ದೆಹಲಿ ಡಿಸೆಂಬರ್ 28: ಜನವರಿ 22ರಂದು ನಡೆಯಲಿರುವ ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ಮುನ್ನ ರಾಮ ಮಂದಿರದ (Ram mandir) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, 600 ಕೆಜಿ ತೂಕದ ಗಂಟೆಯು (600-Kg Metal Bell) ಬೃಹತ್ ಸಂಕೀರ್ಣದಲ್ಲಿ ಸ್ಥಾಪನೆಯಾಗಲಿದೆ. ಲೋಹದಿಂದ ಮಾಡಲಾದ ಗಂಟೆಯ ಮೇಲೆ ‘ಜೈ ಶ್ರೀ ರಾಮ್’ ಎಂಬ ದೊಡ್ಡದಾಗಿ ಕೆತ್ತಲಾಗಿದೆ. ಮರ್ಯಾದಾ ಪುರುಷೋತ್ತಮ ಶ್ರೀ ರಾಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯಲ್ಪಡುವ ವಿಮಾನ ನಿಲ್ದಾಣ ಮತ್ತು ಅಯೋಧ್ಯಾ ಧಾಮ್ ಜಂಕ್ಷನ್ ಎಂದು ಮರುನಾಮಕರಣಗೊಂಡಿರುವ ನವೀಕರಿಸಿದ ರೈಲು ನಿಲ್ದಾಣವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ಶನಿವಾರ ಅಯೋಧ್ಯೆಗೆ ಬರಲಿದ್ದಾರೆ.
ರಾಮ ಮಂದಿರದ ಮೊದಲ ಹಂತದ ನಿರ್ಮಾಣ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಆ ಬಳಿಕ ಅಲಂಕಾರ ಕಾರ್ಯ ಆರಂಭವಾಗಲಿದೆ. ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಸುಮಾರು 8,000 ಗಣ್ಯರನ್ನು ಆಹ್ವಾನಿಸಲಾಗಿದ್ದು, ಪ್ರಧಾನಿ ಮೋದಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ರಾಮಲಲ್ಲಾ ಪ್ರಾಣಪ್ರತಿಷ್ಠೆ ಸಂದರ್ಭದಲ್ಲಿ ಶ್ರೀರಾಮನ ವಿಗ್ರಹವನ್ನು ಗರ್ಭಗುಡಿಯಲ್ಲಿ ಇರಿಸಲಾಗುತ್ತದೆ.
#WATCH | Uttar Pradesh: Visuals of the temple bell weighing 600 kg that is going to be installed at Ayodhya’s Ram temple. pic.twitter.com/SJmB9PWUUt
— ANI (@ANI) December 28, 2023
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾತನಾಡಿ, ಸಂಪೂರ್ಣ ರಚನೆಯ ನಿರ್ಮಾಣಕ್ಕೆ ಒಟ್ಟು 21-22 ಲಕ್ಷ ಘನ ಅಡಿ ಕಲ್ಲು ಬಳಸಲಾಗಿದೆ. “ಕಳೆದ 100-200 ವರ್ಷಗಳಲ್ಲಿ ಉತ್ತರ ಅಥವಾ ದಕ್ಷಿಣ ಭಾರತದಲ್ಲಿ ಇಷ್ಟು ದೊಡ್ಡ ಕಲ್ಲಿನ ರಚನೆಯನ್ನು ನಿರ್ಮಿಸಲಾಗಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ₹11100 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ; ಡಿ.30 ರಂದು ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ
ಎಂಜಿನಿಯರ್‌ಗಳು ರಚಿಸಿದ 56-ಪದರದ ಕೃತಕ ಬಂಡೆಯ ಅಡಿಪಾಯವನ್ನು ರಚನೆಯ ಕೆಳಗೆ ಹಾಕಲಾಗಿದೆ. ರಾಜಸ್ಥಾನದ ಭರತ್‌ಪುರದಿಂದ ಪಡೆದ ಸುಮಾರು 5 ಲಕ್ಷ ಘನ ಅಡಿಗಳಷ್ಟು ಗುಲಾಬಿ ಬಣ್ಣದ ಮರಳುಗಲ್ಲನ್ನು ದೇವಾಲಯದ ರಚನೆಯನ್ನು ನಿರ್ಮಿಸಲು ಬಳಸಲಾಗಿದೆ. ಗರ್ಭಗುಡಿ ದೇವಾಲಯವು ಶುದ್ಧ ಬಿಳಿ ಮಕ್ರಾನ ಅಮೃತಶಿಲೆಯಿಂದ ಮಾಡಲ್ಪಟ್ಟಿದೆ ಮತ್ತು ಸಿದ್ಧವಾಗಿದೆ ಎಂದು ಅವರು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ