Amarnath: ಅಮರನಾಥ ಯಾತ್ರಿಕರಿದ್ದ ಬಸ್ಸು ಡಂಪ್ ಟ್ರಕ್‌ಗೆ ಡಿಕ್ಕಿ, ಹತ್ತಕ್ಕೂ ಹೆಚ್ಚು ಮಂದಿಗೆ ಗಾಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 14, 2022 | 5:33 PM

ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಶ್ರೀನಗರ-ಜಮ್ಮು ಹೆದ್ದಾರಿಯ ಖಾಜಿಗುಂಡ್‌ನಲ್ಲಿ ಕ್ರಾಸಿಂಗ್‌ನಲ್ಲಿ ಡಂಪ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ, ಈ ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Amarnath: ಅಮರನಾಥ ಯಾತ್ರಿಕರಿದ್ದ ಬಸ್ಸು ಡಂಪ್ ಟ್ರಕ್‌ಗೆ ಡಿಕ್ಕಿ, ಹತ್ತಕ್ಕೂ ಹೆಚ್ಚು ಮಂದಿಗೆ ಗಾಯ
Image Credit source: NDTV
Follow us on

ಖಾಜಿಗುಂಡ್: ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಶ್ರೀನಗರ-ಜಮ್ಮು ಹೆದ್ದಾರಿಯ ಖಾಜಿಗುಂಡ್‌ನಲ್ಲಿ ಕ್ರಾಸಿಂಗ್‌ನಲ್ಲಿ ಡಂಪ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ, ಈ ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಘಟನೆಯು  ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಲಾರಿಯು ಕ್ರಾಸಿಂಗ್‌ನಲ್ಲಿ ತಿರುವು ಪಡೆಯಲು ಪ್ರಯತ್ನಿಸುತ್ತಿದ್ದಾಗ ನಿಂತಿದ್ದ ಬಸ್ಸು ಬಂದು ಟಿಪ್ಪರ್ ಲಾರಿಗೆ   ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆಯುವುದನ್ನು ವೀಡಿಯೊ ದೃಶ್ಯಾವಳಿಗಳಲ್ಲಿ ನೋಡಬಹುದು. ಅಪಘಾತ ಸಂಭವಿಸಿದಾಗ ಅಲ್ಲಿದ್ದ ಜನರು  ಭಯಭೀತರಾಗಿ ಓಡುತ್ತಿದ್ದ ದೃಶ್ಯವನ್ನು ಕೂಡ ಈ ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ
International Yoga Day 2022: ಮಾನವೀಯತೆಗೆ ಭಾರತ ನೀಡಿದ ಕೊಡುಗೆಯೇ ಯೋಗ; ರಾಷ್ಟ್ರಪತಿ ರಾಮನಾಥ ಕೋವಿಂದ್ ಬಣ್ಣನೆ
International Yoga Day 2022: ಗಾರ್ಡಿಯನ್ ರಿಂಗ್ ಮೂಲಕ ವಿವಿಧ ದೇಶಗಳ ಯೋಗ ಪ್ರಸಾರ; 5 ಪ್ರಮುಖ ಅಂಶಗಳು ಇಲ್ಲಿವೆ
Thyroid Disease and Yoga: ಈ ಯೋಗಾಸನಗಳನ್ನು ಮಾಡಿದರೆ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ
International Yoga Day 2022: ಯಾವ ರಾಶಿಯವರು ಯಾವ ಯೋಗಾಸನಗಳನ್ನು ಮಾಡಬೇಕು? ಇಲ್ಲಿದೆ ಮಾಹಿತಿ

ಕಾಶ್ಮೀರ ಕಣಿವೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಗುರುವಾರ ಅಮರನಾಥ ಯಾತ್ರೆಯನ್ನು ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.