ಮುಂಬೈನ ಫ್ಲಾಟ್ ಒಂದರಲ್ಲಿ ವೃದ್ಧ ದಂಪತಿಯ ಕೈಕಾಲು ಕಟ್ಟಿ, ಬಾಯಿಗೆ ಟೇಪ್ ಅಂಟಿಸಿ ಚಿನ್ನಾಭರಣ ಲೂಟಿ, ವೃದ್ಧೆ ಸ್ಥಳದಲ್ಲೇ ಸಾವು
ಕಳ್ಳರು ಮುಂಬೈನ ಫ್ಲಾಟ್ ಒಂದಕ್ಕೆ ನುಗ್ಗಿ, ಚಿನ್ನಾಭರಣ ಲೂಟಿ ಮಾಡಿ, ಕೊನೆಗೆ ವೃದ್ಧ ದಂಪತಿಯ ಕೈಕಾಲು ಕಟ್ಟಿ ಬಾಯಿಗೆ ಟೇಪ್ ಅಂಟಿಸಿದ ಪರಿಣಾಮ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಕ್ಷಿಣ ಮುಂಬೈನ ಟಾರ್ಡಿಯೊದಲ್ಲಿರುವ ಫ್ಲಾಟ್, ಯೂಸುಫ್ ಮಂಜಿಲ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಂಪತಿ ಬೆಳಗ್ಗೆ 6 ಗಂಟೆಯ ಸುಮಾರಿಗೆ ತಮ್ಮ ಫ್ಲಾಟ್‌ನಿಂದ ಬೆಳಗಿನ ವಾಕಿಂಗ್‌ಗೆ ಕಾಲಿಟ್ಟಾಗ, ಮೂವರು ದರೋಡೆಕೋರರು ಒಳಗೆ ನುಗ್ಗಿದ್ದಾರೆ.

ಬಾಯಿಗೆ ಟೇಪ್ ಹಾಕಿ, ಚಿನ್ನಾಭರಣ ದೋಚಿದ್ದಾರೆ, ಇಬ್ಬರ ಬಾಯಿಗೂ ಟೇಪ್ ಅಂಟಿಸಿ, ಕೈಕಾಲುಗಳನ್ನು ಕಟ್ಟಲಾಗಿತ್ತು, ಚಿನ್ನಾಭರಣ, ವಾಚ್, ನಗದು ಸೇರಿದಂತೆ ಎಲ್ಲವನ್ನೂ ಹೊತ್ತೊಯ್ದಿದ್ದರು. ಆರೋಪಿಗಳು ಸ್ಥಳದಿಂದ ಓಡಿ ಹೋದ ಬಳಿಕ ವೃದ್ಧ ಪತಿ ಹೇಗೋ ಬಾಗಿಲು ಬಳಿ ಹೋಗಿ ಎಮರ್ಜೆನ್ಸಿ ಅಲಾರಂ ಒತ್ತಿದ್ದಾರೆ.
ಹೌಸಿಂಗ್ ಸೊಸೈಟಿಯ ಯಾರೋ ಒಬ್ಬರು ಅವರ ಸಹಾಯಕ್ಕೆ ಧಾವಿಸಿದರು. ಆದರೆ, ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಮತ್ತಷ್ಟು ಓದಿ:ಆನೇಕಲ್: ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆ ಶವ ಪತ್ತೆ
ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್‌ಗಳ ಅಡಿಯಲ್ಲಿ 302 (ಕೊಲೆ), 394 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಮತ್ತು ಇತರವುಗಳನ್ನು ಒಳಗೊಂಡಂತೆ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.