆ ಒಳಗಾದವರನ್ನು ಸುಮಿತ್​ ಜೈಸ್ವಾಲ್​, ಶಿಶಿಪಾಲ್​, ಸತ್ಯ ಪ್ರಕಾಶ್​ ತ್ರಿಪಾಠಿ ಮತ್ತು ನಂದನ್​ ಸಿಂಗ್​ ಬಿಸ್ತ್​ ಎಂದು ಹೇಳಲಾಗಿದೆ. ಇನ್ನು ಪ್ರಕರಣದಲ್ಲಿ ಮುಖ್ಯ ಆರೋಪಿಗಳೆನಿಸಿರುವ ಆಶೀಶ್ ಮಿಶ್ರಾ, ಅಂಕಿತ್​ ದಾಸ್​, ಆಶೀಶ್​ ಪಾಂಡೆ, ಲವಕುಶ್​ ರಾಣಾ, ಶೇಖರ್​ ಭಾರ್ತಿ ಮತ್ತು ಲತೀಫ್​ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ.

ಇವರಲ್ಲಿ ಸುಮಿತ್​ ಜೈಸ್ವಾಲ್​ ತನ್ನನ್ನು ತಾನು ಬಿಜೆಪಿ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದಾರೆ. ಅಯೋಧ್ಯಾಪುರಿ ನಿವಾಸಿಯಾಗಿದ್ದು, ಅಂದು ಘಟನೆ ನಡೆದಾಗ ಬನ್​ಬೀರ್​​ ಪುರದಲ್ಲಿ ನಡೆಯಲಿದ್ದ ಕುಸ್ತಿ ಕಾರ್ಯಕ್ರಮಕ್ಕೆ ಉತ್ತರಪ್ರದೇಶ ಡೆಪ್ಯೂಟಿ ಸಿಎಂ ಕೇಶವ್​ ಮೌರ್ಯ ಅವರನ್ನು ಸ್ವಾಗತಿಸಲು ಹೊರಟಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗೇ, ರೈತರ ಮೇಲೆ ಕಾರು ಹರಿದ ವಿಡಿಯೋ ವೈರಲ್​ ಆದಾಗ, ಅದರಲ್ಲೊಂದು ಎಸ್​ಯುವಿ ವಾಹನದಿಂದ ವ್ಯಕ್ತಿಯೊಬ್ಬ ಓಡಿದ ದೃಶ್ಯ ಕಂಡುಬಂದಿತ್ತು. ಆ ವ್ಯಕ್ತಿ ಇದೇ ಸುಮಿತ್ ಎಂದೂ ಹೇಳಲಾಗಿದೆ.  ಇನ್ನು ಘಟನೆಯನ್ನು ವಿವರಿಸಿದ ಜೈಸ್ವಾಲ್​, ಅಂದು ತುಂಬ ಭೀಕರ ಸನ್ನಿವೇಶ ಇತ್ತು. ಅಲ್ಲಿದ್ದವರ ಕೈಯಲ್ಲಿ (ರೈತರು) ಕೋಲು, ಕಲ್ಲು, ಬಡಿಗೆಗಳು ಇದ್ದವು. ಅವರೆಲ್ಲ ನಮ್ಮ ಮೇಲೆ ದಾಳಿ ಮಾಡಿದರು. ನಿಂದಿಸಿದರು..ಅಷ್ಟೇ ಅಲ್ಲ, ಖಲಿಸ್ತಾನ್ ಜಿಂದಾಬಾದ್ ಎಂದು ಕೂಗುತ್ತಿದ್ದರು..ಎಂದು ಹೇಳಿದ್ದಾಗಿ ಎನ್​ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ‘ಬಿಕ್ಷೆ ಬೇಡಲು ಬಯಸೋದಿಲ್ಲ’ ಪುಣೆ ಬೀದಿಗಳಲ್ಲಿ ಪೆನ್ನು ಮಾರಿ ಜೀವನ ನಡೆಸುತ್ತಿದ್ದಾರೆ ಸ್ವಾವಲಂಬಿ ವೃದ್ಧೆ

Video: ರೈಲಿನಡಿ ಬೀಳುತ್ತಿದ್ದ ಗರ್ಭಿಣಿಯನ್ನು ರಕ್ಷಿಸಿದ ಆರ್​ಪಿಎಫ್​ ಕಾನ್​ಸ್ಟೆಬಲ್​; ಹೊಟ್ಟೆ ನೆಲಕ್ಕೆ ತಾಗದಂತೆ ಬಚಾವ್​ ಮಾಡಿದರು

Published On - 9:56 am, Tue, 19 October 21

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ