AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇ 95ರಷ್ಟು ಭಾರತೀಯರಿಗೆ ಪೆಟ್ರೋಲ್ ಅಗತ್ಯವಿಲ್ಲ: ಉತ್ತರ ಪ್ರದೇಶದ ಸಚಿವ ಉಪೇಂದ್ರ ತಿವಾರಿ

"ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಗೆ ಸಂಬಂಧಿಸಿದಂತೆ, ಈಗ ಬೆರಳೆಣಿಕೆಯಷ್ಟು ಜನರು ನಾಲ್ಕು ಚಕ್ರದ ವಾಹನಗಳನ್ನು ಬಳಸುತ್ತಾರೆ ಮತ್ತು ಪೆಟ್ರೋಲ್ ಅಗತ್ಯವಿದೆ. ಪ್ರಸ್ತುತ ಸಮಾಜದಲ್ಲಿ 95 ಪ್ರತಿಶತ ಜನರಿಗೆ ಪೆಟ್ರೋಲ್ ಅಗತ್ಯವಿಲ್ಲ" ಎಂದು ತಿವಾರಿ ಹೇಳಿದರು.

ಶೇ 95ರಷ್ಟು ಭಾರತೀಯರಿಗೆ ಪೆಟ್ರೋಲ್ ಅಗತ್ಯವಿಲ್ಲ: ಉತ್ತರ ಪ್ರದೇಶದ ಸಚಿವ ಉಪೇಂದ್ರ ತಿವಾರಿ
ಉಪೇಂದ್ರ ತಿವಾರಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Oct 21, 2021 | 6:36 PM

Share

ಜಲೌನ್: ಶೇಕಡಾ 95  ಭಾರತೀಯರಿಗೆ ಪೆಟ್ರೋಲ್ ಅಗತ್ಯವಿಲ್ಲ ಮತ್ತು ಬೆರಳೆಣಿಕೆಯಷ್ಟು ಜನರು ಮಾತ್ರ ನಾಲ್ಕು ಚಕ್ರದ ವಾಹನಗಳನ್ನು ಮಾತ್ರ ಬಳಸುತ್ತಾರೆ ಎಂದು ಉತ್ತರಪ್ರದೇಶದ ಸಚಿವರು ಹೇಳಿದ್ದಾರೆ.  ಪೆಟ್ರೋಲ್ ಮತ್ತು ಇಂಧನ ಬೆಲೆಗಳು ಸತತ ಎರಡನೇ ದಿನ ಏರಿಕೆಯಾಗಿ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿರುವ  ಹೊತ್ತಲ್ಲಿಯೇ ಸಚಿವರು ಈ ರೀತಿ ಹೇಳಿದ್ದಾರೆ.  ಪಶ್ಚಿಮ ಉತ್ತರ ಪ್ರದೇಶದ ಜಲೌನ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಸಚಿವ ಉಪೇಂದ್ರ ತಿವಾರಿ (Upendra Tiwari ) ಪ್ರತಿಪಕ್ಷಗಳು ಸರ್ಕಾರವನ್ನು ಗುರಿಯಾಗಿಸುವ ಯಾವುದೇ ಸಮಸ್ಯೆ ಇಲ್ಲಿ ಇಲ್ಲ. “ನೀವು 2014 ರ ಮೊದಲು ಮತ್ತು ಈಗಿನ ಅಂಕಿಅಂಶಗಳನ್ನು ತೆಗೆದುಕೊಳ್ಳುತ್ತೀರಿ. ಮೋದಿಜಿ ಮತ್ತು ಯೋಗಿಜಿ ಸರ್ಕಾರಗಳು ರಚನೆಯಾದ ನಂತರ ತಲಾ ಆದಾಯವು ದ್ವಿಗುಣಗೊಂಡಿದೆ” ಎಂದು ಹೇಳಿದ್ದಾರೆ.

“ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಗೆ ಸಂಬಂಧಿಸಿದಂತೆ, ಈಗ ಬೆರಳೆಣಿಕೆಯಷ್ಟು ಜನರು ನಾಲ್ಕು ಚಕ್ರದ ವಾಹನಗಳನ್ನು ಬಳಸುತ್ತಾರೆ ಮತ್ತು ಪೆಟ್ರೋಲ್ ಅಗತ್ಯವಿದೆ. ಪ್ರಸ್ತುತ ಸಮಾಜದಲ್ಲಿ 95 ಪ್ರತಿಶತ ಜನರಿಗೆ ಪೆಟ್ರೋಲ್ ಅಗತ್ಯವಿಲ್ಲ” ಎಂದು ತಿವಾರಿ ಹೇಳಿದರು. ಮೆಟ್ರೋ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 103.18 ತಲುಪಿದ್ದು ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 112.44 ಮತ್ತು ಡೀಸೆಲ್ ದರ 103.26 ರಷ್ಟಿದೆ. ಸಾಂಕ್ರಾಮಿಕದ ಆರ್ಥಿಕ ಪ್ರಭಾವದಿಂದ ಈಗಾಗಲೇ ತತ್ತರಿಸಿರುವ ಜನರ ಜೇಬು ಸುಡುವುದರ ಜೊತೆಗೆ, ಇಂಧನ ಬೆಲೆಗಳ ತೀವ್ರ ಏರಿಕೆಯು ಹೆಚ್ಚಿನ ಸಾರಿಗೆ ವೆಚ್ಚದಿಂದಾಗಿ ಸರಕುಗಳ ಬೆಲೆಯನ್ನು ಹೆಚ್ಚಿಸಿದೆ.

“ಸರ್ಕಾರವು 100 ಕೋಟಿಗೂ ಹೆಚ್ಚು ಜನರಿಗೆ ಉಚಿತ ಲಸಿಕೆಗಳನ್ನು ನೀಡಿದೆ. ಇದು ಉಚಿತ ಕೊವಿಡ್ ಚಿಕಿತ್ಸೆಯನ್ನು ನೀಡಿದೆ. ಮನೆಮನೆಗೆ ಔಷಧಗಳನ್ನು ವಿತರಿಸಲಾಗುತ್ತಿದೆ” ಎಂದು ಸಚಿವರು ಹೇಳಿದರು. ಇದಕ್ಕೂ ಮುಂಚೆ ಬಿಜೆಪಿಯ ಸಚಿವರು ಮತ್ತು ಮುಖಂಡರು ಇಂಧನ ಬೆಲೆಯಲ್ಲಿ ನಿರಂತರ ಏರಿಕೆಯ ಪ್ರಶ್ನೆಗಳನ್ನು ಎದುರಿಸಿದಾಗ ಸರ್ಕಾರವು ಉಚಿತ ಕೊವಿಡ್ ಲಸಿಕೆಗಳನ್ನು ನೀಡುವ ಬಗ್ಗೆ ಮಾತನಾಡಿದ್ದರು.|

ಕೇಂದ್ರ ಸರ್ಕಾರವು ಸಂಗ್ರಹಿಸುವ ತೆರಿಗೆಗಳಿಂದ ಉಚಿತ ಲಸಿಕೆಗಳಿಗೆ ಹಣ ಬರುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೇಲಿ ಈ ತಿಂಗಳ ಆರಂಭದಲ್ಲಿ ಹೇಳಿದ್ದರು. ಇಂಧನ ಬೆಲೆಗಳು ಹೆಚ್ಚಿಲ್ಲ ಆದರೆ ವಿಧಿಸಿದ ತೆರಿಗೆಯನ್ನು ಒಳಗೊಂಡಿದೆ. ನೀವು ಉಚಿತ ಲಸಿಕೆ ತೆಗೆದುಕೊಂಡಿರಬೇಕು, ಹಣ ಎಲ್ಲಿಂದ ಬರುತ್ತದೆ? ನೀವು ಹಣವನ್ನು ಪಾವತಿಸಿಲ್ಲ, ಈ ರೀತಿ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಜಲೌನ್​​ನಲ್ಲಿ ಮಾತನಾಡಿದ ತಿವಾರಿ ಆರೋಗ್ಯ, ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಸರ್ಕಾರದ ಉಪಕ್ರಮಗಳನ್ನು ಪಟ್ಟಿ ಮಾಡಿದರು. “ಮಫ್ತ್ ಮೇ ದವಾಯಿ, ಮಫ್ತ್ ಮೇ ಪಢಾಯಿ, ಮಫ್ತ್ ಮೇ ಸಿಂಚಾಯಿ , ಮಫ್ತ್ ಮೇ ಕಧಾಯಿ” ಎಂದು ಅವರು ಹೇಳಿದರು.  ಇದನ್ನು ಗಣನೆಗೆ ತೆಗೆದುಕೊಂಡು ಇತರ ರಾಜ್ಯಗಳಿಗೆ ಹೋಲಿಸಿದರೆ, ಉತ್ತರ ಪ್ರದೇಶ ಮತ್ತು ದೇಶದಲ್ಲಿ ಇಂಧನ ಬೆಲೆಗಳು ಕೇವಲ ಅಲ್ಪ ಏರಿಕೆಯನ್ನು ಕಂಡಿದೆ. ನಾವು ಅದನ್ನು ತಲಾ ಆದಾಯಕ್ಕೆ ಹೋಲಿಸಿದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತುಂಬಾ ಕಡಿಮೆ ಎಂದು ತಿವಾರಿ ಹೇಳಿದ್ದಾರೆ.

ಇದನ್ನೂ ಓದಿ: Petrol Diesel Price: ತೈಲ ಬೆಲೆ ಏರಿಕೆ ಮುಂದುವರಿಕೆ; ಬೆಂಗಳೂರಲ್ಲಿ 110 ರೂ. ದಾಟಿದ ಪೆಟ್ರೋಲ್