ಬೈಕ್‌ನಲ್ಲಿ ತೆರಳುತ್ತಿದ್ದಾಗ ಗಾಳಿಪಟ(Kite)ದ ದಾರ ಕತ್ತು ಸೀಳಿ 7 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಧಾರ್ ನಗರದಲ್ಲಿ ನಡೆದಿದೆ. ಬಾಲಕ ತಂದೆಯೊಂದಿಗೆ ಮೋಟಾರ್ಸೈಕಲ್ನಲ್ಲಿ ಹೋಗುತ್ತಿದ್ದಾಗ ಗಾಳಿಪಟದ ಹರಿತವಾದ ದಾರ ಬಾಲಕನ ಗಂಟಲು ಸೀಳಿದೆ.
ತನಿಖೆ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಹತ್ವಾರಾ ಚೌಕ್‌ನಲ್ಲಿ ವಿನೋದ್ ಚೌಹಾಣ್ ಎಂಬಾತ ತನ್ನ ಏಳು ವರ್ಷದ ಮಗನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಚೌಹಾಣ್ ತಮ್ಮ ಗಾಯಗೊಂಡ ಮಗನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಂದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಲಾಯಿತು, ಅಲ್ಲಿ ವೈದ್ಯರು ಬಾಲಕ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದಾರೆ. ಹರಿತವಾದ ಗಾಳಿಪಟದ ದಾರದಿಂದ ಗಂಟಲು ಸೀಳಿದ ಏಳು ವರ್ಷದ ಬಾಲಕನನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು ಎಂದು ಡಾ ಅಮಿತ್ ಸಿಸೋಡಿಯಾ ತಿಳಿಸಿದ್ದಾರೆ.
ಮತ್ತಷ್ಟು ಓದಿ: Gadag News: ನಾಲ್ಕೈದು ಜನರ ಜೀವಕ್ಕೆ ಕುತ್ತು ತಂದ ನಿಷೇಧಿತ ಗಾಳಿಪಟ ಮಾಂಜಾ ದಾರ
ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗಾಳಿಪಟಗಳನ್ನು ಹಾರಿಸಲು ಮಾಂಜಾ ದಾರವನ್ನು ಬಳಸಲಾಗುತ್ತದೆ. ಚೈನೀಸ್ ದಾರ ಅಥವಾ ಚೂಪಾದ ದಾರ ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್‌ಪಿ) ರವೀಂದ್ರ ವಾಸ್ಕೆಲ್ ಹೇಳಿದ್ದಾರೆ.
ಧಾರ್‌ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ರೋಶನಿ ಪಾಟಿದಾರ್ ಮಾತನಾಡಿ, ಆಡಳಿತವು ಕಳೆದ ಹತ್ತು ದಿನಗಳಲ್ಲಿ ಚೀನಾದ ಮಾಂಜಾ (ಸ್ಟ್ರಿಂಗ್) ವಿರುದ್ಧ ಅಭಿಯಾನವನ್ನು ನಡೆಸಿದೆ ಎಂದು ಹೇಳಿದರು. ಇದೊಂದು ದುಃಖಕರ ಘಟನೆ. ನಾವು ತಂಡಗಳನ್ನು ರಚಿಸಿದ್ದೇವೆ ಮತ್ತು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ