Shocking News: ಜ್ಯೋತಿಷಿಯ ಸಲಹೆಯಂತೆ ಹಾವು ಕಚ್ಚಿಸಿಕೊಂಡು ನಾಲಿಗೆ ಕಳೆದುಕೊಂಡ ರೈತ!

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 26, 2022 | 3:36 PM

ರೈತನೊಬ್ಬರಿಗೆ ಜ್ಯೋತಿಷಿರೊಬ್ಬರು ನೀಡಿದ ಸಲಹೆಯಿಂದ ತನ್ನ  ನಾಲಿಗೆಯನ್ನು ಕಳೆದುಕೊಂಡಿದ್ದಾನೆ. ಕಾಪಿಚೆಟ್ಟಿಪಾಳ್ಯಂನ 54 ವರ್ಷದ ರಾಜಾ ಎಂಬ ವ್ಯಕ್ತಿಯು ತನ್ನ ನಾಲಿಗೆಗೆ ಕೊಳಕು ಮಂಡಲದಿಂದ  ಕಚ್ಚಿಸಿಕೊಂಡಿದ್ದಾನೆ. ಈ ಘಟನೆ ತಮಿಳುನಾಡಿನ ಈರೋಡ್‌ನಲ್ಲಿ ನಡೆದಿದೆ.

Shocking News: ಜ್ಯೋತಿಷಿಯ ಸಲಹೆಯಂತೆ ಹಾವು ಕಚ್ಚಿಸಿಕೊಂಡು ನಾಲಿಗೆ ಕಳೆದುಕೊಂಡ ರೈತ!
ಸಾಂದರ್ಭಿಕ ಚಿತ್ರ
Follow us on

ಈರೋಡ್‌: ರೈತನೊಬ್ಬರಿಗೆ ಜ್ಯೋತಿಷಿರೊಬ್ಬರು ನೀಡಿದ ಸಲಹೆಯಿಂದ ತನ್ನ  ನಾಲಿಗೆಯನ್ನು ಕಳೆದುಕೊಂಡಿದ್ದಾನೆ. ಕಾಪಿಚೆಟ್ಟಿಪಾಳ್ಯಂನ 54 ವರ್ಷದ ರಾಜಾ ಎಂಬ ವ್ಯಕ್ತಿಯು ತನ್ನ ನಾಲಿಗೆಗೆ ಕೊಳಕು ಮಂಡಲದಿಂದ  ಕಚ್ಚಿಸಿಕೊಂಡಿದ್ದಾನೆ. ಈ ಘಟನೆ ತಮಿಳುನಾಡಿನ ಈರೋಡ್‌ನಲ್ಲಿ ನಡೆದಿದೆ. ಕಾಪಿಚೆಟ್ಟಿಪಾಳ್ಯಂನ 54 ವರ್ಷದ ರಾಜಾ ಎಂದು ಹೇಳಲಾಗಿದೆ. ಈತನಿಗೆ ಕನಸಿನಲ್ಲಿ ಪದೇ ಪದೇ ಹಾವು ಕಚ್ಚುವ ಕನಸು ಬಿಳುತ್ತಿತ್ತು ಎಂದು ಜ್ಯೋತಿಷಿಯನ್ನು ಸಂಪರ್ಕಿಸಿದ್ದಾರೆ.

ಜ್ಯೋತಿಷಿಯು ಈ ರೈತನಿಗೆ ಹಾವಿನ ದೇವಸ್ಥಾನಕ್ಕೆ ಹೋಗಿ ಕೆಲವು ಆಚರಣೆಗಳನ್ನು ಮಾಡಿ ಕೆಟ್ಟ ಕನಸುಗಳಿಗೆ ಪರಿಹಾರ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಸಲಹೆಯಂತೆ, ರೈತನು ದೇವಸ್ಥಾನಕ್ಕೆ ಹೋಗಿ ವಿಧಿವಿಧಾನಗಳನ್ನು ಪೂರೈಸಿದನು, ಇದರ ಜೊತೆಗೆ ರಾಜಾ ಕೊಳಕು ಮಂಡಲ ಹಾವಿನ ಮುಂದೆ ಮೂರು ಬಾರಿ ತನ್ನ ನಾಲಿಗೆಯನ್ನು ಚಾಚಿದನು ಈ ವಿಷಕಾರಿ ಹಾವು ಅವನ ನಾಲಿಗೆಯನ್ನು ಕ್ಷಣಾರ್ಧದಲ್ಲಿ ಕಚ್ಚಿದೆ.

ಇದನ್ನು ಓದಿ:Shocking News: 3 ವರ್ಷದಿಂದ ಬೆಡ್ ರೂಂನಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿತ್ತು ಮಗುವಿನ ಶವ!

ದೇವಸ್ಥಾನದ ಅರ್ಚಕ ಇದನ್ನು ಕಂಡ ಕೂಡಲೇ ನಾಲಿಗೆಯನ್ನು ತುಂಡರಿಸಿ ಈರೋಡ್ ಮಣಿಯನ್ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಾಗ ವ್ಯಕ್ತಿಯೂ ಪ್ರಜ್ಞೆ ತಪ್ಪಿ ಬಿದ್ದಿದ್ದ. ಮಣಿಯನ್ ಮೆಡಿಕಲ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಸೆಂಥಿಲ್ ಕುಮಾರನ್, ವೈದ್ಯರು ರಾಜಾನ ನಾಲಿಗೆ ಕತ್ತರಿಸಿದ ಕಾರಣ ಚಿಕಿತ್ಸೆ ನೀಡಿದರು ಜೊತೆಗೆ ಆತನ ದೇಹದಲ್ಲಿದ್ದ ಹಾವಿನ ವಿಷಕ್ಕೆ ಚಿಕಿತ್ಸೆ ನೀಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:30 pm, Sat, 26 November 22