Bihar: 8ನೇ ತರಗತಿ ಬಾಲಕಿಗೆ 13 ಸೆಕೆಂಡ್​ಗಳಲ್ಲಿ 8ಬಾರಿ ಚಾಕುವಿನಿಂದ ಇರಿದ ಯುವಕ; ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ

| Updated By: Lakshmi Hegde

Updated on: Dec 23, 2021 | 3:56 PM

ಘಟನೆ ನಡೆದ ಜಾಗದಲ್ಲಿದ್ದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಬಾಲಕಿಗೆ ಚಾಕು ಹಾಕುತ್ತಿರುವ ಯುವಕನನ್ನು ಆತನ ಜತೆಗಿದ್ದ ಇನ್ನೊಬ್ಬಾತ ಹಿಡಿದು ಎಳೆಯುತ್ತಾನೆ. ಹಾಗಿದ್ದಾಗ್ಯೂ ಕೂಡ ಅವನು ತನ್ನ ಕೃತ್ಯ ನಿಲ್ಲಿಸಲಿಲ್ಲ.

Bihar: 8ನೇ ತರಗತಿ ಬಾಲಕಿಗೆ 13 ಸೆಕೆಂಡ್​ಗಳಲ್ಲಿ 8ಬಾರಿ ಚಾಕುವಿನಿಂದ ಇರಿದ ಯುವಕ; ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ
ಬಾಲಕಿಗೆ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದ ಯುವಕ
Follow us on

8 ನೇ ತರಗತಿ ಹುಡುಗಿಯೊಬ್ಬಳಿಗೆ ಯುವಕನೊಬ್ಬ 13 ಸೆಕೆಂಡ್​ಗಳಲ್ಲಿ 8 ಬಾರಿ ಇರಿದ ಘಟನೆ ಬಿಹಾರದ ಗೋಪಾಲಗಂಜ್​​ನಲ್ಲಿ ನಡೆದಿದೆ. ಯುವಕ ತುಂಬ ದಿನಗಳಿಂದಲೂ ಬಾಲಕಿಯನ್ನು ಹಿಂಬಾಲಿಸುತ್ತಲೇ ಇದ್ದ. ದೌರ್ಜನ್ಯವನ್ನು ಎಸಗುತ್ತಿದ್ದ. ಆದರೆ ಬಾಲಕಿ ಅದನ್ನ ಪ್ರತಿರೋಧಿಸುತ್ತಲೇ ಬಂದಿದ್ದಳು. ಆದರೆ, ಡಿ.19ರಂದು ಯುವಕ ಬಾಲಕಿಯನ್ನು ಚಾಕುವಿನಿಂದ ಇರಿದು ಕ್ರೌರ್ಯ ತೋರಿದ್ದಾನೆ.

ಅಂದು ಬಾಲಕಿ, ಇಬ್ಬರು ಸ್ನೇಹಿತರೊಂದಿಗೆ ಮನೆಗೆ ಎಲ್ಲಿಗೋ ಹೋಗಿದ್ದವಳು ಮನೆಗೆ ವಾಪಸ್​ ಬರುತ್ತಿದ್ದಳು. ಈ ಯುವಕ ತನ್ನಿಬ್ಬರು ಸಹಾಯಕರೊಂದಿಗೆ ಆಕೆ ಬರುವ ರಸ್ತೆಯಲ್ಲೇ ಅಡಗಿಕುಳಿತಿದ್ದ.  ಬಾಲಕಿಯನ್ನು ಕಾಣುತ್ತಿದ್ದಂತೆ, ಒಮ್ಮೆಲೇ ಬಂದು ಚಾಕುವಿನಿಂದ ದಾಳಿ ಮಾಡಿದ್ದಾನೆ. ಒಂದು ಬಾರಿ ಅಲ್ಲ, 13 ಸೆಕೆಂಡ್​ಗಳಲ್ಲಿ ಒಟ್ಟು ಎಂಟು ಬಾರಿ ಆಕೆಗೆ ಚಾಕು ಹಾಕಿದ್ದಾನೆ ಎಂದು ಹೇಳಲಾಗಿದೆ. ಬಾಲಕಿಯ ಪರಿಸ್ಥಿತಿ ಗಂಭೀರವಾಗಿದ್ದು ಮೊದಲು ಗೋಪಾಲಗಂಜ್​ನ ಸಾದರ್​​  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಸಾಧ್ಯವಾಗದೆ ಪಾಟ್ನಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನೆ ನಡೆದ ಜಾಗದಲ್ಲಿದ್ದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಬಾಲಕಿಗೆ ಚಾಕು ಹಾಕುತ್ತಿರುವ ಯುವಕನನ್ನು ಆತನ ಜತೆಗಿದ್ದ ಇನ್ನೊಬ್ಬಾತ ಹಿಡಿದು ಎಳೆಯುತ್ತಾನೆ. ಹಾಗಿದ್ದಾಗ್ಯೂ ಕೂಡ ಅವನು ತನ್ನ ಕೃತ್ಯ ನಿಲ್ಲಿಸಲಿಲ್ಲ. ಬಾಲಕಿಯನ್ನು ಇರಿದಿದ್ದಾನೆ. ಸಿಸಿಟಿವಿ ಫೂಟೇಜ್ ಆಧರಿಸಿ ಪೊಲೀಸರು ಯುವಕನನ್ನ ಬಂಧಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಮೂವರು ಬಾಲಕಿಯರು ಬ್ಯಾಗ್​ ಹಾಕಿಕೊಂಡು ಹೋಗುತ್ತಿರುತ್ತಾರೆ. ಅಲ್ಲೇ ಬದಿಯಲ್ಲಿ ಮೂವರು ಯುವಕರು ನಿಂತಿರುತ್ತಾರೆ. ಅದರಲ್ಲೊಬ್ಬಾತ ಓಡಿ ಬಂದು ಈ ಬಾಲಕಿಗೆ ಮೊದಲು ಕೆನ್ನೆಗೆ ಹೊಡೆಯುತ್ತಾನೆ. ಅಷ್ಟರಲ್ಲಿ ಆಕೆಯ ಜತೆಗಿರುವ ಇಬ್ಬರು ಹುಡುಗಿಯರು ಓಡಿ ಹೋಗುತ್ತಾರೆ. ಆಗ ಆ ಹುಡುಗ ಚಾಕುವಿನಿಂದ ಬಾಲಕಿಗೆ ಇರಿಯುತ್ತಾನೆ. ಆತನ ಜತೆಗಿದ್ದ ಇಬ್ಬರೂ ಅವನನ್ನು ಎಳೆದರೂ ಆತ ಬರುವುದಿಲ್ಲ. ನಂತರ ಅಲ್ಲಿಗೊಬ್ಬ ಮಹಿಳೆ ಬರುತ್ತಾಳೆ..ಕೂಡಲೇ ಯುವಕರು ಓಡಿ ಹೋಗುತ್ತಾರೆ. ನಂತರ ಒಬ್ಬರಾದ ಬಳಿಕ ಇನ್ನೊಬ್ಬರು ಅಲ್ಲಿ ಸೇರಿ ಗುಂಪುಗೂಡುತ್ತಾರೆ. ಅಷ್ಟರಲ್ಲಿ ಬಾಲಕಿ ಕೂಡ ಎಚ್ಚರ ತಪ್ಪಿ ಬೀಳುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: ಮುಂಬರುವ ಶೈಕ್ಷಣಿಕ ವರ್ಷದಿಂದ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಸೆಲ್ಪ್ ಡಿಫೆನ್ಸ್ ತರಬೇತಿ

Published On - 3:52 pm, Thu, 23 December 21