ಚಿಕಿತ್ಸೆಗಾಗಿ 2 ವರ್ಷಗಳಿಂದ ಆಶ್ರಮದಲ್ಲಿದ್ದು ಈಗ ಆತ್ಮಹತ್ಯೆ ಮಾಡಿಕೊಂಡ ಯುವತಿ; ಟ್ವಿಟರ್​​ನಲ್ಲಿ ಟ್ರೆಂಡ್​ ಆದ ಜಸ್ಟೀಸ್ ಫಾರ್​ ಹೇಮಮಾಲಿನಿ ಹ್ಯಾಶ್​ಟ್ಯಾಗ್​

ಫೆ.15ರಂದು ಹೇಮಮಾಲಿನಿ ಒಂದೇ ಸಮನೆ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಳು. ಅದನ್ನು ನೋಡಿದ ಆಶ್ರಮದಲ್ಲಿ ಅವಳೊಂದಿಗೆ ಇದ್ದ ಆಂಟಿ, ಅಲ್ಲಿನ ಸ್ವಯಂ ಘೋಷಿತ ದೇವಮಾನವ ಮುನಾಸಾಮಿಗೆ ತಿಳಿಸಿ, ಆಸ್ಪತ್ರೆಗೆ ಹೋಗಲು ವ್ಯವಸ್ಥೆ ಮಾಡಿಕೊಡುವಂತೆ ಕೇಳಿದರು.

ಚಿಕಿತ್ಸೆಗಾಗಿ 2 ವರ್ಷಗಳಿಂದ ಆಶ್ರಮದಲ್ಲಿದ್ದು ಈಗ ಆತ್ಮಹತ್ಯೆ ಮಾಡಿಕೊಂಡ ಯುವತಿ; ಟ್ವಿಟರ್​​ನಲ್ಲಿ ಟ್ರೆಂಡ್​ ಆದ ಜಸ್ಟೀಸ್ ಫಾರ್​ ಹೇಮಮಾಲಿನಿ ಹ್ಯಾಶ್​ಟ್ಯಾಗ್​
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Feb 17, 2022 | 5:19 PM

ಇಂದು ಟ್ವಿಟರ್​​ನಲ್ಲಿ ಜಸ್ಟೀಸ್ ಫಾರ್ ಹೇಮಮಾಲಿನಿ (Justice For Hema Malini)ಎಂಬ ಹ್ಯಾಶ್​ಟ್ಯಾಗ್ ಟ್ರೆಂಡ್ (Twitter Hashtag)  ಆಗುತ್ತಿದೆ. 20 ವರ್ಷದ ಯುವತಿ ಹೇಮಮಾಲಿನಿಯ ಸಾವಿಗೆ ನ್ಯಾಯ ಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಆದರೆ ಈ ಹೇಮಮಾಲಿನಿ ಯಾರು? ಈಕೆ ಮೃತಪಟ್ಟಿದ್ದು ಹೇಗೆ ಮತ್ತು ಯಾಕೆ? ಕಾಲೇಜು ವಿದ್ಯಾರ್ಥಿನಿಯಾದರೂ ಅವಳು ಆಶ್ರಮಕ್ಕೆ ಹೋಗಿ ಉಳಿದು, ಅಲ್ಲಿಯೇ ಮೃತಪಟ್ಟಿದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಈ ಮನಕಲಕುವ ಸ್ಟೋರಿ ಓದಿ..

ಹೇಮಮಾಲಿನಿ ತಿರುವಲ್ಲೂರು ಜಿಲ್ಲೆಯ ಕಾಲೇಜು ವಿದ್ಯಾರ್ಥಿನಿ. ಖಾಸಗಿ ಕಾಲೇಜೊಂದರಲ್ಲಿ ಬಿಎಸ್​.ಸಿ ಕಂಪ್ಯೂಟರ್​ ಸೈನ್ಸ್​ ಓದುತ್ತಿದ್ದಳು. ಆದರೆ ಕಳೆದ ಎರಡು ವರ್ಷಗಳಿಂದಲೂ ವಿಪರೀತ ಹೊಟ್ಟೆನೋವು ಮತ್ತು ಕುತ್ತಿಗೆ ನೋವಿಂದ ಬಳಲುತ್ತಿದ್ದಳು. ಹೀಗಾಗಿ ಆಕೆಯನ್ನು 2020ನೇ ಇಸ್ವಿಯಲ್ಲಿ ಪಾಲಕರೇ ವೆಲ್ಲತುಕೊಟ್ಟೈನಲ್ಲಿರುವ ಪೂಡಿ ಎಂಬಲ್ಲಿರುವ ಆಶ್ರಮವೊಂದರಲ್ಲಿ ಬಿಟ್ಟಿದ್ದರು. ಈ ಆಶ್ರಮದಲ್ಲಿ ಗಿಡಮೂಲಿಕೆಗಳ ಔಷಧಿ ಚಿಕಿತ್ಸೆ ನೀಡುವ ಕಾರಣ, ಹೇಮಮಾಲಿನಿ ಪಾಲಕರು ಆಕೆಯನ್ನು ಇಲ್ಲಿಯೇ ಇಟ್ಟಿದ್ದರು. ಅವಳೂ ಸಹ ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಲೇ ಇದ್ದಳು. ಆದರೆ ಫೆ.15ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಪಾಲಕರು ಆಶ್ರಮ ಮತ್ತು ಅಲ್ಲಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿಯ ವಿರುದ್ಧ ಆರೋಪ ಮಾಡಿದ್ದಾರೆ. ಮಗಳ ಸಾವಿನ ಹಿಂದೆ ಪಿತೂರಿ ನಡೆದಿದೆ ಎಂದಿದ್ದಾರೆ. ಅದರ ಬೆನ್ನಲ್ಲೇ ನೆಟ್ಟಿಗರೂ ಕೂಡ ಹೇಮಮಾಲಿನಿ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ.

ಫೆ.15ರಂದು ಹೇಮಮಾಲಿನಿ ಒಂದೇ ಸಮನೆ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಳು. ಅದನ್ನು ನೋಡಿದ ಆಶ್ರಮದಲ್ಲಿ ಅವಳೊಂದಿಗೆ ಇದ್ದ ಆಂಟಿ, ಅಲ್ಲಿನ ಸ್ವಯಂ ಘೋಷಿತ ದೇವಮಾನವ ಮುನಾಸಾಮಿಗೆ ತಿಳಿಸಿ, ಆಸ್ಪತ್ರೆಗೆ ಹೋಗಲು ವ್ಯವಸ್ಥೆ ಮಾಡಿಕೊಡುವಂತೆ ಕೇಳಿದರು. ಮುನಾಸಾಮಿ ಆಟೋರಿಕ್ಷಾವನ್ನು ವ್ಯವಸ್ಥೆ ಮಾಡುವ ಹೊತ್ತಿಗೆ ಎರಡು ತಾಸುಗಳೇ ಕಳೆದು ಹೋಯಿತು. ಕೊನೆಗೂ ಹೇಮಮಾಲಿನಿ ಆಸ್ಪತ್ರೆ ತಲುಪಿ ಡಾಕ್ಟರ್​ ಚಿಕಿತ್ಸೆಯನ್ನೂ ಪ್ರಾರಂಭಿಸಿದರು. ಆಕೆ ಕೀಟನಾಶಕ ಸೇವನೆ ಮಾಡಿದ್ದಾಗಿ ಸ್ಪಷ್ಟಪಡಿಸಿದರು. ಚಿಕಿತ್ಸೆ ಸಮಯದಲ್ಲೇ ಹೇಮಮಾಲಿನಿ ಮೃತಪಟ್ಟಿದ್ದು, ಆಕೆಯ ದೇಹವನ್ನು ಪೋಸ್ಟ್​ಮಾರ್ಟಮ್​ಗೆ ಕಳಿಸಲಾಗಿದೆ.

ಹೇಮಮಾಲಿನಿ ಮೃತಪಟ್ಟ ನಂತರ ಆಕೆಯ ಪಾಲಕರು ಮುನಾಸಾಮಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮುನಾಸಾಮಿ ಆಶ್ರಮದಲ್ಲಿ ಏನೇನೋ ಆಚರಣೆ ಮಾಡುತ್ತಿದ್ದ. ಆತನ ಶಿಷ್ಯಂದಿರು ಪ್ರತಿ ಅಮಾವಾಸ್ಯೆ-ಹುಣ್ಣಿಮೆಯ ದಿನದಂದು ಮುನಾಸಾಮಿಯನ್ನು ಪೂಜೆ ಮಾಡುತ್ತಿದ್ದರು. ಹಾಗೇ, ನಮ್ಮ ಮಗಳನ್ನೂ ಪೂಜೆಗೆ ನಿಯೋಜಿಸಲಾಗಿತ್ತು. ಇಲ್ಲಿ ಮದುವೆಯಾದ ಹಲವು ಹೆಣ್ಣುಮಕ್ಕಳೂ ಕೂಡ ಆಶೀರ್ವಾದ ಪಡೆಯಲು ಬರುತ್ತಾರೆ ಎಂಬಿತ್ಯಾದಿ ವಿಷಯಗಳನ್ನು ಹೇಳಿದ್ದಾರೆ.  ಈ ವಿಚಾರದ ಬಗ್ಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಕೂಡ ಧ್ವನಿ ಎತ್ತಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.

ಇದನ್ನೂ ಓದಿ: Headache: ಆಗಾಗ ತಲೆನೋವು ಬರುತ್ತಾ? ತಲೆನೋವಿನಿಂದ ತಕ್ಷಣ ಮುಕ್ತಿ ಹೊಂದಲು ಹೀಗೆ ಮಾಡಿ

Published On - 5:18 pm, Thu, 17 February 22

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ