ಮುಂಬೈ: ಮಹಾರಾಷ್ಟ್ರದ (Maharashtra) ರಾಜ್‌ಗುರುನಗರ ಪ್ರದೇಶದ ಪುಣೆ-ನಾಸಿಕ್ ಹೆದ್ದಾರಿಯಲ್ಲಿ ಇಂದು ವೇಗವಾಗಿ ಬಂದ ಟ್ರ್ಯಾಕ್ಟರ್‌ಗೆ ಸಿಕ್ಕಿ 6 ತಿಂಗಳ ಮಗುವೊಂದು ಸಾವನ್ನಪ್ಪಿರುವ ಆಘಾತಕಾರಿ ಘಟನೆ (Shocking News) ನಡೆದಿದೆ. ಮಗುವನ್ನು ಎತ್ತಿಕೊಂಡು ಬೈಕ್ನಲ್ಲಿ ಹೋಗುತ್ತಿದ್ದ ಗಂಡ- ಹೆಂಡತಿ ಟ್ರ್ಯಾಕ್ಟರ್ ಅನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದಾಗ ಟ್ರಾಕ್ಟರ್ನ ವೇಗದಿಂದ ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದಿದ್ದಾರೆ. ಆಗ ತಾಯಿಯ ಕೈಯಲ್ಲಿದ್ದ 6 ತಿಂಗಳ ಮಗು ರಸ್ತೆಯ ಮೇಲೆ ಬಿದ್ದು ಸಾವನ್ನಪ್ಪಿದೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಲ್ಲಿ (CCTV Footage) ಈ ದೃಶ್ಯ ಸೆರೆಯಾಗಿದೆ.
ಬೈಕ್ ಕೆಳಗೆ ಬಿದ್ದಾಗ ಟ್ರಾಕ್ಟರ್ನ ಹಿಂಬದಿಯ ಚಕ್ರಕ್ಕೆ ಸಿಲುಕಿ ಮಗು ಸ್ಥಳದಲ್ಲೇ ಮೃತಪಟ್ಟಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಬೈಕ್ ಸವಾರನ ನಿಯಂತ್ರಣ ತಪ್ಪಿದ ಬಳಿಕ ಬೈಕ್ನಲ್ಲಿದ್ದ ಗಂಡ- ಹೆಂಡತಿ ಹಾಗೂ ಮಗು ರಸ್ತೆಗೆ ಬಿದ್ದಿದ್ದಾರೆ. ವೇಗವಾಗಿ ಬಂದ ಟ್ರ್ಯಾಕ್ಟರ್‌ನ ಚಕ್ರಕ್ಕೆ ಸಿಲುಕಿ 6 ತಿಂಗಳ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
पुणे जिल्ह्यातील राजगुरुनगर मध्ये सहा महिन्याच्या चिमुकलीचा ट्रॅक्टरच्या चाकाखाली येवून मृत्यू झाला आहे.दुचाकीवर आईच्या कुशीत बसुन निघालेल्या सहा महिन्यांच्या कोवळ्या मुलीचा मृत्युची घटना सीसीटीव्हीमध्ये चित्रित झाली आहे.#CCTV #Viral #Video #ViralVideo #Pune #MTReel pic.twitter.com/YXUCwtUGrF
— Mumbai Tak (@mumbaitak) September 23, 2022
ಇದನ್ನೂ ಓದಿ: Chamarajanagar News: ಪತ್ನಿಯ ವಿರೋಧ ಲೆಕ್ಕಿಸದೇ 25 ದಿನಗಳ ಮಗುವನ್ನು 50 ಸಾವಿರಕ್ಕೆ ಮಾರಿದ ಅಪ್ಪ
ಅಪಘಾತ ಸಂಭವಿಸುವ ಮೊದಲು ಮಗು ಮಹಿಳೆಯ ತೊಡೆಯ ಮೇಲೆ ಕುಳಿತುಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಕ್ಕಪಕ್ಕ ವಾಹನಗಳನ್ನು ಪಾರ್ಕಿಂಗ್ ಮಾಡಿದ್ದರಿಂದ ಮತ್ತು ಇಕ್ಕಟ್ಟಾದ ರಸ್ತೆಯಿಂದಾಗಿ ಬೈಕ್ ಸ್ಕಿಡ್ ಆಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.