Delhi Chalo: 6ನೇ ಸುತ್ತಿನ ಸಭೆ ರದ್ದು, ಸಂಜೆ ಮುಂದಿನ ನಡೆ ಪ್ರಕಟಿಸಲಿರುವ ಪಂಜಾಬ್ ರೈತರು

ರೈತ ಒಕ್ಕೂಟಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಇಂದು ಆಯೋಜನೆಯಾಗಿದ್ದ 6ನೇ ಸುತ್ತಿನ ಸಭೆ ರದ್ದಾಗಿದೆ. ಕೇಂದ್ರ ಸರ್ಕಾರದ ಬಳಿ ಲಿಖಿತ ರೂಪದಲ್ಲಿ ನಿರ್ಧಾರವನ್ನು ಪ್ರಕಟಿಸಲು ಹೇಳಿದ್ದು, ಇಂದು ಸರ್ಕಾರದ ಪತ್ರ ನಮ್ಮನ್ನು ತಲುಪಲಿದೆ. ತದನಂತರ, ಮುಂದಿನ ನಿರ್ಧಾವನ್ನು ಪ್ರಕಟಿಸುವುದಾಗಿ ಆಲ್ ಇಂಡಿಯಾ ಕಿಸಾನ್ ಸಭಾದ ಮುಖಂಡ ಹನ್ನಾನ್ ಮೊಲ್ಲಾಹ್ ತಿಳಿಸಿದ್ದಾರೆ.

Delhi Chalo: 6ನೇ ಸುತ್ತಿನ ಸಭೆ ರದ್ದು, ಸಂಜೆ ಮುಂದಿನ ನಡೆ ಪ್ರಕಟಿಸಲಿರುವ ಪಂಜಾಬ್ ರೈತರು
ದೆಹಲಿಯ ಬೀದಿಗಳಲ್ಲಿ ಪಂಜಾಬ್ ರೈತರ 14ನೇ ದಿನದ ಬೆಳಗು ಆರಂಭವಾಗಿದ್ದು ಹೀಗೆ..
guruganesh bhat

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 09, 2020 | 1:56 PM

ದೆಹಲಿ: ರೈತ ಒಕ್ಕೂಟಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಇಂದು ನಿಗದಿಯಾಗಿದ್ದ 6ನೇ ಸುತ್ತಿನ ಸಭೆ ರದ್ದಾಗಿದೆ. ಕೇಂದ್ರ ಸರ್ಕಾರದ ಬಳಿ ಲಿಖಿತ ರೂಪದಲ್ಲಿ ನಿರ್ಧಾರವನ್ನು ಪ್ರಕಟಿಸಲು ಒತ್ತಾಯಿಸಿದ್ದೇವೆ. ಇಂದು ಸರ್ಕಾರದ ಪತ್ರ ನಮ್ಮನ್ನು ತಲುಪಲಿದೆ. ತದನಂತರ, ಮುಂದಿನ ನಿರ್ಧಾವನ್ನು ಪ್ರಕಟಿಸುವುದಾಗಿ ಆಲ್ ಇಂಡಿಯಾ ಕಿಸಾನ್ ಸಭಾದ ಮುಖಂಡ ಹನ್ನಾನ್ ಮೊಲ್ಲಾಹ್ ತಿಳಿಸಿದ್ದಾರೆ.

ರೈತ ಒಕ್ಕೂಟಗಳು ಆಂತರಿಕ ಸಭೆ ನಡೆಸಲಿವೆ. ಸರ್ಕಾರದ ನಿರ್ಧಾರದ ಆಧಾರದ ಮೇಲೆ ಮುಂದಿನ ನಡೆ ಪ್ರಕಟಿಸುವುದಾಗಿ ಒಕ್ಕೂಟಗಳು ತಿಳಿಸಿವೆ. ಸರ್ಕಾರದ ಪತ್ರ ಪರಿಶೀಲಿಸಿದ ನಂತರ ನಾಳೆ ಕೇಂದ್ರದ ಜೊತೆ ಸಭೆ ನಡೆಸುವ ಸಾಧ್ಯತೆಯಿದೆ ಎಂದು ರೈತ ಒಕ್ಕೂಟಗಳು ತಿಳಿಸಿವೆ.

ಕೇಂದ್ರ ಸಚಿವ ಸಂಪುಟ ಸಭೆ ಪಂಜಾಬ್ ರೈತರಿಗೆ ನೀಡಬೇಕಾಗಿರುವ ಲಿಖಿತ ರೂಪದ ನಿರ್ಧಾರಗಳ ಕುರಿತು ಚರ್ಚಿಸಲು ಕೇಂದ್ರ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿದೆ. ಮಧ್ಯಾಹ್ನದ ನಂತರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರದ ನಿರ್ಧಾರ ಪ್ರಕಟಿಸಲಿದ್ದಾರೆ.

ಇಂದು ಪ್ರತಿಪಕ್ಷ ನಾಯಕರಿಂದ ರಾಷ್ಟ್ರಪತಿ ಭೇಟಿ: ಕೃಷಿ ಕಾಯ್ದೆ ವಿರುದ್ಧ ಅಹವಾಲು ಮಂಡನೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada