ಉತ್ತರಪ್ರದೇಶ: ಆಗ್ರಾ-ದೆಹಲಿ ಹೆದ್ದಾರಿಯಲ್ಲಿ ಭೀಕರ ಅಪಘಾತ; 5 ಸಾವು

|

Updated on: Dec 02, 2023 | 6:47 PM

ಆಗ್ರಾದ ಗುರುದ್ವಾರ ಗುರು ಕಾ ತಾಲ್ ಕ್ರಾಸಿಂಗ್ ಬಳಿ ವೇಗವಾಗಿ ಬಂದ ಟ್ರಕ್ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವಿಗೀಡಾಗಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಆಟೋ ರಿಕ್ಷಾ ಎರಡು ಲಾರಿಗಳ ನಡುವೆ ಸಿಲುಕಿಕೊಂಡಿದೆ.

ಉತ್ತರಪ್ರದೇಶ: ಆಗ್ರಾ-ದೆಹಲಿ ಹೆದ್ದಾರಿಯಲ್ಲಿ ಭೀಕರ ಅಪಘಾತ; 5 ಸಾವು
ರಸ್ತೆ ಅಪಘಾತ
Follow us on

ಆಗ್ರಾ ಡಿಸೆಂಬರ್ 02: ಆಗ್ರಾ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ (Agra-Delhi National Highway )ಶನಿವಾರ ಭೀಕರ ಅಪಘಾತ (Accident) ಸಂಭವಿಸಿದ್ದು, ಐವರು ಸಾವಿಗೀಡಾಗಿದ್ದಾರೆ. ಆಗ್ರಾದ ಗುರುದ್ವಾರ ಗುರು ಕಾ ತಾಲ್ ಕ್ರಾಸಿಂಗ್ ಬಳಿ ವೇಗವಾಗಿ ಬಂದ ಟ್ರಕ್ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವಿಗೀಡಾಗಿದ್ದಾರೆ. ಅಪಘಾತದ ಪರಿಣಾಮ ಆಟೋ ರಿಕ್ಷಾ ಎರಡು ಲಾರಿಗಳ ನಡುವೆ ಸಿಲುಕಿಕೊಂಡಿದೆ.

ಈ ಅಪಘಾತವು ರಾಷ್ಟ್ರೀಯ ಹೆದ್ದಾರಿ 19 ರಲ್ಲಿ ಸ್ಥಳದ ಸುತ್ತಲೂ ಕಿಕ್ಕಿರಿದು ಜಮಾಯಿಸಿದ್ದರಿಂದ ಭಾರಿ ಜಾಮ್‌ಗೆ ಕಾರಣವಾಯಿತು. ಏತನ್ಮಧ್ಯೆ, ಪೊಲೀಸರು ಈ ಪ್ರದೇಶದಲ್ಲಿ ಸಂಚಾರ ತಡೆಯನ್ನು ತೆರವುಗೊಳಿಸಲು ಪ್ರಯತ್ನಿಸಿದರು.

ಗುರುದ್ವಾರ ಗುರು ಕಾ ತಾಲ್ ಕ್ರಾಸಿಂಗ್ ಇಂತಹ ಮಾರಣಾಂತಿಕ ಅಪಘಾತಗಳಿಗೆ ಹೆಸರುವಾಸಿಯಾಗಿದೆ. ಈ ಭಾಗದಲ್ಲಿ ಅಂಡರ್‌ಪಾಸ್‌ ನಿರ್ಮಿಸುವಂತೆ ಸ್ಥಳೀಯರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರೂ ಈಡೇರಿಲ್ಲ. ಮೃತ ಐವರು ವ್ಯಕ್ತಿಗಳ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಬಾಲಕನ ಮೇಲೆ ಹರಿದ ಟ್ರಕ್

ಶುಕ್ರವಾರ ಬೆಳಗ್ಗೆ ಘಾಜಿಯಾಬಾದ್‌ನ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯ ಸಿಕ್ರೋಡ್ ಬಳಿ ಮಿನಿ ಟ್ರಕ್ 10 ವರ್ಷದ ಬಾಲಕನ ಮೇಲೆ ಹರಿದಿದ್ದು, ಕನಿಷ್ಠ ಮೂರು ಕಾರುಗಳನ್ನು ಜಖಂಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂಭವಿಸಿದಾಗ ಹುಡುಗ ಮತ್ತು ಅವನ ಸ್ನೇಹಿತರು ಎಕ್ಸ್‌ಪ್ರೆಸ್‌ವೇನಲ್ಲಿ ನಡೆದುಕೊಂಡು ಹೋಗುತ್ತಿದ್ದರು.

ಗಾಜಿಯಾಬಾದ್-ಮೀರತ್ ಕಡೆಯಿಂದ ವೇಗವಾಗಿ ಬಂದ ಟ್ರಕ್, 4 ನೇ ತರಗತಿಯ ವಿದ್ಯಾರ್ಥಿ ಮತ್ತು ಸಿಕ್ರೋಡ್ ನಿವಾಸಿ ಮೊಹಮ್ಮದ್ ಸಮದ್ ಎಂಬ ಬಾಲಕನ ಮೇಲೆ ಹರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ: ಶಾಲಾ ವಿದ್ಯಾರ್ಥಿಗಳೆದುರೇ ವ್ಯಕ್ತಿಗೆ ಕಲ್ಲಿನಿಂದ ಜಜ್ಜಿ, ಟೈಲ್ಸ್​​ನಿಂದ ಹೊಡೆದು ಹಲ್ಲೆ

ಈ ವೇಳೆ ಬಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದು ವಾಹನ ಚಾಲಕ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ಬಿದ್ದಿದ್ದ ಹುಡುಗನನ್ನು ಕಂಡು ಮೀರತ್‌ಗೆ ಹೊರಟಿದ್ದ ಇನ್ನೊಂದು ಕಾರು ನೋಡಲು ನಿಲ್ಲಿಸಿತು. ಅದರ ಚಾಲಕ ಏಕಾಏಕಿ ಬ್ರೇಕ್ ಹಾಕಿದಾಗ ಹಿಂದೆ ಬರುತ್ತಿದ್ದ ಇನ್ನೆರಡು ಕಾರುಗಳು ಎದುರಿನ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಮೂರು ಕಾರುಗಳಿಗೆ ಹಾನಿಯಾಗಿದೆ ಆದರೆ ಅವರ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಮಸೂರಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ನರೇಶ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 6:40 pm, Sat, 2 December 23