Odisha: ಪಲ್ಟಿಯಾಗಿ 15 ಅಡಿ ಆಳಕ್ಕೆ ಬಿದ್ದ ಬಸ್; ಮೂವರು ಪೊಲೀಸರ ದುರ್ಮರಣ, 14ಸಿಬ್ಬಂದಿಗೆ ಗಂಭೀರ ಗಾಯ
ಕೊಸಮಗುಡಾದಲ್ಲಿ ಪಂಚಾಯತ್ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುತ್ತಿದ್ದು, ಈ ವಾಹನ ಅಲ್ಲಿಗೆ ತೆರಳುತ್ತಿತ್ತು. ಪೊಲೀಸರೊಂದಿಗೆ ಕೆಲವರು ಚುನಾವಣಾ ಸಿಬ್ಬಂದಿಯೂ ಇದ್ದರು ಎನ್ನಲಾಗಿದೆ.
ಪೊಲೀಸರು ಪ್ರಯಾಣಿಸುತ್ತಿದ್ದ ಬಸ್ವೊಂದು ಪಲ್ಟಿಯಾಗಿ, ಮೂವರು ಪೊಲೀಸ್ ಸಿಬ್ಬಂದಿ ಮೃತಪಟ್ಟು(3 Cop Died), 14 ಮಂದಿ ಗಾಯಗೊಂಡ ಘಟನೆ ಒಡಿಶಾದ (Odisha) ನಬರಂಗಪುರ ಜಿಲ್ಲೆಯಲ್ಲಿ ನಡೆದಿದೆ. ಗಾಯಾಳು ಪೊಲೀಸರನ್ನು ಪಾಪಡಹಂಡಿ ಸಿಎಚ್‌ಸಿ ಮತ್ತು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಸ್ನಲ್ಲಿ 40-45 ಮಂದಿ ಇದ್ದು, ಪಾಪಡಹಂಡಿಯಿಂದ ಕೊಸಮಗುಡಾಕ್ಕೆ ಪ್ರಯಾಣ ಮಾಡುತ್ತಿದ್ದರು.
ಮಾರ್ಗ ಮಧ್ಯದ ತಿರುವೊಂದರಲ್ಲಿ ಚಾಲಕನಿಗೆ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಆಯತಪ್ಪಿದೆ. ಸುಮಾರು 15 ಅಡಿ ಆಳಕ್ಕೆ ಬಿದ್ದಿದೆ. ಈ ವಿಚಾರವನ್ನು ಸ್ಥಳೀಯರು ಸಮೀಪದ ಠಾಣೆಯ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ, ಅಲ್ಲಿನವರ ಸಹಾಯದಿಂದ ಗಾಯಾಳುಗಳನ್ನು ರಕ್ಷಿಸಿದ್ದಾರೆ. ಹಾಗಿದ್ದಾಗ್ಯೂ ಕೂಡ ಆಸ್ಪತ್ರೆ ತಲುಪುವ ಒಳಗೇ ಮೂವರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದರು. ಮೃತ ಪೊಲೀಸ್ ಸಿಬ್ಬಂದಿಯನ್ನು ರವಿ ಬಿಸೋಯ್, ಸಿ.ಎಚ್.ಸೇಸಾ ರಾವ್ ಮತ್ತು ಜಗಬಂಧು ಗೌಡ ಎಂದು ಗುರುತಿಸಲಾಗಿದೆ.
ಕೊಸಮಗುಡಾದಲ್ಲಿ ಪಂಚಾಯತ್ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುತ್ತಿದ್ದು, ಈ ವಾಹನ ಅಲ್ಲಿಗೆ ತೆರಳುತ್ತಿತ್ತು. ಪೊಲೀಸರೊಂದಿಗೆ ಕೆಲವರು ಚುನಾವಣಾ ಸಿಬ್ಬಂದಿಯೂ ಇದ್ದರು ಎನ್ನಲಾಗಿದೆ. ದುರ್ಘಟನೆ ಬಗ್ಗೆ ನೋವು ವ್ಯಕ್ತಪಡಿಸಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ. ಅಪಘಾತದಲ್ಲಿ ಮೃತರಾದವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ಭಗವಂತ ಕರುಣಿಸಲಿ ಮತ್ತು ಗಾಯಗೊಂಡವರು ಬಹುಬೇಗ ಚೇತರಿಸಿಕೊಳ್ಳಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅರ್ಜುನ್ ಮ್ಯಾಚ್ ನೋಡಲು ನಾನು ಹೋಗಲ್ಲ.. ಹೋದರೂ ಗುಟ್ಟಾಗಿ ನೋಡಿ ಬಂದು ಬಿಡುತ್ತೇನೆ; ಸಚಿನ್ ತೆಂಡೂಲ್ಕರ್
Published On - 9:55 am, Sat, 19 February 22