ದಟ್ಟ ಮಂಜಿನಿಂದ ಆಗ್ರಾ ಎಕ್ಸ್​ಪ್ರೆಸ್​ವೇಯಲ್ಲಿ ಟ್ರಕ್-ಬಸ್​ ನಡುವೆ ಡಿಕ್ಕಿ; ಅಪಘಾತದಲ್ಲಿ ನಾಲ್ವರು ಸಾವು

| Updated By: ಸುಷ್ಮಾ ಚಕ್ರೆ

Updated on: Jan 09, 2023 | 5:43 PM

ಈ ಅಪಘಾತದಲ್ಲಿ ಮೂವರು ಪುರುಷರು ಸ್ಥಳದಲ್ಲೇ ಸಾವನ್ನಪ್ಪಿದರೆ, ಓರ್ವ ಮಹಿಳೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ.

ದಟ್ಟ ಮಂಜಿನಿಂದ ಆಗ್ರಾ ಎಕ್ಸ್​ಪ್ರೆಸ್​ವೇಯಲ್ಲಿ ಟ್ರಕ್-ಬಸ್​ ನಡುವೆ ಡಿಕ್ಕಿ; ಅಪಘಾತದಲ್ಲಿ ನಾಲ್ವರು ಸಾವು
ಆಗ್ರಾ ಎಕ್ಸ್​ಪ್ರೆಸ್​ವೇಯಲ್ಲಿ ಅಪಘಾತ
Image Credit source: Twitter
Follow us on

ಉನ್ನಾವ್: ಉತ್ತರ ಭಾರತದ ಹಲವೆಡೆ ದಟ್ಟವಾದ ಮಂಜು (Fog) ಆವರಿಸಿದ್ದು, ಇದರಿಂದ ಜನಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿದೆ. ಇಂದು ಬೆಳಗ್ಗೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯ (Agra Expressway) ಉನ್ನಾವೊದಲ್ಲಿ ದಟ್ಟವಾದ ಮಂಜು ಹೊದಿಕೆಯ ಮಧ್ಯೆ ಬಸ್ಸೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಬಸ್ ಗುಜರಾತ್‌ನ (Gujarat) ರಾಜ್‌ಕೋಟ್‌ನಿಂದ ನೇಪಾಳಕ್ಕೆ ಹೋಗುತ್ತಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿ ಶೇಖರ್ ಸಿಂಗ್ ಹೇಳಿದ್ದಾರೆ. ಉನ್ನಾವೋದ ಔರಾಸ್ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ.

ಈ ಅಪಘಾತದಲ್ಲಿ ಮೂವರು ಪುರುಷರು ಸ್ಥಳದಲ್ಲೇ ಸಾವನ್ನಪ್ಪಿದರೆ, ಓರ್ವ ಮಹಿಳೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ. ಮಂಜಿನಿಂದಾಗಿ ರಸ್ತೆ ಕಾಣದೆ 60 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಹಿಂದಿನಿಂದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: Amazon Employees Layoff: ಈ ತಿಂಗಳು ಮತ್ತೆ ಅಮೆಜಾನ್ ಉದ್ಯೋಗಿಗಳ ವಜಾ, ಪ್ರಭಾವಿ ಹುದ್ದೆಯಲ್ಲಿರುವವರಿಗೆ ಸಂಕಷ್ಟ

ಇಂದು ಉತ್ತರ ಪ್ರದೇಶ ಮಾತ್ರವಲ್ಲದೆ ಇತರ ವಿವಿಧ ರಾಜ್ಯಗಳು ಕೂಡ ಮಂಜಿನಿಂದ ಆವೃತವಾಗಿದ್ದು ರೈಲುಗಳು ಮತ್ತು ವಿಮಾನಗಳ ವಿಳಂಬಕ್ಕೆ ಕಾರಣವಾಯಿತು. ಭಾರತೀಯ ರೈಲ್ವೆ ಪ್ರಕಾರ, ಮಂಜಿನ ಕಾರಣ ಇಂದು ಬೆಳಗ್ಗೆ 11 ಗಂಟೆಯವರೆಗೆ ಒಟ್ಟು 267 ರೈಲುಗಳನ್ನು ರದ್ದುಗೊಳಿಸಲಾಗಿದೆ. ಪಂಜಾಬ್, ಬಿಹಾರ, ರಾಜಸ್ಥಾನ ಮತ್ತು ಇತರ ಸ್ಥಳಗಳಿಂದ 170 ರೈಲುಗಳಲ್ಲಿ ಸುಮಾರು 170 ರೈಲುಗಳು ತಡವಾಗಿ ಸಂಚರಿಸಿವೆ. ದೆಹಲಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸುಮಾರು 180 ವಿಮಾನಗಳು ವಿಳಂಬವಾಗಿವೆ.

ಇದನ್ನೂ ಓದಿ: Delhi Cold Wave: ಚಳಿಗೆ ನಡುಗುತ್ತಿರುವ ದೆಹಲಿ: ದಟ್ಟ ಮಂಜಿನಿಂದಾಗಿ 20 ವಿಮಾನಗಳು, 42 ರೈಲುಗಳ ಸಂಚಾರದಲ್ಲಿ ವಿಳಂಬ

ಹವಾಮಾನ ಇಲಾಖೆ (IMD) ಪ್ರಕಾರ, ಪಂಜಾಬ್‌ನ ಬಟಿಂಡಾ, ಆಗ್ರಾ, ಬರೇಲಿ ಮತ್ತು ಉತ್ತರ ಪ್ರದೇಶದ ಲಕ್ನೋದಲ್ಲಿ ಬೆಳಿಗ್ಗೆ 5.30ಕ್ಕೆ ಸಂಪೂರ್ಣ ಮಂಜು ಆವರಿಸಿಕೊಂಡಿತ್ತು. ಅದೇ ಸಮಯದಲ್ಲಿ, ಹರಿಯಾಣ, ಚಂಡೀಗಢ ಮತ್ತು ದೆಹಲಿಯ ಹಲವು ಪ್ರದೇಶಗಳಲ್ಲಿ ಮಂಜಿನಿಂದ ರಸ್ತೆಗಳೇ ಕಾಣಿಸುತ್ತಿರಲಿಲ್ಲ. ದೆಹಲಿಯ ಸಫ್ದರ್‌ಜಂಗ್ ಮತ್ತು ಪಾಲಂನಲ್ಲಿ 25 ಮೀಟರ್ ಗೋಚರತೆ ದಾಖಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ