8 ಕೋಟಿಗೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿ; ಮೋದಿ ಹೇಳಿಕೆಗೆ ಕಾಂಗ್ರೆಸ್ ಕಿಡಿ

ಸಾಮೂಹಿಕ ನಿರುದ್ಯೋಗ ಮತ್ತು ಕಡಿಮೆ-ಗುಣಮಟ್ಟದ ಉದ್ಯೋಗದ ಕಾರಣದಿಂದಾಗಿ ಉದ್ಯೋಗ ಲೆಕ್ಕಾಚಾರವು ಅತ್ಯಂತ ಶೋಚನೀಯವಾಗಿದೆ. ಮುಂದಿನ ಮಂಗಳವಾರದ ಬಜೆಟ್ ಭಾಷಣದಲ್ಲಿ ಈ ದ್ವಂದ್ವ ದುರಂತವು ಖಂಡಿತವಾಗಿಯೂ ಕಡೆಗಣಿಸಲ್ಪಡುತ್ತದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

8 ಕೋಟಿಗೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿ; ಮೋದಿ ಹೇಳಿಕೆಗೆ ಕಾಂಗ್ರೆಸ್ ಕಿಡಿ
ಜೈರಾಮ್ ರಮೇಶ್
Follow us
ರಶ್ಮಿ ಕಲ್ಲಕಟ್ಟ
|

Updated on: Jul 15, 2024 | 8:03 PM

ದೆಹಲಿ ಜುಲೈ 15: ಕಳೆದ 3-4 ವರ್ಷಗಳಲ್ಲಿ ಎಂಟು ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ (Narendra  Modi) ಹೇಳಿಕೆಗೆ ಕಾಂಗ್ರೆಸ್ (Congress) ಸೋಮವಾರ ವಾಗ್ದಾಳಿ ನಡೆಸಿದೆ. ಉದ್ಯೋಗ ಸೃಷ್ಟಿಯ ಹಕ್ಕು ಸಾಧಿಸಲು ಮೋದಿ ಸರ್ಕಾರ ಕೆಲವು ‘ಕಲಾತ್ಮಕ ರೀತಿಯಲ್ಲಿ ಅಂಕಿಅಂಶಗಳ ಕಣ್ಕಟ್ಟು’ ಮಾಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jai Ram Ramesh) ಆರೋಪಿಸಿದ್ದಾರೆ. ಭಾರತವು ತೀವ್ರವಾದ ಮೋದಿ ನಿರ್ಮಿತ ನಿರುದ್ಯೋಗ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ, ಪ್ರತಿಯೊಂದು ಉದ್ಯೋಗಕ್ಕೂ ಲಕ್ಷಗಟ್ಟಲೆ ಯುವಕರು ಅರ್ಜಿ ಸಲ್ಲಿಸಿದಾಗ, ಸ್ವಯಂ ಅಭಿಷಿಕ್ತ ನಾನ್-ಬಯೋಲಾಜಿಕಲ್ ಪ್ರಧಾನಮಂತ್ರಿಯು ತನಗೆ ತಿಳಿದಿರುವ ಏಕೈಕ ರೀತಿಯಲ್ಲಿ ತನ್ನ ಪೇಟೆಂಟ್ ಪಡೆದ 3D. ನಿರಾಕರಿಸುವ, ಬೇರೆಡೆ ಗಮನ ಸೆಳೆಯುಲವ ಮತ್ತು ವಿರೂಪಗೊಳಿಸುವ ಮಾದರಿ ಅನ್ವಯಿಸುವ ಮೂಲಕ ಪ್ರತಿಕ್ರಿಯಿಸುವಲ್ಲಿ ನಿರತರಾಗಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾಮೂಹಿಕ ನಿರುದ್ಯೋಗ ಮತ್ತು ಕಡಿಮೆ-ಗುಣಮಟ್ಟದ ಉದ್ಯೋಗದ ಕಾರಣದಿಂದಾಗಿ ಉದ್ಯೋಗ ಲೆಕ್ಕಾಚಾರವು ಅತ್ಯಂತ ಶೋಚನೀಯವಾಗಿದೆ. ಮುಂದಿನ ಮಂಗಳವಾರದ ಬಜೆಟ್ ಭಾಷಣದಲ್ಲಿ ಈ ದ್ವಂದ್ವ ದುರಂತವು ಖಂಡಿತವಾಗಿಯೂ ಕಡೆಗಣಿಸಲ್ಪಡುತ್ತದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಜೈರಾಮ್ ರಮೇಶ್ ಹೇಳಿಕೆ

ಮುಂಬೈನಲ್ಲಿ ನಡೆದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು, “ಇತ್ತೀಚೆಗೆ, ಉದ್ಯೋಗಗಳಿಗೆ ಸಂಬಂಧಿಸಿದಂತೆ ಆರ್ ಬಿಐ ವರದಿಯೊಂದನ್ನು ಬಿಡುಗಡೆ ಮಾಡಿದೆ. ವರದಿಯ ಪ್ರಕಾರ, ಕಳೆದ 3-4 ವರ್ಷಗಳಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದು ಈ ಅಂಕಿಅಂಶಗಳು ಸುಳ್ಳು ನಿರೂಪಣೆಗಳನ್ನು ಹರಡುವವರ ಬಾಯ್ಮುಚ್ಚಿಸಿದೆ ಎಂದಿದ್ದಾರೆ.

ಮೋದಿಯವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಜೈರಾಮ್ ರಮೇಶ್, “ಆರ್ಥಿಕತೆಯು 80 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ . ನಿಜವೆಂದರೆ ಉದ್ಯೋಗದ ಅಂಕಿಅಂಶಗಳಲ್ಲಿನ ಆಪಾದಿತ ಬೆಳವಣಿಗೆಯು ಕಠೋರ ವಾಸ್ತವಗಳಿಗೆ ಸರಿಹೊಂದುವುದಿಲ್ಲ. ಮೋದಿ ಯುಗದ ಆರ್ಥಿಕತೆಯಲ್ಲಿ , ಖಾಸಗಿ ಹೂಡಿಕೆ ದುರ್ಬಲವಾಗಿದೆ ಮತ್ತು ಬಳಕೆಯ ಬೆಳವಣಿಗೆ ಮಂದಗತಿಯಲ್ಲಿದೆ.

“ಉದ್ಯೋಗದ ಗುಣಮಟ್ಟ ಮತ್ತು ಸಂದರ್ಭಗಳಿಗೆ ಗಮನ ಕೊಡದೆ, ಉದ್ಯೋಗದ ಅತ್ಯಂತ ವಿಸ್ತಾರವಾದ ವ್ಯಾಖ್ಯಾನವನ್ನು ಅಳವಡಿಸಿಕೊಳ್ಳುವ ಮೂಲಕ ಉದ್ಯೋಗ ಸೃಷ್ಟಿಗೆ ಹಕ್ಕು ಸಾಧಿಸಲು ಸರ್ಕಾರವು ಕೆಲವು ಕಲಾತ್ಮಕ ಅಂಕಿಅಂಶಗಳ ಕಣ್ಕಟ್ಟು ಮಾಡಿದೆ. ‘ಉದ್ಯೋಗ ಬೆಳವಣಿಗೆ’ಯ ಬಹುಪಾಲು ಭಾಗವು ಮಹಿಳೆಯರು ಮಾಡಿದ ಸಂಬಳರಹಿತ ಮನೆಕೆಲಸವನ್ನು ‘ಉದ್ಯೋಗ’ ಎಂದು ದಾಖಲಿಸುತ್ತಿದೆ ಎಂದು ರಮೇಶ್ ಹೇಳಿದ್ದಾರೆ.

ಇದನ್ನೂ ಓದಿ: ಡಿಗ್ರಿ ಪ್ರಯೋಜನಕ್ಕೆ ಬರಲ್ಲ, ಪಂಕ್ಚರ್ ಶಾಪ್ ತೆರೆಯಿರಿ: ವಿದ್ಯಾರ್ಥಿಗಳಿಗೆ ಬಿಜೆಪಿ ಶಾಸಕರ ಸಲಹೆ

ಎಂಟು ಕೋಟಿ ಉದ್ಯೋಗದ ಹೇಳಿಕೆಗೆ ಸಂಬಂಧಿಸಿದಂತೆ ಮೋದಿ ಅವರು ಸುಳ್ಳಿನ ಜಾಲವನ್ನು ಹೆಣೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ