ಉತ್ತರ ಪ್ರದೇಶ: ಆಟವಾಡುತ್ತಿದ್ದ 4 ವರ್ಷದ ಮಗು 150 ಅಡಿ ಆಳದ ಬೋರ್ವೆಲ್ಗೆ ಬಿದ್ದಿರುವ ಘಟನೆಯೊಂದು ಆಗ್ರಾದ ಧರಿಯೈ ಗ್ರಾಮದಲ್ಲಿ ಸೋಮವಾರ ನಡೆದಿದೆ. ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿದ್ದಾರೆ ಎಂದು ಪೊಲೀಸ್ ಸಿಬ್ಬಂದಿಯೋರ್ವರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಸರಿಸುಮಾರು 8:30 ಸಮಯದಲ್ಲಿ ಆಗ್ರಾದ ನಿಬೊಹಾರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಫತೆಹಾಬಾದ್ನಲ್ಲಿ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿದೆ. ಮಗು ಪ್ರತಿಕ್ರಿಯೆ ನೀಡುತ್ತಿದೆ ಹಾಗೂ ಮಗುವಿನ ಚಲನ-ವಲನಗಳು ಗಮನಕ್ಕೆ ಬರುತ್ತಿದೆ ಎಂದು ಅಧಿಕಾರಿ ಸೂರಜ್ ಪ್ರಸಾದ್ ಪಿಟಿಐಗೆ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಹಾಗೂ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಮಗುವಿನ ತಂದೆ ನಿರ್ಮಿಸಿದ್ದ ಬೋರ್ವೆಲ್ಗೆ ಮಗು ಬಿದ್ದಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
Agra: A 4-year-old child fell into a borewell in Dhariyai village of Fatehabad today. Police personnel are present at the spot, rescue operation is underway, details awaited. pic.twitter.com/de405ATXwv
— ANI UP (@ANINewsUP) June 14, 2021
ಘಟನೆ ನಡೆದ ಬಳಿಕ ತಡಮಾಡದೇ ಹಗ್ಗವನ್ನು ಬೋರ್ವೆಲ್ಗೆ ಇಳಿಬಿಟ್ಟಿದ್ದೇವೆ. ಮಗು ನಮ್ಮ ಮಾತನ್ನು ಕೇಳಿಸಿಕೊಂಡು ಪ್ರತಿಕ್ರಿಯೆ ನೀಡುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ಬೋರ್‌ವೆಲ್ ಪೈಪ್ ಸಾಗಿಸ್ತಿದ್ದ ಲಾರಿ ಪಲ್ಟಿ, ಮೂವರು ಸ್ಥಳದಲ್ಲೇ ಸಾವು
ಬೋರ್‌ವೆಲ್ ಕೊರೆಯುವಾಗ ಕುಸಿದ ಭೂಮಿ, ಮಣ್ಣಿನಲ್ಲಿ ಸಿಲುಕಿದ್ದವನ ರಕ್ಷಣೆ
Published On - 1:59 pm, Mon, 14 June 21