ಸ್ಯಾಮ್ ಪಿತ್ರೋಡಾ ಬಗ್ಗೆ ಪ್ರಧಾನಿ ಮೋದಿ ನುಡಿದಿದ್ದ ಭವಿಷ್ಯ ನಿಜವಾಯ್ತು

ಸ್ಯಾಮ್ ಪಿತ್ರೋಡಾ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನುಡಿದಿದ್ದ ಭವಿಷ್ಯ ನಿಜವಾಗಿದೆ ಅವರು ಮತ್ತೆ ಸಾಗರೋತ್ತರ ಕಾಂಗ್ರೆಸ್​ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾರಣ ಅವರು ರಾಜೀನಾಮೆ ನೀಡಬೇಕಾಯಿತು. ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಸ್ಯಾಮ್ ಪಿತ್ರೋಡಾ ಬಗ್ಗೆ ಏನು ಹೇಳಿದ್ದರು, ಮಾಹಿತಿ ಇಲ್ಲಿದೆ.

ಸ್ಯಾಮ್ ಪಿತ್ರೋಡಾ ಬಗ್ಗೆ ಪ್ರಧಾನಿ ಮೋದಿ ನುಡಿದಿದ್ದ ಭವಿಷ್ಯ ನಿಜವಾಯ್ತು
ನರೇಂದ್ರ ಮೋದಿ-ಸ್ಯಾಮ್ ಪಿತ್ರೋಡಾ
Follow us
ನಯನಾ ರಾಜೀವ್
|

Updated on: Jun 27, 2024 | 10:46 AM

ಸ್ಯಾಮ್ ಪಿತ್ರೋಡಾ ಅವರನ್ನು ಮತ್ತೊಮ್ಮೆ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮರು ನೇಮಕ ಮಾಡಿದ್ದಾರೆ. ಈ ಕುರಿತು ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಿದ್ದ ಭವಿಷ್ಯ ನಿಜವಾದಂತಾಗಿದೆ.

ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಸಂದರ್ಶನದ ವಿಡಿಯೋವನ್ನು ಬಿಜೆಪಿ ಶೇರ್ ಮಾಡಿದೆ. ಸ್ಯಾಮ್ ಪಿತ್ರೋಡಾ ರಾಜೀನಾಮೆ ನೀಡಿದ್ದಾರೆ ಆದರೆ ಕೆಲವೇ ದಿನಗಳಲ್ಲಿ ಅದೇ ಹುದ್ದೆಗೆ ಮರಳುತ್ತಾರೆ ಎಂದು ಹೇಳಿದ್ದರು.

ಲೋಕಸಭೆ ಚುನಾವಣೆ ವೇಳೆಗೆ ಪಿತ್ರೋಡಾ ರಾಜೀನಾಮೆ ನೀಡಿದ್ದರು ಲೋಕಸಭಾ ಚುನಾವಣೆಯ ಸಮಯದಲ್ಲಿ ಅವರು ನೀಡಿದ ಎರಡು ಹೇಳಿಕೆಗಳು ದೊಡ್ಡ ರಾಜಕೀಯ ವಿವಾದವನ್ನು ಸೃಷ್ಟಿಸಿದ್ದ ಕಾರಣ ಅವರು ರಾಜೀನಾಮೆ ನೀಡಬೇಕಾಯಿತು.

ಮತ್ತಷ್ಟು ಓದಿ: Sam Pitroda resigns: ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ

ಸ್ಯಾಮ್ ಪಿತ್ರೋಡಾ ಅವರು, ಅಮೆರಿಕದಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆ ಇದೆ ಯಾರಾದರೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದು ಅವರು ಮೃತಪಟ್ಟಾಗ 45 ಪ್ರತಿಶತನ ಮಾತ್ರ ಅವರ ಮಕ್ಕಳಿಗೆ ಹೋಗುತ್ತದೆ, ಉಳಿದ ಶೇ.55ರಷ್ಟು ಆಸ್ತಿ ಸರ್ಕಾರಕ್ಕೆ ಹೋಗುತ್ತದೆ. ನೀವು ನಿಮ್ಮ ಸಂಪತ್ತನ್ನು ಸಾರ್ವಜನಿಕರಿಗೆ ಬಿಡುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದರು.

ಸ್ಯಾಮ್ ಪಿತ್ರೋಡಾ ಇಂಗ್ಲಿಷ್ ಪತ್ರಿಕಎಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪಶ್ಚಿಮದಲ್ಲಿ ವಾಸಿಸುವವರನ್ನು ಅರಬ್ಬರಿಗೆ, ಉತ್ತರ ಭಾರತದ ಜನರನ್ನು ಬಿಳಿಯರಿಗೆ, ದಕ್ಷಿಣ ಭಾರತದಲ್ಲಿ ವಾಸಿಸುವವರನ್ನು ಆಫ್ರಿಕಾಕ್ಕೆ ಮತ್ತು ಪೂರ್ವದಲ್ಲಿ ವಾಸಿಸುವ ಜನರನ್ನು ಚೀನಾಗೆ ಹೋಲಿಸಿದ್ದರು. ಈ ಬಗ್ಗೆ ಸಾಕಷ್ಟು ಗದ್ದಲ ಎದ್ದಿತ್ತು, ಈ ಹೇಳಿಕೆಯ ನಂತರ ಅವರು ರಾಜೀನಾಮೆ ನೀಡಬೇಕಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ