ಉತ್ತರಾಖಂಡದ ಹಿಮಪಾತದಲ್ಲಿ ನಾಲ್ವರು ಸಾವು, 5 ಜನರು ನಾಪತ್ತೆ

ಉತ್ತರಾಖಂಡದ ಹಿಮಪಾತದಿಂದ ಪಾರಾಗಲು ಸೇನಾ ಹೆಲಿಕಾಪ್ಟರ್‌ಗಳು ಸಹಾಯ ಮಾಡುತ್ತಿದ್ದರೂ 4 ಮಂದಿ ಸಾವನ್ನಪ್ಪಿದ್ದಾರೆ, 5 ಮಂದಿ ಇನ್ನೂ ಹಿಮಪಾತದಲ್ಲಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಗಳಿಗಾಗಿ 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಗಾಯಗೊಂಡಿದ್ದ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ಇಂದು ದೃಢಪಡಿಸಿದೆ.

ಉತ್ತರಾಖಂಡದ ಹಿಮಪಾತದಲ್ಲಿ ನಾಲ್ವರು ಸಾವು, 5 ಜನರು ನಾಪತ್ತೆ
Uttarakhand Avalanche

Updated on: Mar 01, 2025 | 3:08 PM

ಉತ್ತರಾಖಂಡ (ಮಾರ್ಚ್ 1): ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಭಾರಿ ಹಿಮಪಾತದ ನಂತರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, 4 ಜನರು ಮೃತಪಟ್ಟಿದ್ದಾರೆ, 5 ಜನರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಇಂದು ಬೆಳಿಗ್ಗೆ 14 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದು, ಒಟ್ಟು ರಕ್ಷಿಸಲ್ಪಟ್ಟ ವ್ಯಕ್ತಿಗಳ ಸಂಖ್ಯೆ 48ಕ್ಕೆ ತಲುಪಿದೆ. ಆದರೆ, 5 ಜನರು ಇನ್ನೂ ಕಾಣೆಯಾಗಿದ್ದಾರೆ. ಅವರನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ತೀವ್ರಗೊಳಿಸಲಾಗುತ್ತಿದೆ.

ರಕ್ಷಣಾ ಕಾರ್ಯಗಳಿಗಾಗಿ 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 23 ಗಾಯಾಳುಗಳನ್ನು ಚಿಕಿತ್ಸೆಗಾಗಿ ಜೋಶಿಮಠಕ್ಕೆ ಸ್ಥಳಾಂತರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆ ರಕ್ಷಣಾ ಕಾರ್ಯಾಚರಣೆಗಳನ್ನು ಪರಿಶೀಲಿಸಿದ್ದಾರೆ ಮತ್ತು ನಡೆಯುತ್ತಿರುವ ಪ್ರಯತ್ನಗಳಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಭರವಸೆ ನೀಡಿದ್ದಾರೆ ಎಂದು ಸಿಎಂ ಧಾಮಿ ಮಾಹಿತಿ ನೀಡಿದರು.


ಇದನ್ನೂ ಓದಿ: ಉತ್ತರಾಖಂಡ: ಬದರಿನಾಥದಲ್ಲಿ ಹಿಮಪಾತ, 47 ಮಂದಿ ಸಿಲುಕಿರುವ ಶಂಕೆ

ಉಳಿದ 5 ಸಿಬ್ಬಂದಿಯನ್ನು ರಕ್ಷಿಸುವ ಕಾರ್ಯಾಚರಣೆ ಪ್ರಸ್ತುತ ನಡೆಯುತ್ತಿದೆ. ರಕ್ಷಿಸಲ್ಪಟ್ಟ ಕಾರ್ಮಿಕರನ್ನು ಜೋಶಿಮಠಕ್ಕೆ ಕರೆದೊಯ್ಯಲು ಒಟ್ಟು 6 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. 24 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿರುವ 55 ಕಾರ್ಮಿಕರಲ್ಲಿ ಉಳಿದ ಐವರನ್ನು ರಕ್ಷಿಸಲು ಭಾರತೀಯ ಸೇನೆ ಮತ್ತು ರಕ್ಷಣಾ ಕಾರ್ಯಾಚರಣೆ ತಂಡವು ಸಮಯದ ವಿರುದ್ಧ ಹೋರಾಡುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 2:52 pm, Sat, 1 March 25