- Kannada News Photo gallery here Is In Pics How Delhi Is Preparing For 77th Independence Day Celebrations
Independence Day 2023: ದಿಲ್ಲಿಯಲ್ಲಿ ಸ್ವಾತಂತ್ರ್ಯೋತ್ಸವದ ತಯಾರಿ ಹೇಗಿದೆ? ಈ ಬಾರಿ ವಿಶೇಷ ಏನು? ಫೋಟೋಗಳಲ್ಲಿ ನೋಡಿ
77ನೇ ಸ್ವಾತಂತ್ರ್ಯದ ಹಬ್ಬದ ಆಚರಣೆಗೆ ಇಡಿ ದೇಶವೇ ಸಿದ್ದತೆ ನಡೆಸುತ್ತಿದೆ. ಅದರಲ್ಲೂ ದೇಶದ ಕೇಂದ್ರ ಬಿಂದು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ(ಆಗಸ್ಟ್ 15) ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ಐತಿಹಾಸಿಕ ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಹಾಗಾದ್ರೆ, ದಿಲ್ಲಿಯಲ್ಲಿ ಸ್ವಾತಂತ್ರ್ಯೋತ್ಸವದ ಸಿದ್ಧತೆಗಳು ಹೇಗೆಲ್ಲ ನಡೆದಿವೆ ಎನ್ನುವುದನ್ನು ಫೋಟೋಗಳಲ್ಲಿ ನೋಡಿ.
Updated on: Aug 14, 2023 | 8:44 AM

77ನೇ ಸ್ವಾತಂತ್ರ್ಯದ ಹಬ್ಬದ ಆಚರಣೆಗೆ ಇಡಿ ದೇಶವೇ ಸಿದ್ದತೆ ನಡೆಸುತ್ತಿದೆ. ಅದರಲ್ಲೂ ದೇಶದ ಕೇಂದ್ರ ಬಿಂದು ರಾಷ್ಟ್ರರಾಜಧಾನಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ

77 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕೆಂಪುಕೋಟೆಯನ್ನು ಸಿಂಗರಿಸಲಾಗುತ್ತಿದೆ. ಈ ವರ್ಷ G-20 ಲೋಗೋವನ್ನು ಹೂವಿನ ಅಲಂಕಾರದ ಮೂಲಕ ಅಲಂಕರಿಸಲಾಗಿದೆ.

ಮೋದಿಯವರು ನಾಳೆ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ಐತಿಹಾಸಿಕ ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವ್ರ ಭಾಷಣ ಕೇಳಲು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗಿದೆ.

ದೇಶದಾದ್ಯಂತ ವಿವಿಧ ವೃತ್ತಿಗಳ ಸುಮಾರು 1,800 ಜನರನ್ನು ಮತ್ತು ಅವರ ಕುಟುಂಬವನ್ನು ವಿಶೇಷ ಅತಿಥಿಗಳಾಗಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಆಹ್ವಾನಿಸಲಾಗಿದೆ. ಇನ್ನು 660 ಕ್ಕೂ ಹೆಚ್ಚು ವಿವಿಧ ಗ್ರಾಮಗಳ 400 ಕ್ಕೂ ಹೆಚ್ಚು ಸರಪಂಚ್‌ಗಳು ಭಾಗಿಯಾಗಲಿದ್ದಾರೆ

ರೈತ ಉತ್ಪಾದಕ ಸಂಸ್ಥೆಗಳ ಯೋಜನೆಯ 250 ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯ 50 ಫಲಾನುಭವಿಗಳು ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಖಾದಿ ಗ್ರಾಮೋದ್ಯಾಗ ಕಾರ್ಮಿಕರು, ಗಡಿ ರಸ್ತೆಗಳ ನಿರ್ಮಾಣ, ಅಮೃತ್ ಸರೋವರ ಮತ್ತು ಹರ್ ಘರ್ ಜಲ ಯೋಜನೆಯ ತಲಾ 50 ಫಲಾನುಭವಿಗಳು ವಿಶೇಷ ಅತಿಥಿಗಳಾಗಿ ಫಾಲ್ಗೊಳ್ಳಲಿದ್ದಾರೆ. 50 ಪ್ರಾಥಮಿಕ ಶಾಲಾ ಶಿಕ್ಷಕರು, ದಾದಿಯರು ಮತ್ತು ಮೀನುಗಾರರು ವಿಶೇಷ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.

ಕೆಂಪುಕೋಟೆಯ ಕಾರ್ಯಕ್ರಮ ವೀಕ್ಷಿಸಲು 17,000 ಜನರಿಗೆ ಇ ಪಾಸ್ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನಂತರ ದೇಶಾದ್ಯಂತ ವಿವಿಧ ಶಾಲೆಗಳ 1,100 ಎನ್‌ಸಿಸಿ ಕೆಡೆಟ್‌ಗಳು ರಾಷ್ಟ್ರಗೀತೆಯನ್ನು ಹಾಡಲಿದ್ದಾರೆ.

ಸ್ವಾತಂತ್ರೋತ್ಸವ ಹಿನ್ನೆಲೆ ದೆಹಲಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೆಂಪುಕೋಟೆಯ ಸುತ್ತ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದ್ದು, ಭದ್ರತೆಗೆ ಕೇಂದ್ರಿಯ ಪಡೆಗಳನ್ನು ನಿಯೋಜಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಲಿರುವುದರಿಂದ ಅವರ ಭದ್ರತಾ ಪಡೆಗಳಿಂದ ರಿಹರ್ಸಲ್ ನಡೆಯಿತು.

ಇನ್ನು ನಾಳಿನ ಸ್ವಾತಂತ್ರ್ಯೋತ್ಸವ ದಿನಾಚರಣೆ ವಿಶೇಷವಾಗಿ ಪ್ರತಿ ವರ್ಷದಂತೆ ಈ ವರ್ಷವು ಸಹ ಸೇನಾ ಹೆಲಿಕಾಫ್ಟರ್ಗಳು ಬಾನಂಗಳದಲ್ಲಿ ರಿಹರ್ಸಲ್ ನಡೆಸಿದವು.

. ಇನ್ನು ದೆಹಲಿಯ ವಿವಿಧ ಕಡೆ ಸ್ವಾತಂತ್ರ್ಯ ಸೆಲ್ಫಿ ಬೂತ್‌ಗಳನ್ನು ನಿರ್ಮಾಣ ಮಾಡಲಾಗಿದೆ.
























