Chamarajanagar News: ಪತ್ನಿಯ ವಿರೋಧ ಲೆಕ್ಕಿಸದೇ 25 ದಿನಗಳ ಮಗುವನ್ನು 50 ಸಾವಿರಕ್ಕೆ ಮಾರಿದ ಅಪ್ಪ

ವಿಷಯ ಬಹಿರಂಗಗೊಂಡ ನಂತರ ‘ಪತ್ನಿಯ ಚಿಕಿತ್ಸೆಗೆ ಹಣ ಬೇಕಿತ್ತು. ಸಾಕಷ್ಟು ಸಾಲಗಳು ಇದ್ದವು. ಹೀಗಾಗಿ ಮಗುವನ್ನು ಬೇರೆಯವರಿಗೆ ಕೊಟ್ಟು ಹಣ ಹೊಂದಿಸಲು ಪ್ರಯತ್ನಪಟ್ಟೆ’ ಎಂದು ಮಗುವಿನ ತಂದೆಯು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

Chamarajanagar News: ಪತ್ನಿಯ ವಿರೋಧ ಲೆಕ್ಕಿಸದೇ 25 ದಿನಗಳ ಮಗುವನ್ನು 50 ಸಾವಿರಕ್ಕೆ ಮಾರಿದ ಅಪ್ಪ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 21, 2022 | 11:17 AM

ಚಾಮರಾಜನಗರ: ಮದ್ಯವ್ಯಸನಿ ತಂದೆಯು ತನ್ನ 25 ದಿನಗಳ ಮಗುವನ್ನೇ ₹ 50 ಸಾವಿರಕ್ಕೆ ಮಾರಾಟ ಮಾಡಿರುವ ಆಘಾತಕಾರಿ ಪ್ರಕರಣ ಚಾಮನಗರದ ನ್ಯಾಯಾಲಯ ರಸ್ತೆಯಲ್ಲಿ ನಡೆದಿದೆ. ಬಸವ ಮತ್ತು ನಾಗವೇಣಿ ದಂಪತಿಯ ಒಂದು ತಿಂಗಳು ತುಂಬದ ಕೂಸು ಮಾರಾಟವಾಗಿದೆ. ತಂದೆಯೇ ಹಣ ಪಡೆದು ಮಗುವನ್ನು ಬೇರೆಯವರಿಗೆ ಮಾರಾಟ ಮಾಡಿದ್ದ ಎನ್ನುವುದನ್ನು ತಿಳಿದ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ವಿಷಯ ಬಹಿರಂಗಗೊಂಡ ನಂತರ ‘ಪತ್ನಿಯ ಚಿಕಿತ್ಸೆಗೆ ಹಣ ಬೇಕಿತ್ತು. ಸಾಕಷ್ಟು ಸಾಲಗಳು ಇದ್ದವು. ಹೀಗಾಗಿ ಮಗುವನ್ನು ಬೇರೆಯವರಿಗೆ ಕೊಟ್ಟು ಹಣ ಹೊಂದಿಸಲು ಪ್ರಯತ್ನಪಟ್ಟೆ’ ಎಂದು ಬಸವ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಮಗುವಿನ ಮಾರಾಟದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಸವ ಮತ್ತು ನಾಗವೇಣಿ ದಂಪತಿಯನ್ನು ವಿಚಾರಣೆಗೆ ಒಳಪಡಿಸಿದರು. ನಂತರ ದಂಪತಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು. ಇದೀಗ ಮಗು ಮಾರಾಟದ ಆರೋಪದ ಮೇಲೆ ಬಸವ ವಿರುದ್ಧ ಚಾಮರಾಜನಗರದ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ವ್ಯಕ್ತಿಗೆ ಮಗುವನ್ನು ನೀಡಿರುವುದಾಗಿ ಬಸವ ಹೇಳುತ್ತಿದ್ದಾರೆ. ಮಗುವನ್ನು ಪಡೆದಿರುವ ವ್ಯಕ್ತಿಯನ್ನು ಪತ್ತೆ ಮಾಡಲು ಬೆಂಗಳೂರು ಪೊಲೀಸರ ಸಹಕಾರ ಕೋರಲಾಗಿದೆ.

ಚಾಮರಾಜನಗರದ ಹೊಟೆಲ್​ನಲ್ಲಿ ಕೆಲಸ ಮಾಡುತ್ತಿರುವ ಬಸವ ಅವರಿಗೆ ಈಗಾಗಲೇ 7 ವರ್ಷದ ಗಂಡುಮಗು ಇದೆ. ಅವರ ಪತ್ನಿ ನಾಗವೇಣಿ ಅವರು ಮೈಸೂರಿನಲ್ಲಿ ಆಗಸ್ಟ್‌ 22ರಂದು ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವನ್ನು ಮಾರಬೇಕೆನ್ನುವ ಗಂಡನ ಯೋಚನೆಯನ್ನು ಪತ್ನಿ ವಿರೋಧಿಸಿದ್ದರು. ಹಣಕ್ಕಾಗಿ ಮಗು ಮಾರಲು ಒಪ್ಪದ ಹೆಂಡತಿಯ ಮೇಲೆ ಬಸವ ಹಲ್ಲೆ ಮಾಡಿದ್ದ ಎಂದು ಮೂಲಗಳು ಹೇಳಿವೆ.

ನಾಗವೇಣಿ ಅವರ ತಂಗಿ ಲಿಂಗತ್ವ ಅಲ್ಪಸಂಖ್ಯಾತರಾಗಿದ್ದಾರೆ. ಅವರು ತಮ್ಮ ಬಾವನೇ ಮಗು ಮಾರಾಟ ಮಾಡಿರುವ ವಿಷಯವನ್ನು ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಕೆಲಸ ಮಾಡುವ ಸಮತಾ ಸೊಸೈಟಿಯ ಜಿಲ್ಲಾ ಘಟಕದ ಅಧ್ಯಕ್ಷೆ ದೀಪಾ ಬುದ್ಧೆ ಅವರ ಗಮನಕ್ಕೆ ತಂದಿದ್ದರು. ನಾಗವೇಣಿ ಮಗುವನ್ನು ವಾಪಸ್‌ ಕರೆತನ್ನಿ ಎಂದು ದೀಪಾ ಅವರಿಗೆ ಮನವಿ ಮಾಡಿದ್ದರು. ಮಗುವನ್ನು ವಾಪಸ್ ಕರೆತರಲು ಬಸವ ಒಪ್ಪದ ಕಾರಣ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಗಮನಕ್ಕೆ ತರಲಾಯಿತು ಎಂದು ದೀಪಾ ಹೇಳಿದರು.

‘ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರ ವಿಚಾರಣೆ ನಡೆಸಲಾಗಿದ್ದು, ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ನಾಗವೇಣಿ ಇನ್ನೂ ತಿಂಗಳ ಬಾಣಂತಿ. ಹೀಗಾಗಿ ಸ್ವಾಧಾರ ಕೇಂದ್ರದಲ್ಲಿ ಅವರಿಗೆ ಆಶ್ರಯ ನೀಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಮಗುವನ್ನು ಪಡೆದಿರುವ ಬೆಂಗಳೂರಿನ ವ್ಯಕ್ತಿಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮೀ ಪ್ರತಿಕ್ರಿಯಿಸಿದರು.

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ