ನವದೆಹಲಿ: ಭಾರತದಲ್ಲಿ ಎಲ್ಲರೂ ಕೊರೋನಾದಿಂದ ಮುಕ್ತರಾಗಬೇಕೆಂದು ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೋವಿಡ್ ಲಸಿಕೆ (Free Covid Vaccine) ಅಭಿಯಾನವನ್ನು ನಡೆಸುತ್ತಿದೆ. ಆದರೂ ದೇಶದ 40 ಕೋಟಿ ಜನರು ಇನ್ನೂ ಕೊರೋನಾ ಸೋಂಕು ತಗುಲುವ ಅಪಾಯದಿಂದ ಪಾರಾಗಿಲ್ಲ ಎಂಬ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್ (ICMR) ನಡೆಸಿದ 4ನೇ ಸೆರೋ ಸಮೀಕ್ಷೆಯಲ್ಲಿ ಈ ಅಂಕಿ-ಅಂಶಗಳು ಬಯಲಾಗಿದೆ.
ಈ ಅಧ್ಯಯನದ ಪ್ರಕಾರ, 6 ವರ್ಷ ಮೇಲ್ಪಟ್ಟ ಮಕ್ಕಳನ್ನೂ ಒಳಗೊಂಡಂತೆ ಭಾರತದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಇನ್ನೂ ಕೋವಿಡ್ ಸೋಂಕು ತಗುಲುವ ಅಪಾಯದಲ್ಲಿದ್ದಾರೆ. ಭಾರತದ ಜನಸಂಖ್ಯೆಯ ಶೇ. 67.6ರಷ್ಟು ಜನರಲ್ಲಿ ಪ್ರತಿಕಾಯ ಪ್ರಮಾಣ ಹೆಚ್ಚಾಗಿದೆ. ದೇಶದ ಒಟ್ಟು 40 ಕೋಟಿ ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕೋವಿಡ್ ತಗುಲುವ ಅಪಾಯ ಹೆಚ್ಚಾಗಿದೆ ಎಂದು ಐಸಿಎಂಆರ್ ಪ್ರಧಾನಿ ನಿರ್ದೇಶಕ ಡಾ. ಬಲರಾಮ್ ಭಾರ್ಗವ ಹೇಳಿದ್ದಾರೆ.
We studied 7252 healthcare workers & 10% had not taken the vaccine, the overall seroprevalence in them was 85.2%. In conclusion, 2/3rd of general population i.e above the age of 6 yrs had SARS-CoV-2 infection: ICMR DG Dr Balram Bhargava pic.twitter.com/WLPkDnxU0j
— ANI (@ANI) July 20, 2021
ಇನ್ನೂ ಕೋವಿಡ್ ಲಸಿಕೆ ಪಡೆಯದವರಲ್ಲಿ ಸೆರೋಪ್ರಿವಿಲೆನ್ಸ್ ಪ್ರಮಾಣ ಶೇ. 62.3ರಷ್ಟಿದೆ. ಈಗಾಗಲೇ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದವರಲ್ಲಿ ರೋಗನಿರೋಧಕ ಪ್ರಮಾಣ ಶೇ.81ರಷ್ಟಿದೆ. ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದವರಲ್ಲಿ ರೋಗನಿರೋಧಕ ಶಕ್ತಿಯ ಪ್ರಮಾಣ ಶೇ. 89.8ರಷ್ಟಿದೆ. ಈ ಅಧ್ಯಯನಕ್ಕಾಗಿ 7,252 ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗಿತ್ತು. ಈ ಆರೋಗ್ಯ ಕಾರ್ಯಕರ್ತರಲ್ಲಿ ಶೇ. 10ರಷ್ಟು ಜನರು ಕೋವಿಡ್ ಲಸಿಕೆ ಹಾಕಿಸಿಕೊಂಡಿರಲಿಲ್ಲ. ಅವರಲ್ಲಿ ಸೆರೋಪ್ರಿವಿಲೆನ್ಸ್ ಪ್ರಮಾಣ ಶೇ. 85.2ರಷ್ಟಿತ್ತು.
ದೇಶದಲ್ಲಿ ಶಾಲಾ- ಕಾಲೇಜುಗಳನ್ನು ಆರಂಭಿಸುತ್ತಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಡಾ. ಭಾರ್ಗವ, ವಯಸ್ಕರಿಗಿಂತ ಮಕ್ಕಳಲ್ಲಿ ವೈರಲ್ ಇನ್ಫೆಕ್ಷನ್ ಬಹಳ ಬೇಗ ಗುಣವಾಗುತ್ತವೆ. ಅವರ ದೇಹ ಎಲ್ಲ ರೀತಿಯ ವೈರಸ್ಗಳನ್ನೂ ನಿಯಂತ್ರಿಸಬಲ್ಲ ಗುಣವನ್ನು ಹೊಂದಿರುತ್ತದೆ. ಹೀಗಾಗಿಯೇ, ಹಲವು ದೇಶಗಳು ಕೊರೋನಾ ಕೇಸುಗಳು ಅತಿರೇಕಕ್ಕೆ ಹೋದಾಗಲೂ ಪ್ರಾಥಮಿಕ ಶಾಲೆಗಳನ್ನು ಬಂದ್ ಮಾಡಿರಲಿಲ್ಲ. ಹೀಗಾಗಿ, ಭಾರತದಲ್ಲೂ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ತೆರೆಯಲು ಯಾವುದೇ ಸಮಸ್ಯೆಯಿಲ್ಲ. ಆದರೆ, ಆ ಶಾಲೆಗಳ ಶಿಕ್ಷಕರು, ವಾಹನಗಳ ಚಾಲಕರು, ಸ್ವಚ್ಛತಾ ಸಿಬ್ಬಂದಿ ಕೊರೋನಾ ಲಸಿಕೆ ಪಡೆದುಕೊಳ್ಳಬೇಕಾದುದು ಕಡ್ಡಾಯವಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಕೊರೋನಾವೈರಸ್ನ ಹೊಸ ಡೆಲ್ಟಾ ಪ್ಲಸ್ ರೂಪಾಂತರಿ ಮೂರನೇ ಅಲೆಗೆ ನಾಂದಿ ಹಾಡಬಹುದು ಎನ್ನುತ್ತಾರೆ ತಜ್ಞರು
(40 crore Indians still vulnerable to Covid-19 Shocking Data Revealed in ICMR 4th Sero Survey)
Published On - 6:43 pm, Tue, 20 July 21