AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ: ಶಾಲಾ ವಿದ್ಯಾರ್ಥಿಗಳೆದುರೇ ವ್ಯಕ್ತಿಗೆ ಕಲ್ಲಿನಿಂದ ಜಜ್ಜಿ, ಟೈಲ್ಸ್​​ನಿಂದ ಹೊಡೆದು ಹಲ್ಲೆ

ಶಾಲೆ ವಿದ್ಯಾರ್ಥಿಗಳು ನೋಡುತ್ತಿದ್ದಂತೆಯೇ ಅವರ ಮುಂದೆ ಇಬ್ಬರು ವ್ಯಕ್ತಿಗಳು ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿಕೊಂಡು ಬಂದು ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ದೂರು ಸ್ವೀಕರಿಸಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ದೆಹಲಿ: ಶಾಲಾ ವಿದ್ಯಾರ್ಥಿಗಳೆದುರೇ ವ್ಯಕ್ತಿಗೆ ಕಲ್ಲಿನಿಂದ ಜಜ್ಜಿ, ಟೈಲ್ಸ್​​ನಿಂದ ಹೊಡೆದು ಹಲ್ಲೆ
ದೆಹಲಿ ಅಪರಾಧದ ದೃಶ್ಯ
Follow us
ರಶ್ಮಿ ಕಲ್ಲಕಟ್ಟ
|

Updated on: Dec 02, 2023 | 6:19 PM

ದೆಹಲಿ ಡಿಸೆಂಬರ್ 02: ದೆಹಲಿ (Delhi) ಆದರ್ಶ ನಗರದಲ್ಲಿ (Adarsh Nagar) ಇಬ್ಬರು ವ್ಯಕ್ತಿಗಳನ್ನು ಬೆನ್ನಟ್ಟಿ ಕಲ್ಲು ಮತ್ತು ಚಾಕುವಿನಿಂದ ಥಳಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ಒಬ್ಬ ವ್ಯಕ್ತಿಯನ್ನು ಇಬ್ಬರು ವ್ಯಕ್ತಿಗಳು ಹಿಂಬಾಲಿಸುತ್ತಿರುವುದು ವಿಡಿಯೊದಲ್ಲಿದ್ದು, ಮುಂದೆ ಓಡುತ್ತಿದ್ದ ವ್ಯಕ್ತಿ ತನ್ನ ಮನೆಯ ಮುಂದೆ ಬಿದ್ದಾಗ ಆ ಇಬ್ಬರು ವ್ಯಕ್ತಿಗಳು ಆತನನ್ನು ಹಿಡಿಯುತ್ತಾರೆ. ಅಲ್ಲಿ ಅವರು ಆ ವ್ಯಕ್ತಿ ಮೇಲೆ ಗಂಭೀರ ಹಲ್ಲೆ ನಡೆಸುತ್ತಾರೆ. ಮತ್ತೊಬ್ಬ ದಾಳಿಕೋರ, ಚಾಕುನಲ್ಲಿ ಇರಿಯಲು ಪ್ರಯತ್ನಿಸಿದಾಗ ಮತ್ತೊಬ್ಬ ಆತನನ್ನು ತಡೆಯುವುದು ಕಾಣುತ್ತದೆ.

ನಂತರ ಇಬ್ಬರೂ ಪಕ್ಕದಲ್ಲಿ ಬಿದ್ದಿರುವ ಕಲ್ಲುಗಳು, ಟೈಲ್ಸ್ ಎತ್ತಿಕೊಂಡು ಸಂತ್ರಸ್ತನಿಗೆ ಹೊಡೆಯಲು ಶುರು ಮಾಡುತ್ತಾರೆ. ವಿದ್ಯಾರ್ಥಿಗಳು ಮನೆಗೆ ತೆರಳುತ್ತಿದ್ದ ವೇಳೆ ಶಾಲೆಯ ಬಳಿ ಈ ಘಟನೆ ನಡೆದಿದೆ. ವ್ಯಕ್ತಿಯನ್ನು ಹೊಡೆಯುತ್ತಿರುವಾಗ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸೇರುತ್ತಾರೆ. ಆದರೆ ನೆರೆಹೊರೆಯವರು ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ದೂರು ಸ್ವೀಕರಿಸಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಸಂತ್ರಸ್ತನ ಕುಟುಂಬದಿಂದ ದೂರು ಬಂದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಉಪ ಆಯುಕ್ತ ಜಿತೇಂದ್ರ ಮೀನಾ ಹೇಳಿದ್ದಾರೆ.

ಇಂಥದ್ದೇ ಇನ್ನೊಂದು ಘಟನೆ ದೆಹಲಿಯಿಂದ ವರದಿ ಆಗಿದೆ. ಆಗ್ನೇಯ ದೆಹಲಿಯ ಸನ್‌ಲೈಟ್‌ ಕಾಲೋನಿಯಲ್ಲಿ ರಾತ್ರಿ ವೇಳೆ ಮಣಿಪುರದ  ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರ ಮೇಲೆ ಎಂಟು-ಒಂಬತ್ತು ಜನರ ಗುಂಪೊಂದು ರಸ್ತೆಯಲ್ಲಿ ಹಲ್ಲೆ ನಡೆಸಿದೆ. ಗುರುವಾರ ನಡೆದ ಘಟನೆಯನ್ನು ರಸ್ತೆಯ ಬಾಲ್ಕನಿಯಲ್ಲಿ ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ. ಶುಕ್ರವಾರ ರಾತ್ರಿ ಹಲವಾರು ಅಪರಿಚಿತ ಆರೋಪಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (FIR) ದಾಖಲಿಸಲಾಗಿದೆ ಎಂದು ಸನ್‌ಲೈಟ್ ಕಾಲೋನಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್‌ಡಿಟಿವಿ ಎಫ್‌ಐಆರ್ ಪ್ರತಿಯನ್ನು ನೋಡಿದ್ದು ಆರೋಪಗಳಲ್ಲಿ ಲೈಂಗಿಕ ದೌರ್ಜನ್ಯವೂ ಸೇರಿದೆ ಎಂದು ವರದಿ ಮಾಡಿದೆ.

ಇದನ್ನೂ ಓದಿ: ಕೆಆರ್​ ಪುರಂ ಠಾಣೆ PSI ಪಿಸ್ತೂಲ್ ಕಳವು ಮಾಡಿದ್ದ 3 ಆರೋಪಿಗಳ ಬಂಧನ

ಶುಕ್ರವಾರ ತಡರಾತ್ರಿ ಎಫ್‌ಐಆರ್ ದಾಖಲಿಸಿದ ನಂತರ ದೂರುದಾರರು ಸನ್‌ಲೈಟ್ ಕಾಲೋನಿ ಪೊಲೀಸ್ ಠಾಣೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರು ಆರೋಪಿಗಳ ಮುಖಗಳು ಸ್ಪಷ್ಟವಾಗಿ ಕಂಡುಬರುತ್ತವೆ ಎಂದಿದ್ದಾರೆ. ಮೊಬೈಲ್ ದೃಶ್ಯಗಳಲ್ಲಿ ಒಬ್ಬ ಪುರುಷ, ಅವನ ಹೆಂಡತಿ, ಅವನ ಸಹೋದರಿ ಮತ್ತು ಕುಟುಂಬದ ಸ್ನೇಹಿತ ಈ ನಾಲ್ವರಿಗೆ ಜನರ ಮೇಲೆ ಗುಂಪೊಂದು ಹಲ್ಲೆ ನಡೆಸುತ್ತಿರುವುದನ್ನು ತೋರಿಸುತ್ತದೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ