Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಆರ್​ ಪುರಂ ಠಾಣೆ PSI ಪಿಸ್ತೂಲ್ ಕಳವು ಮಾಡಿದ್ದ 3 ಆರೋಪಿಗಳ ಬಂಧನ

ಕೆ.ಆರ್.ಪುರಂ ಠಾಣೆ ಪಿಎಸ್​ಐ ಕಲ್ಲಪ್ಪ ಪಿಸ್ತೂಲ್​​ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿಲಾಗಿದೆ. 1 ಪಿಸ್ತೂಲ್, 10 ಗುಂಡು ವಶಕ್ಕೆ ಪಡೆಯಲಾಗಿದ್ದು, 3 ಜನ ಆರೋಪಿಗಳ ವಿಚಾರಣೆ ಮಾಡಲಾಗುತ್ತಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಠಾಣೆ ಪೊಲೀಸರ ಕಾರ್ಯಾಚರಣೆ ಮಾಡಿ ನಾಲ್ವರು ಕಳ್ಳರನ್ನು ಬಂಧಿಸಲಾಗಿದೆ.

ಕೆಆರ್​ ಪುರಂ ಠಾಣೆ PSI ಪಿಸ್ತೂಲ್ ಕಳವು ಮಾಡಿದ್ದ 3 ಆರೋಪಿಗಳ ಬಂಧನ
ಪ್ರಾತಿನಿಧಿಕ ಚಿತ್ರ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 02, 2023 | 3:07 PM

ಚಿತ್ರದುರ್ಗ, ಡಿಸೆಂಬರ್​​​ 02: ಕೆ.ಆರ್.ಪುರಂ ಠಾಣೆ (KR Puram police) ಪಿಎಸ್​ಐ ಕಲ್ಲಪ್ಪ ಪಿಸ್ತೂಲ್​​ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿಲಾಗಿದೆ. 1 ಪಿಸ್ತೂಲ್, 10 ಗುಂಡು ವಶಕ್ಕೆ ಪಡೆಯಲಾಗಿದ್ದು, 3 ಜನ ಆರೋಪಿಗಳ (ಆರೋಪಿಗಳ ಹೆಸರು ಈವರೆಗೆ ತಿಳಿದು ಬಂದಿಲ್ಲ) ವಿಚಾರಣೆ ಮಾಡಲಾಗುತ್ತಿದೆ. ಹೊಳಲ್ಕೆರೆ ತಾಲೂಕಿನ ಗುಂಡೇರಿ ಗ್ರಾಮದವರು ಎಂದು ಪೊಲೀಸ್ ಮೂಲಗಳಿಂದ ಟಿವಿ9ಗೆ ಮಾಹಿತಿ ನೀಡಲಾಗಿದೆ.

ನಿನ್ನೆ ಚಿತ್ರದುರ್ಗ ತಾಲೂಕಿನ ಜಾನಕೊಂಡ ಗ್ರಾಮ ಬಳಿಯ ರೆಸ್ಟೋರೆಂಟ್​ನಲ್ಲಿ ಪಿಸ್ತೂಲ್​ ಕಳ್ಳತನವಾಗಿತ್ತು. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಶಿವಮೊಗ್ಗದಿಂದ ಬೆಂಗಳೂರಿಗೆ PSI ಕಲ್ಲಪ್ಪ ತೆರಳುತ್ತಿದ್ದರು. ಮಾರ್ಗಮಧ್ಯೆ ರೆಸ್ಟೋರೆಂಟ್​ಗೆ ಊಟಕ್ಕೆ ತೆರಳಿದ್ದಾಗ ಪಿಸ್ತೂಲ್​ ಕದ್ದೊಯ್ದಿದ್ದರು.

ನಾಲ್ವರು ಕಳ್ಳರ ಬಂಧನ

ಮತ್ತೊಂದು ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಠಾಣೆ ಪೊಲೀಸರ ಕಾರ್ಯಾಚರಣೆ ಮಾಡಿ ನಾಲ್ವರು ಕಳ್ಳರನ್ನು ಬಂಧಿಸಲಾಗಿದೆ. 2.50ಲಕ್ಷ ರೂ. ಮೌಲ್ಯದ 40 ಮೊಬೈಲ್ ಟವರ್ ಬ್ಯಾಟರಿಗಳು, ಕೃತ್ಯಕ್ಕೆ ಬಳಸಿದ್ದ ಬೊಲೆರೊ ವಾಹನ, 4 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಚಳ್ಳಕೆರೆ ಮೂಲದ ವೆಂಕಟೇಶ, ಮಂಜುನಾಥ್, ತಿಪ್ಪೇಸ್ವಾಮಿ, ಬೆಂಗಳೂರಿನ ಎಂ.ದೊರೈ ಬಂಧಿತರು. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮಕ್ಕಳಾಗಿಲ್ಲವೆಂದು ಮನನೊಂದು ನೀರಿನ ಸಂಪ್‌ಗೆ ಬಿದ್ದು ಗೃಹಿಣಿ ಆತ್ಮಹತ್ಯೆ

ನೆಲಮಂಗಲ: ಮಕ್ಕಳಾಗಿಲ್ಲವೆಂದು ಮನನೊಂದು ನೀರಿನ ಸಂಪ್‌ಗೆ ಬಿದ್ದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾ. ಜಿಲ್ಲೆ ನೆಲಮಂಗಲ ತಾಲೂಕಿನ ವೀರ ರಾಘವನಪಾಳ್ಯದಲ್ಲಿ ನಡೆದಿದೆ. ಗೃಹಿಣಿ ಸವಿತಾ(38) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. 12 ವರ್ಷದ ಹಿಂದೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೆರೆಗೂಡಿನ ಗ್ರಾಮದ ರವಿಕುಮಾರ್ ಜತೆ ಮದುವೆಯಾಗಿತ್ತು.

ಇದನ್ನೂ ಓದಿ: ಮಂಡ್ಯ ಆರೋಗ್ಯ ಇಲಾಖೆ ಅಧಿಕಾರಿ ನಟರಾಜ್ ಬೆಂಗಳೂರಿನಲ್ಲಿ ನೇಣುಬಿಗಿದು ಆತ್ಮಹತ್ಯೆ

ಕಳೆದ ಎರಡು ವರ್ಷಗಳಿಂದ ನೆಲಮಂಗಲದಲ್ಲಿ ದಂಪತಿ ವಾಸವಿದ್ದರು. ಪತಿ ಬಳಿ ಮಕ್ಕಳಿಲ್ಲದ ವಿಷಯ ಪದೇಪದೆ ಪ್ರಸ್ತಾಪ ಮಾಡುತ್ತಿದ್ದ ಸವಿತಾ, ಇಂದು ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

 ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ 

ಕಾರವಾರ: ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪದ್ಮನಾಭ ನಗರದಲ್ಲಿ ನಡೆದಿದೆ. ಅಜಯ್ ಕಾಮತ್ ( 39) ಆತ್ಮಹತ್ಯೆ ಮಾಡಿಕೊಂಡ ಯುವಕ. ಬಿಣಗಾದ ಆದಿತ್ಯ ಬಿರ್ಲಾ ಕಂಪನಿಯಲ್ಲಿ ಅಜಯ್ ಕೆಲಸ ಮಾಡುತ್ತಿದ್ದರು. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.