ಭದ್ರಾದ್ರಿ ರಾಮ ಮಂದಿರದಲ್ಲಿ ಬೆಳ್ಳಿ ಇಟ್ಟಿಗೆ ನಾಪತ್ತೆ!
Silver Brick Missing: ಈಗ ದೇಶದಲ್ಲಿ ಕೆಜಿ ಬೆಳ್ಳಿಯ ಬೆಲೆ ಸುಮಾರು 75 ಸಾವಿರ ರೂ. ಮತ್ತು ಈಗ ರಾಮುಲೋರಿ ದೇವಸ್ಥಾನದಲ್ಲಿ 6 ಕಿಲೋ ಬೆಳ್ಳಿ ಅಂದರೆ ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಮಾಯವಾಗಿದೆ. ಸದ್ಯ ದೇವಸ್ಥಾನದಲ್ಲಿ ಲೆಕ್ಕ ಪರಿಶೋಧನೆ ನಡೆಯುತ್ತಿದ್ದು, 6 ಕಿಲೋ ಬೆಳ್ಳಿ ನಷ್ಟವಾದರೆ ಸಂಬಂಧಪಟ್ಟ ಸಿಬ್ಬಂದಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಇ ಒ ರಮಾದೇವಿ ಎಚ್ಚರಿಸಿದ್ದಾರೆ.
ಭದ್ರಾಚಲಂ ರಾಮ ಮಂದಿರದಲ್ಲಿ ಬೆಳ್ಳಿಯ ಇಟ್ಟಿಗೆ ಮಾಯವಾಗಿದೆ. ಕೇವಲ ಇಟ್ಟಿಗೆ ಮಾತ್ರವೇ ಕಾಣೆಯಾಗಿದೆ… ಅಥವಾ ಇನ್ನೂ ಏನಾದರೂ ಕಳುವಾಗಿದೆಯಾ ಎಂಬುದು ತನಿಖಾ ಲೆಕ್ಕಾಚಾರಗಳ ಬಳಿಕ ತಿಳಿದುಬರಬೇಕಿದೆ. ಭದ್ರಾಚಲಂ ಸೀತಾರಾಮ ಚಂದ್ರ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ (Ramulori ) ಆಭರಣಗಳ ಕುರಿತು ನಡೆಸಿದ ಸಾಮಾನ್ಯ ತಪಾಸಣೆ ವೇಳೆ ಬೆಳ್ಳಿ ಇಟ್ಟಿಗೆ ನಾಮತ್ತೆಯಾಗಿರುವುದು (Silver Brick Missing) ಬೆಳಕಿಗೆ ಬಂದಿದೆ. ಆರು ಕೆ.ಜಿ ತೂಕದ ಬೆಳ್ಳಿಯ ಇಟ್ಟಿಗೆ ದಾಖಲೆಗಳಲ್ಲಿ ಉಲ್ಲೇಖವಾಗಿದೆಯಾದರೂ ವಾಸ್ತವದಲ್ಲಿ ಮಿಸ್ ಆಗಿದೆ. ಬೆಳ್ಳಿ ಇಟ್ಟಿಗೆ ಕಾಣೆಯಾಗಿರುವುದರ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು, ವಸೂಲಿ ಮಾಡಲಾಗುವುದು. ಈ ವಿಷಯದಲ್ಲಿ ಯಾರನ್ನೂ ಬಿಡಲಾಗುವುದಿಲ್ಲ ಎಂದು ದೇವಸ್ಥಾನದ ನಿರ್ವಹಣಾಧಿಕಾರಿ ರಮಾದೇವಿ ಹೇಳಿದ್ದಾರೆ.
ಆದರೆ ಸದ್ಯದ ವರದಿ ಪ್ರಕಾರ ಶ್ರೀರಾಮಚಂದ್ರನ ಬಳಿ 67.774 ಕಿಲೋ ಚಿನ್ನ ಹಾಗೂ 980.68 ಕಿಲೋ ಬೆಳ್ಳಿ ಇದೆ. 2009 ರ ನಂತರ ಪೂರ್ಣ ಪ್ರಮಾಣದ ತನಿಖೆ ಈಗ ನಡೆಯುತ್ತಿದೆ. ಇದು ಪೂರ್ಣಗೊಂಡ ನಂತರ, ಆಡಿಟ್ ವರದಿಯನ್ನಾಧದರಿಸಿ ಸ್ಪಷ್ಟತೆ ದೊರೆಯಲಿದೆ. ಚಿನ್ನ, ಬೆಳ್ಳಿ, ನಗದು ವ್ಯವಹಾರದಲ್ಲಿ ತಪ್ಪು ಮಾಡಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ದೇವಸ್ಥಾನ ಇಒ ಎಚ್ಚರಿಸಿದ್ದಾರೆ.
ಈಗ ದೇಶದಲ್ಲಿ ಕೆಜಿ ಬೆಳ್ಳಿಯ ಬೆಲೆ ಸುಮಾರು 75 ಸಾವಿರ ರೂ. ಮತ್ತು ಈಗ ರಾಮುಲೋರಿ ದೇವಸ್ಥಾನದಲ್ಲಿ 6 ಕಿಲೋ ಬೆಳ್ಳಿ ಅಂದರೆ ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಮಾಯವಾಗಿದೆ. ಸದ್ಯ ದೇವಸ್ಥಾನದಲ್ಲಿ ಲೆಕ್ಕ ಪರಿಶೋಧನೆ ನಡೆಯುತ್ತಿದ್ದು, 6 ಕಿಲೋ ಬೆಳ್ಳಿ ನಷ್ಟವಾದರೆ ಸಂಬಂಧಪಟ್ಟ ಸಿಬ್ಬಂದಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಇ ಒ ರಮಾದೇವಿ ಎಚ್ಚರಿಸಿದ್ದಾರೆ.




