ಮೇಘಾಲಯದಲ್ಲಿ ವಿವಾಹಿತ ಮಹಿಳೆಯೊಬ್ಬರು ಬೇರೊಬ್ಬ ವ್ಯಕ್ತಿಯ ಜತೆಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಎಂಬ ಕಾರಣಕ್ಕೆ ಆಕೆಯನ್ನು ಮನಬಂದಂತೆ ಅಲ್ಲಿ ಪುರುಷರು ಸಾರ್ವಜನಿಕವಾಗಿ ಥಳಿಸಿದ್ದಾರೆ. ಇದೀಗ ಈ ಘಟನೆಯ ಬಗ್ಗೆ ವಿಡಿಯೋವೊಂದು ವೈರಲ್ ಆಗಿದ್ದು, ಪಶ್ಚಿಮ ಗರೋ ಹಿಲ್ಸ್‌ನ ದಾಡೆಂಗ್ಗ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮಹಿಳೆಯ ಮೇಲೆ ಸಾರ್ವಜನಿಕವಾಗಿ ಅಮಾನುಷವಾಗಿ ಹಲ್ಲೆ ಮಾಡಲಾಗಿದ್ದು, ಯಾರು ಕೂಡ ಆಕೆಯ ಸಹಾಯಕ್ಕೆ ಧಾವಿಸಿಲ್ಲ ಎಂದು ಹೇಳಲಾಗಿದೆ.
ಈ ವೀಡಿಯೊದಲ್ಲಿ ಅನೇಕ ಪುರುಷರು ಸೇರಿ ಆಕೆಗೆ ಸಾವರ್ಜನಿಕವಾಗಿ ಎಲ್ಲರ ಮುಂದೆ ಥಳಿಸಿದ್ದಾರೆ. ಇದೀಗ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಆಕೆ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಅವರು ಈ ರೀತಿ ಥಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಮದುವೆ ದಿನ ಮಾಜಿ ಪ್ರೇಯಸಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಯುವಕ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
📌Troubling video originating from West Garo Hills has emerged, depicting a woman subjected to a vicious assault. The footage shows a group of men dragging, kicking, and ruthlessly beating her, while villagers watched. pic.twitter.com/zcy2VffUwF
— Highland Post (@PostHighland) June 26, 2024
ಮಹಿಳಾ ಸಬಲೀಕರಣದ ಮೇಘಾಲಯ ಅಸೆಂಬ್ಲಿ ಸಮಿತಿಯ ಅಧ್ಯಕ್ಷೆಯಾಗಿರುವ ಸುಟ್ಂಗಾ ಸೈಪುಂಗ್ ಶಾಸಕಿ ಸಾಂತಾ ಮೇರಿ ಶೈಲ್ಲಾ ಈ ಘಟನೆಯ ಬಗ್ಗೆ ಪೊಲೀಸರ ಬಳಿ ವರದಿಯನ್ನು ಕೇಳಿದ್ದಾರೆ. ಮೇಘಾಲಯದ ಎಲ್ಲಾ 12 ಜಿಲ್ಲೆಗಳ ಪೊಲೀಸ್ ಅಧೀಕ್ಷಕರಿಗೆ ಮಹಿಳೆಯರ ವಿರುದ್ಧ ಯಾವುದೇ ರೀತಿಯ ಅಪರಾಧದ ವಿರುದ್ಧ ಎಚ್ಚರದಿಂದ ಇರುವಂತೆ ಸರ್ಕಾರ ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ