Andhra Pradesh: ತಿರುಪತಿ ಸಮೀಪ ಭೀಕರ ಅಪಘಾತ; ಶಿಶು ಸೇರಿ 6 ಮಂದಿ ದುರ್ಮರಣ

Tirupathi Accident: ತಿರುಪತಿ ಸಮೀಪ ಭೀಕರ ಅಪಘಾತ ಸಂಭವಿಸಿದ್ದು, ಶಿಶು ಸೇರಿದಂತೆ ಒಟ್ಟು 6 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

Andhra Pradesh: ತಿರುಪತಿ ಸಮೀಪ ಭೀಕರ ಅಪಘಾತ; ಶಿಶು ಸೇರಿ 6 ಮಂದಿ ದುರ್ಮರಣ
ಅಪಘಾತಕ್ಕೀಡಾಗಿರುವ ಕಾರು
Edited By:

Updated on: Dec 05, 2021 | 7:24 PM

ಆಂಧ್ರ ಪ್ರದೇಶ: ತಿರುಪತಿ ಸಮೀಪದ ಇತೆಪಲ್ಲಿ ಗ್ರಾಮದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಿಶು ಸೇರಿದಂತೆ ಒಟ್ಟು ಆರು ಜನರು ದುರ್ಮರಣಕ್ಕೀಡಾಗಿದ್ದಾರೆ. ಚಂದ್ರಗಿರಿ ಪೊಲೀಸರ ಪ್ರಕಾರ ನಾಯ್ಡುಪೇಟ್- ಪುತಲಪಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅತಿವೇಗದಲ್ಲಿ ಚಲಿಸುತ್ತಿತ್ತು. ಆಗ ಡಿವೈಡರ್​ಗೆ ಡಿಕ್ಕಿ ಹೊಡೆದ ಕಾರು ಅಪಘಾತಕ್ಕೀಡಾಗಿದೆ. ಅಲ್ಲದೇ ಕ್ಷಣ ಮಾತ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿ ಒಟ್ಟು 8 ಮಂದಿಯಿದ್ದರು. ಅದರಲ್ಲಿ 5 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ನಂತರ ಚಂದ್ರಗಿರಿ ಪೊಲೀಸರು ಸ್ಥಳಕ್ಕಾಗಮಿಸಿ, ಬದುಕುಳಿದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರಲ್ಲಿ ಓರ್ವರು ತೀವ್ರಗಾಯದಿಂದ ಕೊನೆಯುಸಿರೆಳೆದಿದ್ದಾರೆ. ಪೊಲೀಸರು ಮೃತರು ವಿಜಯನಗರಂ ಜಿಲ್ಲೆಯ ಪೆರಪುರಂ ಗ್ರಾಮದವರು ಎಂದು ತಿಳಿಸಿದ್ದಾರೆ.

ಅಪಘಾತದಲ್ಲಿ ಬಹುತೇಕ ಸುಟ್ಟುಹೋದ ಕಾರನ್ನು ಪೊಲೀಸರು ಬದಿಗೆ ಸರಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಪೊಲೀಸರು ಮೃತರ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ:

ಗೋವಾದಲ್ಲಿ ಎಎಪಿ ಅಧಿಕಾರಕ್ಕೇರಿದರೆ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ತಿಂಗಳಿಗೆ ₹1000 ನೀಡುತ್ತೇವೆ : ಅರವಿಂದ ಕೇಜ್ರಿವಾಲ್

ಸರ್ಕಾರ ಯಾವುದನ್ನೂ ಬಲವಂತವಾಗಿ ಹೇರುವುದಿಲ್ಲ; ಮಕ್ಕಳಿಗೆ ಮೊಟ್ಟೆ ವಿತರಣೆ ಯೋಜನೆ ಬಗ್ಗೆ ಸಚಿವ ಸುಧಾಕರ್ ಸ್ಪಷ್ಟನೆ

Published On - 7:18 pm, Sun, 5 December 21