ಹರ್ಯಾಣ ಕೆಮಿಕಲ್ ಘಟಕದಲ್ಲಿ ಭಾರೀ ಬೆಂಕಿ; ದೆಹಲಿಯಿಂದ ದೌಡಾಯಿಸಿದ ಅಗ್ನಿಶಾಮಕ ದಳ

| Updated By: ರಶ್ಮಿ ಕಲ್ಲಕಟ್ಟ

Updated on: Apr 17, 2022 | 9:23 PM

ಹರ್ಯಾಣದ ವಿಶೇಷ ಕೋರಿಕೆಯ ಮೇರೆಗೆ, ದೆಹಲಿ ಅಗ್ನಿಶಾಮಕ ಸೇವೆಯು ತನ್ನ ಅಗ್ನಿಶಾಮಕ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ಕಳುಹಿಸಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಹರ್ಯಾಣ ಕೆಮಿಕಲ್ ಘಟಕದಲ್ಲಿ ಭಾರೀ ಬೆಂಕಿ; ದೆಹಲಿಯಿಂದ ದೌಡಾಯಿಸಿದ ಅಗ್ನಿಶಾಮಕ ದಳ
ಕೆಮಿಕಲ್ ಘಟಕದಲ್ಲಿ ಬೆಂಕಿ
Follow us on

ಹರ್ಯಾಣದ (Haryana) ಸೋನಿಪತ್‌ನ ಕುಂಡ್ಲಿ (Kundli)  ಪ್ರದೇಶದಲ್ಲಿ ರಾಸಾಯನಿಕ ಘಟಕದಲ್ಲಿ (chemical plant) ಭಾನುವಾರ ಸಂಜೆ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಹರ್ಯಾಣದ ವಿಶೇಷ ಕೋರಿಕೆಯ ಮೇರೆಗೆ, ದೆಹಲಿ ಅಗ್ನಿಶಾಮಕ ಸೇವೆಯು ತನ್ನ ಅಗ್ನಿಶಾಮಕ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ಕಳುಹಿಸಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮುಂಬೈನ ನಲಸೋಪರದ ಪಾಂಡೆ ನಗರ ಪ್ರದೇಶದ ಗೋಡೌನ್‌ನಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ಕಾರ್ಯಾಚರಣೆ ನಡೆಯುತ್ತಿದ್ದು ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಳೆದ ತಿಂಗಳು, ಮುಂಬೈ ಅಗ್ನಿಶಾಮಕ ದಳದ ಪ್ರಕಾರ ಮಾರ್ಚ್ 29 ರ ಸಂಜೆ ಮುಂಬಾದೇವಿ ದೇವಸ್ಥಾನದ ಬಳಿಯ ಪಟೇಲ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಐದು ಜನರು ಗಾಯಗೊಂಡಿದ್ದರು. ಭಾನುವಾರ ಗ್ರೀನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ನವದೆಹಲಿಯ ಉಪಹಾರ್ ಸಿನಿಮಾ ಹಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲು ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಸಿನಿಮಾ ಹಾಲ್‌ನಲ್ಲಿದ್ದ ಪೀಠೋಪಕರಣಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.


ಜೂನ್ 13, 1997 ರಂದು, ಜೆಪಿ ದತ್ತಾ ಅವರ ‘ಬಾರ್ಡರ್’ ಚಲನಚಿತ್ರ ಪ್ರದರ್ಶನದ ಸಂದರ್ಭದಲ್ಲಿ ಉಪಹಾರ್ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಉಸಿರುಕಟ್ಟುವಿಕೆಯಿಂದ ಕನಿಷ್ಠ 59 ಜನರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಇದನ್ನೂ ಓದಿಶ್ರೀರಾಮನ ಹೆಸರಿನಲ್ಲಿ ಕೋಮುವಾದದ ಬೆಂಕಿ ಹಚ್ಚುವುದು ರಾಮನ ಕಲ್ಪನೆಗೆ ಮಾಡಿದ ಅವಮಾನ: ಸಂಜಯ್ ರಾವತ್

Published On - 9:06 pm, Sun, 17 April 22